ಐಫೋನ್ ಹ್ಯಾಕ್​ ಮಾಡಿದರೆ ಸಿಗಲಿದೆ 7 ಕೋಟಿ ರೂ. ಉಡುಗೊರೆ!

ಐಫೋನ್​ ಸಾಫ್ಟವೇರ್​​ ದೋಷಗಳು ಮತ್ತು ಹ್ಯಾಕ್​ ಮಾಡುವ ತಂತ್ರಜ್ನಾನವನ್ನು ಪತ್ತೆ ಮಾಡುವ ಸಲುವಾಗಿ ಆ್ಯಪಲ್​ ಸಂಸ್ಥೆ ಈ ಯೋಜನೆಯನ್ನು ಕೈಗೊಂಡಿದೆ.

news18
Updated:August 13, 2019, 2:53 PM IST
ಐಫೋನ್ ಹ್ಯಾಕ್​ ಮಾಡಿದರೆ ಸಿಗಲಿದೆ 7 ಕೋಟಿ ರೂ. ಉಡುಗೊರೆ!
ಆ್ಯಪಲ್
  • News18
  • Last Updated: August 13, 2019, 2:53 PM IST
  • Share this:
ಇತ್ತೀಚೆಗೆ ಲಾಸ್​ ವೇಗಸ್​ನಲ್ಲಿ ನಡೆದ ವಾರ್ಷಿಕ ‘ಬ್ಲ್ಯಾಕ್​ ಹ್ಯಾಟ್​ ಹ್ಯಾಕರ್‘ ಸಮವೇಶದಲ್ಲಿ ಜನಪ್ರಿಯ ಮೊಬೈಲ್​ ಸಂಸ್ಥೆಯಾದ ಆ್ಯಪಲ್​ ಭರ್ಜರಿ ಕೊಡುಗೆಯನ್ನು ನೀಡಿದೆ. ಯಾರಾದರೂ ಐಫೋನ್​ ಅನ್ನು ಹ್ಯಾಕ್​ ಮಾಡಲು ಸಾಧ್ಯವಾದರೆ ಆ್ಯಪಲ್​ ಕಂಪೆನಿ ಒಂದು ಮಿಲಿಯನ್​ ಡಾಲರ್​ ಕೊಡುಗೆಯನ್ನು ನೀಡುವುದಾಗಿ ಹೇಳಿದೆ.

ಐಫೋನ್​ ಸಾಫ್ಟವೇರ್​​ ದೋಷಗಳು ಮತ್ತು ಹ್ಯಾಕ್​ ಮಾಡುವ ತಂತ್ರಜ್ನಾನವನ್ನು ಪತ್ತೆ ಮಾಡುವ ಸಲುವಾಗಿ ಆ್ಯಪಲ್​ ಸಂಸ್ಥೆ ಈ ಯೋಜನೆಯನ್ನು ಕೈಗೊಂಡಿದೆ. ಆ್ಯಪಲ್​ ಬಗ್​ ಬೌಂಟಿ ಕಾರ್ಯಕ್ರಮದಲ್ಲಿ ಈ ಆಫರ್​ ನೀಡಿದ್ದು, ತನ್ನ ವ್ಯವಸ್ಥೆಯಲ್ಲಿನ ದೋಷಗಳನ್ನು ಕಂಡು ಹಿಡಿಯಲು ಆ್ಯಪಲ್​ ನೀಡಿರುವ ಚಾಲೆಂಜ್​ ಇದಾಗಿದೆ.

ಇದನ್ನೂ ಓದಿ: ವೆಸ್ಟ್​ ಇಂಡೀಸ್ ಆಟಗಾರರ ಜೊತೆ ಬೋಟ್​ನಲ್ಲಿ ಕಾಣಿಸಿಕೊಂಡ ರೋಹಿತ್, ಧವನ್, ಐಯರ್!

ಆ್ಯಪಲ್​ ಸಂಸ್ಥೆ ಉತ್ಪಾದಿತ ಐಫೋನ್​ ಹಾಗೂ ಇತರೆ ಸಾಧನಗಳ ಸುರಕ್ಷತೆಯನ್ನು ಗ್ರಾಹಕರಿಗೆ ತಿಳಿಸುವ ನಿಟ್ಟಿನಲ್ಲಿ ಈ ಯೋಚನೆಗೆ ಮುಂದಾಗಿದೆ. ಜೊತೆಗೆ ಆ್ಯಪಲ್​ ಎಷ್ಟು ಸುರಕ್ಷಿತ ಎಂದು ವಿಶ್ವದಾದ್ಯಂತ ಗ್ರಾಹಕರಿಗೆ ತಿಳಿಸುವ ಸಲುವಾಗಿ ದುಬಾರಿ ಬೆಲೆಯ ಕೊಡುಗೆಯ ಮೂಲಕ ಬಗ್​ ಬೌಂಟಿ ಟ್ರಿಕ್ಸ್​ ಉಪಯೋಗಿಸುತ್ತಿದೆ.
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...