ಆ್ಯಪಲ್​ ಪ್ರಿಯರಿಗೆ ಸಿಹಿ ಸುದ್ದಿ; 15 ಸಾವಿರಕ್ಕೆ ಮಾರುಕಟ್ಟೆಗೆ ಬರಲಿದೆ ಹೊಸ ಐಫೋನ್​..!

2016ರಲ್ಲಿ ಐಫೋನ್​ SE ಹೆಸರಿನಲ್ಲಿ ಕಡಿಮೆ ವೆಚ್ಚದ ​ಫೋನ್​ ಅನ್ನು ಬಿಡುಗಡೆ ಮಾಡಿತ್ತು.

news18-kannada
Updated:September 7, 2019, 5:26 PM IST
ಆ್ಯಪಲ್​ ಪ್ರಿಯರಿಗೆ ಸಿಹಿ ಸುದ್ದಿ; 15 ಸಾವಿರಕ್ಕೆ ಮಾರುಕಟ್ಟೆಗೆ ಬರಲಿದೆ ಹೊಸ ಐಫೋನ್​..!
ಐಫೋನ್​
  • Share this:
ಆ್ಯಪಲ್​ ಕಂಪೆನಿ ತಯಾರಿಸಿದ ಐಫೋನ್​ ಸರಣಿ ಫೋನ್​​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸೆ. 10 ರಂದು ನಡೆಯುವ ಕಾರ್ಯಕ್ರಮವೊಂದರಲ್ಲಿ ಆ್ಯಪಲ್​​ ಕಂಪೆನಿ ನೂತನ ಫೋನ್​​ಗಳಾದ​ ಐಫೋನ್​ 11, ಐಫೋನ್​ 11 ಪ್ರೊ, ಐಫೋನ್​ 11 ಪ್ರೊ ಮ್ಯಾಕ್ಸ್ ಅನ್ನು​ ಬಿಡುಗಡೆ ಮಾಡಲಿದೆ. ಈ ಮಧ್ಯೆ ಗ್ರಾಹಕರಿಗೆ ಆ್ಯಪಲ್​ ಕಂಪೆನಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ​ಫೋನ್​ವೊಂದನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಆದರೆ ಈ ​ಫೋನ್​ ಅನ್ನು 2020ರ ವೇಳೆಗೆ ಮಾರುಕಟ್ಟೆಗೆ ಪರಿಚಯಿಸುವುದಾಗಿ ಕಂಪೆನಿ ಹೇಳಿದೆ.

ಬಹು ಬೇಡಿಕೆಯ ಮತ್ತು ಹೆಚ್ಚು ಬಳಕೆಯ ಫೋನ್​ಗಳಲ್ಲಿ ಆ್ಯಪಲ್​ ಕೂಡ ಒಂದು. ಇಂದಿನ ಯುವ ಪೀಳಿಗೆ ಆ್ಯಪಲ್​ ಉತ್ಪನ್ನಗಳನ್ನು ಹೆಚ್ಚು ಬಳಸುತ್ತಾರೆ. 2016ರಲ್ಲಿ ಐಫೋನ್​ SE ಹೆಸರಿನಲ್ಲಿ ಕಡಿಮೆ ವೆಚ್ಚದ ​ಫೋನ್​ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಅದಕ್ಕಿಂತಲೂ ಕಡಿಮೆ ದರದಲ್ಲಿ ನೂತನ ಐಫೋನ್​ ಅನ್ನು ತಯಾರಿಸುತ್ತಿದೆ.

ಐಫೋನ್​ ಕಡಿಮೆ ಬೆಲೆಯಲ್ಲಿ ತಯಾರಿಸುತ್ತಿರುವ ನೂತನ ಮಾದರಿಗೆ ಹೆಸರನ್ನು ನಿರ್ಧರಿಸಲಾಗಿಲ್ಲ, ಆದರೆ 4ನೇ ಜನರೇಷನ್​ಗೆ ತಕ್ಕಂತೆ ತಯಾರಿಸಲಾಗುತ್ತಿದೆ. ನೂತನ ಫೋನ್​ ಐಫೋನ್​ SE ಮಾದರಿಯಲ್ಲಿರಲಿದೆ ಎಂದು ನಿಕ್ಕಿ ಏಷ್ಯನ್​ ರಿವ್ಯೂ ವರದಿ ಮಾಡಿದೆ.

ಇದನ್ನೂ ಓದಿ: Jio Gigafiber Effect: ವೊಡಾಫೋನ್ ‘ಯೂ ಬ್ರಾಡ್​​ಬ್ಯಾಂಡ್​‘ ಸೇವೆಯಲ್ಲಿ ಬದಲಾವಣೆ

ಆ್ಯಪಲ್​ ಕಂಪೆನಿ ನೂತನ ಸ್ಮಾರ್ಟ್​ಫೋನ್​ ಬೆಲೆ 15,000 ದಿಂದ 30,000 ರೂ. ವರೆಗೆ  ಇರಲಿದೆ ಎಂದು ತಿಳಿಸಿದೆ. ಈ ಮೂಲಕ ಮಧ್ಯಮ ಶ್ರೇಣಿಯ ಜನರಲ್ಲೂ ಐಫೋನ್​ ಬಳಕೆಯನ್ನು ಹೆಚ್ಚಸಿಲಿದೆ. ಜೊತೆಗೆ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಸ್ಮಾರ್ಟ್​ಫೋನ್​ ಕಂಪೆನಿಗಳಿಗೆ ಪೈಪೋಟಿ ನೀಡಲಿದೆ.

First published:September 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ