ಸಾಮಾನ್ಯವಾಗಿ ಈ ಐಫೋನ್ (IPhone) ತಯಾರಕ ಕಂಪನಿಗಳಿಂದ ಹೊಸದೊಂದು ಮಾಡೆಲ್ ಬಿಡುಗಡೆಯ ನಂತರ ಅಥವಾ ಬಿಡುಗಡೆಗೂ ಮುಂಚಿತವಾಗಿ ತನ್ನ ಹಳೆಯ ಐಫೋನ್ ಗಳನ್ನು ಸ್ಥಗಿತಗೊಳಿಸುವ ಅಥವಾ ಮಾರುಕಟ್ಟೆಯಿಂದ (Market) ಹಿಂಪಡೆಯುವ ಅಭ್ಯಾಸ ರೂಢಿಯಲ್ಲಿದೆ. ಏಕೆಂದರೆ ಐಫೋನ್ ಸಿರೀಸ್ ನಲ್ಲಿಯೇ ಇತ್ತೀಚಿನ ಆವೃತ್ತಿ ಬಂದಾಗ, ಹಳೆಯ ಆವೃತ್ತಿಗಳ ಐಫೋನ್ ಗಳನ್ನು ಸ್ಥಗಿತಗೊಳಿಸುವುದನ್ನು ಈಗಾಗಲೇ ಅನೇಕ ಬಾರಿ ನಾವು ನೋಡಿರುತ್ತೇವೆ. ಈಗ ಇದೆಲ್ಲದರ ಬಗ್ಗೆ ನಾವು ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಏಕೆಂದರೆ ಇಲ್ಲಿಯೂ ಸಹ ಆ್ಯಪಲ್ ಕಂಪನಿ ತನ್ನ ಐಫೋನ್ 15 (IPhone 15) ಬಿಡುಗಡೆಯ ನಂತರ ತನ್ನ ಕೆಲವು ಇದಕ್ಕಿಂತ ಹಳೆಯ ಐಫೋನ್ ಗಳನ್ನು ಸ್ಥಗಿತಗೊಳಿಸುವ ಎಲ್ಲಾ ಸಾಧ್ಯತೆಗಳು ಇವೆಯಂತೆ.
ಈ ವರ್ಷದ ಕೊನೆಯಲ್ಲಿ ಆ್ಯಪಲ್ ಐಪೋನ್ 15 ಅನ್ನು ಪ್ರಕಟಿಸಲಾಗುವುದಂತೆ
ಆ್ಯಪಲ್ ಐಫೋನ್ 15 ಅನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡ್ತಾರೆ. ಹೊಸ ಸಿರೀಸ್ ಐಫೋನ್ ನ ಬಿಡುಗಡೆಯೊಂದಿಗೆ, ಆ್ಯಪಲ್ ಕಂಪನಿ ತನ್ನ ಕೆಲವು ಹಳೆಯ ಐಫೋನ್ ಗಳನ್ನು ಸ್ಥಗಿತಗೊಳಿಸುತ್ತದೆ ಎಂಬ ಸುದ್ದಿ ಬಲವಾಗಿ ಹರಿದಾಡುತ್ತಿದೆ. ಈ ವರ್ಷವೂ, ಕಂಪನಿಯು ಹೊಸ ಫೋನ್ ಗಳಿಗೆ ದಾರಿ ಮಾಡಿಕೊಡಲು ಹಳೆಯ ಫೋನ್ ಗಳನ್ನು ಮಾರುಕಟ್ಟೆಯಿಂದ ಕೈಬಿಡಬಹುದಂತೆ.
ಟಾಮ್ಸ್ ಗೈಡ್ ವರದಿಯ ಪ್ರಕಾರ, ಐಫೋನ್ 12 ಜೊತೆಗೆ ಐಫೋನ್ 14 ಪ್ರೊ, ಐಫೋನ್ 14 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 13 ಮಿನಿ ಐಫೋನ್ ಗಳನ್ನು 15 ಸಿರೀಸ್ ಐಫೋನ್ ನ ಬಿಡುಗಡೆಯ ನಂತರ ಸ್ಥಗಿತಗೊಳಿಸಬಹುದಂತೆ.
ಆ್ಯಪಲ್, ಐಫೋನ್ 12 ಅನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ, ಏಕೆಂದರೆ ಆಪಲ್ ಯಾವುದೇ ಐಫೋನ್ ಅನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅದರ ಸ್ಥಾನವನ್ನು ಐಫೋನ್ 13 ತುಂಬುವ ಸಾಧ್ಯತೆಯಿದೆ.
ಒಂದು ವರ್ಷದ ಮಾರಾಟದ ನಂತರ ಪ್ರೊ ಮಾಡೆಲ್ ಗಳನ್ನು ಕೈಬಿಡುತ್ತದೆ ಆ್ಯಪಲ್
ಆ್ಯಪಲ್ ಸಾಮಾನ್ಯವಾಗಿ ಒಂದು ವರ್ಷದ ಮಾರಾಟದ ನಂತರ ತನ್ನ ಪ್ರೊ ಮಾದರಿ ಐಫೋನ್ ಗಳನ್ನು ಕೈಬಿಡುತ್ತದೆ. ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ನಲ್ಲೂ ಇದೇ ರೀತಿ ಆಗುವ ಸಾಧ್ಯತೆಯಿದೆ. ಐಫೋನ್ 15 ಸಿರೀಸ್ ನ ಐಫೋನ್ ಗಳ ಬಿಡುಗಡೆಯ ನಂತರ ಇವೆರಡು ಐಫೋನ್ ಗಳನ್ನು ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಬಹುದು.
ಇದನ್ನೂ ಓದಿ: ಮೊಬೈಲ್ನಲ್ಲಿ ಇದನ್ನು ಪುರುಷರಿಗಿಂತ ಮಹಿಳೆಯರೇ ಜಾಸ್ತಿ ನೋಡೋದಂತೆ! ಸಮೀಕ್ಷೆಯಲ್ಲಿ ಗುಟ್ಟು ರಟ್ಟು!
ಐಫೋನ್ 14 ಮಾರುಕಟ್ಟೆಯಲ್ಲಿ ಉಳಿಯುವ ಸಾಧ್ಯತೆಯಿದೆ, ಆದರೆ ಈ ಹ್ಯಾಂಡ್ಸೆಟ್ ಬೆಲೆಯು ಕಡಿಮೆಯಾಗಬಹುದು. ಈ ವರ್ಷವೂ ಸಹ ಇದೇ ಅಭ್ಯಾಸವನ್ನು ಅನುಸರಿಸುವ ಸಾಧ್ಯತೆಯಿದೆ ಆ್ಯಪಲ್.
ಐಫೋನ್ 13 ಮಿನಿಯನ್ನು ಸ್ಥಗಿತಗೊಳಿಸಬಹುದು ಎಂದು ವರದಿಗಳು ಸೂಚಿಸುತ್ತಿವೆ. ಎರಡು ವರ್ಷಗಳ ಮಾರಾಟದ ನಂತರ ಆ್ಯಪಲ್ ಐಫೋನ್ 12 ಮಿನಿಯನ್ನು ಮಾರುಕಟ್ಟೆಯಿಂದ ಕೈಬಿಟ್ಟಿತು.
ಐಫೋನ್ 14 ಪ್ಲಸ್ ಸಿರೀಸ್ ಐಫೋನ್ ನ ಭವಿಷ್ಯವನ್ನು ಊಹಿಸುವುದು ಕಷ್ಟ. ಏಕೆಂದರೆ 100 ಡಾಲರ್ ಬೆಲೆ ಕಡಿತವನ್ನು ನೀಡುವುದರಿಂದ ಐಫೋನ್ 15 ಗೆ ಹೋಲಿಸಿದರೆ ಬೆಲೆಯ ದೃಷ್ಟಿಯಿಂದ ಇದನ್ನು ಮಾರುಕಟ್ಟೆಯಲ್ಲಿ ಇರಿಸಲಾಗುತ್ತದೆ. ಆದರೆ ಹೀಗೆ ಆಗುವ ಸಾಧ್ಯತೆಗಳು ತೀರಾ ಕಡಿಮೆ.
ಇದನ್ನೂ ಓದಿ: ಕೂಲರ್ ಶಾಕ್ ಹೊಡಿತಾ ಇದ್ಯಾ? ಬದಲಾಯಿಸಬೇಡಿ, ಇಷ್ಟು ಮಾಡಿದ್ರೆ ಸಾಕು!
ಏತನ್ಮಧ್ಯೆ, ಆ್ಯಪಲ್ ಐಫೋನ್ 15 ಸಿರೀಸ್ ನ ಅಡಿಯಲ್ಲಿ ನಾಲ್ಕು ಐಫೋನ್ ಮಾಡೆಲ್ ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅವುಗಳು ಮೂಲ ಐಫೋನ್ 15 ವೇರಿಯಂಟ್, ಐಫೋನ್ 15 ಪ್ಲಸ್ ಮತ್ತು ಎರಡು ಐಫೋನ್ ಪ್ರೊ ಮಾದರಿಗಳು - ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಆಗಿವೆ.
ಮೊದಲ ಎರಡು ಎ 16 ಬಯೋನಿಕ್ ಚಿಪ್ಸೆಟ್ ನಿಂದ ಚಾಲಿತವಾಗಬಹುದು, ಆದರೆ ನಂತರದ ಎರಡು ಇತ್ತೀಚಿನ ಎ 17 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಈ ಎಲ್ಲಾ ನಾಲ್ಕು ಸಾಧನಗಳು ಐಒಎಸ್ 17 ನಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ಡಬ್ಲ್ಯೂಡಬ್ಲ್ಯೂಡಿಸಿ ಈವೆಂಟ್ ನಲ್ಲಿ ಘೋಷಿಸುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ