HOME » NEWS » Tech » APPLE MAY STOP IPHONE 12 MINI PRODUCTION IN Q2 2021 DUE TO POOR SALES HG

iPhone 12 Mini: ಐಫೋನ್​ 12 ಮಿನಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಆ್ಯಪಲ್​ ಕಂಪೆನಿ?

2021ರ ಎರಡನೇ ತ್ರೈಮಾಸಿಕ ವೇಳೆಗೆ ಐಫೋನ್​​ 12 ಮಿನಿಯನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಾಗುತ್ತಿದೆ. ಆ್ಯಪಲ್​ ಸಂಸ್ಥೆ 5.4 ಇಂಚಿನ ಐಫೊನ್​ ಮಿನಿ ಹೊರತುಪಡಿಸಿ 6.10-ಇಂಚಿ ಐಫೋನ್​ 12 ಮತ್ತು 12 ಪ್ರೊ ಹಾಗೂ 6.70 ಇಂಚಿನ ಐಫೋನ್​ 12 ಪ್ರೊ ಮ್ಯಾಕ್ಸ್​​ ಅನ್ನು 2020 ಅಕ್ಟೋಬರ್​ ತಿಂಗಳಿನಲ್ಲಿ ಪರಿಚಯಿಸಿತ್ತು.

news18-kannada
Updated:February 8, 2021, 11:18 AM IST
iPhone 12 Mini: ಐಫೋನ್​ 12 ಮಿನಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಆ್ಯಪಲ್​ ಕಂಪೆನಿ?
ಐಫೋನ್​ 12 ಮಿನಿ
  • Share this:
ಜನಪ್ರಿಯ ಆ್ಯಪಲ್​ ಸಂಸ್ಥೆ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಅಗ್ಗದ ಬೆಲೆಯ ಐಫೋನ್​ 12 ಮಿನಿಯನ್ನು ಉತ್ಪಾದಿಸಿ ಪರಿಚಯಿಸಿತ್ತು. ಆದರೀಗ ಐಫೋನ್​ 12 ಸಿರೀಸ್ -12 ಮಿನಿ​ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಲಾಗುತ್ತಿದೆ.

2021ರ ಎರಡನೇ ತ್ರೈಮಾಸಿಕ ವೇಳೆಗೆ ಐಫೋನ್​​ 12 ಮಿನಿಯನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಾಗುತ್ತಿದೆ. ಆ್ಯಪಲ್​ ಸಂಸ್ಥೆ 5.4 ಇಂಚಿನ ಐಫೊನ್​ ಮಿನಿ ಹೊರತುಪಡಿಸಿ 6.10-ಇಂಚಿ ಐಫೋನ್​ 12 ಮತ್ತು 12 ಪ್ರೊ ಹಾಗೂ 6.70 ಇಂಚಿನ ಐಫೋನ್​ 12 ಪ್ರೊ ಮ್ಯಾಕ್ಸ್​​ ಅನ್ನು 2020 ಅಕ್ಟೋಬರ್​ ತಿಂಗಳಿನಲ್ಲಿ ಪರಿಚಯಿಸಿತ್ತು.

ಆದರೀಗ ಐಫೋನ್​ 12 ಮಿನಿ ಉಳಿದ ಸಿರೀಸ್​​​ಗಳ ಮಾರಾಟಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಹಾಗಾಗಿ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಐಫೋನ್​​ 12 ಮಿನಿಯನ್ನು ಸ್ಥಗಿತಗೊಳಿಸಲಿದೆ ಎಂದು ಹೇಳಲಾಗುತ್ತಿದೆ.

ಚೀನಾ ಮೂಲದ ಮೈ ರಿಪೋರ್ಟ್​​ ಮಾಡಿರುವ ವರದಿಯಂತೆ 12 ಮಿನಿ ಮಾದರಿಯು ತನ್ನ ಜಾಗತಿಕ ಮಾರಾಟ ಶೇ.6 ರಷ್ಟನ್ನು ಹೊಂದಿದೆ ಎಂದಿದೆ. ಹೂಡಿಕೆ ಸಂಸ್ಥೆ ಜೆಪಿ ಮೋರ್ಗಾನ್​​ ಚೇಸ್​​ ನೀಡಿದ ವರಧಿಯಂತೆ 2021ರಲ್ಲಿ ಐಫೋನ್​ 12 ಮಿನಿ ಉತ್ಪಾದನೆ ಸ್ಥಗಿತಗೊಳಿಸಲಿದೆ ಎಂದಿದೆ.

ಇನ್ನು ಐಫೋನ್​ 12 ಮತ್ತು ಊಫೋನ್​ 12 ಮಿನಿ ಉತ್ಪಾದನಾ ಕ್ರಮವಾಗಿ 9 ಮತ್ತು 12 ಮಿಲಿಯನ್​ಗೆ ಕಡಿತಗೊಳಿಸಿದೆ ಎನ್ನಲಾಗಿದೆ.  ವಿಶ್ಲೇಷಕ ವಿಲಿಯಂ ಯಂಗ್​ ಐಫೋನ್​ 12 ಮಿನಿ ಮಾರುಕಟ್ಟೆ ಬೇಡಿಕೆ ದುರ್ಬಲವಾಗಿದೆ. ಜಾಗತಿಕ ಮಾರುಕಟ್ಟೆ ಬೇಡಿಕೆ ಕಡಿಮೆಯಾಗಿದೆ ಎಂದಿದ್ದಾರೆ.
Youtube Video

ಕಳೆದ ತಿಂಗಳು ಅಮೆಜಾನ್​ ಗ್ರೇಟ್​ ರಿಪಬ್ಲಿಕ್​ ಡೇ ಸೇಲ್​ ಹಮ್ಮಿಕೊಂಡಿತ್ತು. ಅದರಲ್ಲಿ ಐಫೋನ್​ ವಿವಿಧ ಸಿರೀಸ್​ಗಳ ಜೊತೆಗೆ ಐಫೋನ್​ 12 ಮಿನಿಯನ್ನು ಬೆಲೆ ಕಡಿತಗೊಳಿಸಿ ಮಾರಾಟಕ್ಕೆ ಇರಿಸಲಾಗಿತ್ತು. 64ಜಿಬಿ ಮಾದರಿಯನ್ನು 64,490 ರೂ.ಗೆ (ಎ.ಆರ್​​.ಪಿ 69,900 ರೂ) ಮಾರಾಟ ಮಾಡಲಾಗಿತ್ತು. ಆದರೆ ಇದರಲ್ಲೂ ಹೆಚ್ಚಿನ ಮಾರಾಟ ಕಂಡುಬಂದಿಲ್ಲವೆಂದು ತಿಳಿದುಬಂದಿದೆ.
Published by: Harshith AS
First published: February 8, 2021, 11:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories