ಐಫೋನ್ ಬಳಿಕ 'ಐ-ಕಾರ್' ನಿರ್ಮಿಸಲು ಮುಂದಾದ ಆ್ಯಪಲ್ ಕಂಪನಿ

news18
Updated:August 29, 2018, 4:04 PM IST
ಐಫೋನ್ ಬಳಿಕ 'ಐ-ಕಾರ್' ನಿರ್ಮಿಸಲು ಮುಂದಾದ ಆ್ಯಪಲ್ ಕಂಪನಿ
freelancer.com
news18
Updated: August 29, 2018, 4:04 PM IST
-ನ್ಯೂಸ್ 18 ಕನ್ನಡ

ವಿಶ್ವ ಪ್ರಸಿದ್ಧ ಮೊಬೈಲ್ ಫೋನ್ ತಯಾರಕ ಕಂಪನಿ 'ಆ್ಯಪಲ್' ಶೀಘ್ರದಲ್ಲೇ ವಾಹನ ಮಾರುಕಟ್ಟೆಗೆ ಕಾಲಿಡಲಿದೆ.  ಶ್ರೇಷ್ಠ ಉತ್ಪನ್ನಗಳ ಮೂಲಕ ವಿಶ್ವ ಪ್ರಸಿದ್ದಿ ಪಡೆದಿರುವ ಆ್ಯಪಲ್ ಕಂಪನಿ ನಿರ್ಮಿಸಲಿರುವ ಹೊಸ ಐ-ಕಾರುಗಳ ವಿನ್ಯಾಸಗಳ ಫೋಟೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಇದು ವಾಹನ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಕಾರು 2023 ಮತ್ತು 2025ರ ನಡುವೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹಾಂಕಾಂಗ್ ಟಿಎಫ್ ಇಂಟರ್​ನ್ಯಾಷನಲ್ ಸೆಕ್ಯುರಿಟೀಸ್ ಸಂಸ್ಥೆಯ ಉನ್ನತ ಆ್ಯಪಲ್ ವಿಶ್ಲೇಷಕರು ತಿಳಿಸಿದ್ದಾರೆ.

freelancer.com


 

ಈ ಬಗ್ಗೆ ಥೈವಾನ್​ನ ಕೆಜಿಐ ಕಂಪನಿಯೊಂದಿಗೆ ಮಾತುಕತೆ ನಡೆಸಿರುವ ಆ್ಯಪಲ್​ ಸಂಸ್ಥೆಗೆ, ಕಂಪನಿಯು ಕಾರು ಉದ್ಯಮದ ಸಲಹೆ-ಟಿಪ್ಪಣಿಗಳನ್ನು ಕಳುಹಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಆ್ಯಪಲ್ ಕಂಪನಿ ಭವಿಷ್ಯದಲ್ಲಿ ಪ್ರಾರಂಭಿಸಲಿರುವ ಉತ್ಪನ್ನಗಳ ಮತ್ತು ಐ-ಕಾರಿನ ಕುರಿತಾಗಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಆ್ಯಪಲ್ ಕಂಪನಿ ಮುಂದಿನ ದಿನಗಳಲ್ಲಿ ಕಾರು ಉದ್ಯಮದಲ್ಲಿ ಬೃಹತ್ ಬಂಡವಾಳ ಹೂಡಲಿರುವ ಸಂಸ್ಥೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರಲಿದೆ ಎಂದು​ ಮ್ಯಾಕ್​ರುಮರ್ಸ್​ ವರದಿ ಮಾಡಿದೆ.

freelancer.com


2007 ರಲ್ಲಿ ಐಫೋನ್ ಮೂಲಕ ಡಿಜಿಟಲ್ ಯುಗದಲ್ಲಿ ಹೊಸ ಕ್ರಾಂತಿ ಪ್ರಾರಂಭಿಸಿದ್ದ ಆ್ಯಪಲ್ ಕಂಪನಿಯ ಈ ಯೋಜನೆ ಮತ್ತೊಂದು ಕ್ರಾಂತಿಗೆ ನಾಂದಿಯಾಡಲಿದೆ.  2023ರಲ್ಲಿ ಕಾರು ಉತ್ಪಾದನೆಯನ್ನು ಪ್ರಾರಂಭಿಸಲಿರುವ ಕಂಪನಿಯು  2025ರೊಳಗೆ ಐ-ಕಾರುಗಳನ್ನು ರೋಡಿಗಿಳಿಸುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಂಪನಿಯು ಎಲ್ಲೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಎಂದು ಮ್ಯಾಕ್​ರುಮರ್ಸ್​ ವರದಿಯಲ್ಲಿ ತಿಳಿಸಲಾಗಿದೆ.
Loading...

 

freelancer.com
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ