Apple: ದೈತ್ಯ ಮೈಕ್ರೋಸಾಫ್ಟ್ ಮತ್ತು ನಿಂಟೆಂಡೊವನ್ನು ಹಿಂದಿಕ್ಕಿದ ಆ್ಯಪಲ್, ಅಡ್ಡ ಸಿಕ್ಕವರೆಲ್ಲಾ ಧೂಳಿಪಟ!

ಆ್ಯಪಲ್ ಕಂಪನಿ ನಿಂಟೆಂಡೊದಂತಹ ಹಾರ್ಡ್-ಕೋರ್ ಬ್ರ್ಯಾಂಡ್‌ಗಳಿಗಿಂತ ಗೇಮಿಂಗ್‌ನಲ್ಲಿ ಹೆಚ್ಚಿನ ಆದಾಯವನ್ನು ಗಳಿಸಲು ಸಮರ್ಥವಾಗಿದೆ ಎಂದು ತಿಳಿದು ಬಂದಿದೆ. ಹೊಸ ವರದಿಯ ಪ್ರಕಾರ, ಗೇಮಿಂಗ್ ದೈತ್ಯರು ಎಂದು ಕರೆಯಲ್ಪಡುವ ಚೀನಾದ ಟೆನ್ಸೆಂಟ್ ಮತ್ತು ಜಪಾನ್‌ನ ಸೋನಿ ನಂತರ ಆ್ಯಪಲ್ ಮೂರನೇ ಅತಿ ಹೆಚ್ಚು ಆದಾಯವನ್ನು ಗಳಿಸುವ ಕಂಪನಿಯಾಗಿದೆ ಎಂದು ವರದಿಯಾಗಿದೆ.

ಆ್ಯಪಲ್ ಕಂಪನಿ

ಆ್ಯಪಲ್ ಕಂಪನಿ

  • Share this:
ತಂತ್ರಜ್ಞಾನದ ದೈತ್ಯ ಆ್ಯಪಲ್ ಕಂಪನಿ (Apple Company) ಹಲವಾರು ವಿಚಾರಗಳಲ್ಲಿ ಮೊದಲಿಗ. ಐಷಾರಾಮಿ ಬ್ರ್ಯಾಂಡ್  (Luxury brand)ಎಂದೇ ಕರೆಸಿಕೊಳ್ಳುವ ಆ್ಯಪಲ್ ಸದ್ಯ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದೆ. ಹೌದು, ಆ್ಯಪಲ್ ಕಂಪನಿ ನಿಂಟೆಂಡೊದಂತಹ (Nintendo) ಹಾರ್ಡ್-ಕೋರ್ ಬ್ರ್ಯಾಂಡ್‌ಗಳಿಗಿಂತ ಗೇಮಿಂಗ್‌ನಲ್ಲಿ (Gaming) ಹೆಚ್ಚಿನ ಆದಾಯವನ್ನು ಗಳಿಸಲು ಸಮರ್ಥವಾಗಿದೆ ಎಂದು ತಿಳಿದು ಬಂದಿದೆ. ಹೊಸ ವರದಿಯ ಪ್ರಕಾರ, ಗೇಮಿಂಗ್ ದೈತ್ಯರು ಎಂದು ಕರೆಯಲ್ಪಡುವ ಚೀನಾದ ಟೆನ್ಸೆಂಟ್ (Tencent) ಮತ್ತು ಜಪಾನ್‌ನ ಸೋನಿ ನಂತರ ಆ್ಯಪಲ್ ಮೂರನೇ ಅತಿ ಹೆಚ್ಚು ಆದಾಯವನ್ನು ಗಳಿಸುವ ಕಂಪನಿಯಾಗಿದೆ ಎಂದು ವರದಿಯಾಗಿದೆ.

ಯಾವ್ಯಾವ ಕಂಪನಿ ಎಷ್ಟು ಗಳಿಕೆ ಮಾಡಿದೆ?
2021ರಲ್ಲಿ $32 (2,484.66 ಶತಕೋಟಿ, ಭಾರತೀಯ ರೂಪಾಯಿ) ಶತಕೋಟಿಗಿಂತ ಹೆಚ್ಚಿನ ಆದಾಯದೊಂದಿಗೆ ಟೆನ್ಸೆಂಟ್ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಲೀಗ್ ಆಫ್ ಲೆಜೆಂಡ್ಸ್ ಮತ್ತು PUBG ಮೊಬೈಲ್‌ನಂತಹ ಜನಪ್ರಿಯ ಗೇಮಿಂಗ್ ಶೀರ್ಷಿಕೆಗಳನ್ನು ಹೊಂದಿದೆ. ಇದು ವಿವಿಧ ಐಟಂಗಳಿಗೆ ಅಪ್ಲಿಕೇಶನ್‌ನಲ್ಲಿ ಖರೀದಿಗಳನ್ನು ನೀಡುತ್ತದೆ. ಇದೇ ಸಂದರ್ಭದಲ್ಲಿ $18.2 (ಭಾರತೀಯ ರೂಪಾಯಿ 1,413.11) ಶತಕೋಟಿ ಆದಾಯದೊಂದಿಗೆ ಸೋನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೈಕ್ರೋಸಾಫ್ಟ್ ಮತ್ತು ನಿಂಟೆಂಡೊ ವನ್ನು ಹಿಂದಿಕ್ಕಿದ ಆ್ಯಪಲ್
ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಆ್ಯಪಲ್, ಮೈಕ್ರೋಸಾಫ್ಟ್ ಮತ್ತು ನಿಂಟೆಂಡೊದಂತಹ ದಿಗ್ಗಜರನ್ನು ಹಿಂದಿಕ್ಕಿ ಮುಂದೆ ಹೋಗಿದೆ. ಅದು ಕ್ರಮವಾಗಿ ಎಕ್ಸ್‌ಬಾಕ್ಸ್ ಕನ್ಸೋಲ್ ಮತ್ತು ಸ್ವಿಚ್ ಪೋರ್ಟಬಲ್ ಗೇಮಿಂಗ್ ಕನ್ಸೋಲ್‌ನಂತಹ ಹಾರ್ಡ್-ಕೋರ್ ಗೇಮಿಂಗ್ ಉತ್ಪನ್ನಗಳನ್ನು ಹೊಂದಿದೆ. ಐಫೋನ್ ತಯಾರಕ ಸಂಸ್ಥೆಯು ಗೇಮಿಂಗ್ ವಿಭಾಗದಿಂದ $15.3 (1,187.95 ರೂ) ಬಿಲಿಯನ್ ಗಳಿಸಿದೆ.

ಅಪ್ಲಿಕೇಶನ್‌ನಲ್ಲಿನ ಖರೀದಿಗಳಿಂದ 15-30% ರಷ್ಟು ಕಮಿಷನ್
ಆ್ಯಪಲ್ ಐಫೋನ್ ಮತ್ತು ಐಪ್ಯಾಡ್ ಆರ್ಕೇಡ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ. ಆ್ಯಪಲ್ ಆರ್ಕೇಡ್ ಜನಪ್ರಿಯವಾಗಿದ್ದರೂ, ಆ್ಯಪಲ್‌ನ ಹೆಚ್ಚಿನ ಗೇಮಿಂಗ್ ಆದಾಯವು ಆ್ಯಪ್ ಸ್ಟೋರ್‌ನಿಂದ ಬರುತ್ತದೆ ಎಂದು ಅಂದಾಜಿಸಲಾಗಿದೆ. ಆ್ಯಪಲ್ ತನ್ನ ಆ್ಯಪ್ ಸ್ಟೋರ್‌ನಲ್ಲಿನ ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಅಪ್ಲಿಕೇಶನ್‌ನಲ್ಲಿನ ಖರೀದಿಗಳಿಂದ 15-30% ರಷ್ಟು ಕಮಿಷನ್ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ:  Apple Phone: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್ ಕಂಪನಿಗೆ ಎರಡನೇ ಸ್ಥಾನ; ಹಾಗಾದ್ರೆ ಮೊದಲನೇ ಸ್ಥಾನದಲ್ಲಿರುವುದು ಯಾವುದು?

ಗೇಮಿಂಗ್‌ನಲ್ಲಿ ಕಂಪನಿಯ ಹೆಚ್ಚಿನ ಗಳಿಕೆಯು 15 ಪ್ರತಿಶತ ಕಮಿಷನ್ ಪಾವತಿಸಬೇಕಾದ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಮೂಲಕ ಬರುತ್ತದೆ ಎಂದು ಹೇಳಲಾಗಿದೆ. ಆ್ಯಪಲ್ ಮತ್ತು ಗೂಗಲ್ ತಮ್ಮ ಅಪ್ಲಿಕೇಶನ್‌ಗಳನ್ನು ಹೋಸ್ಟ್ ಮಾಡಲು ಮತ್ತು ಅವುಗಳ ಮೂಲಕ ಪಾವತಿಗಳನ್ನು ಮಾಡಲು ಹೆಚ್ಚಿನ ಶುಲ್ಕವನ್ನು ವಿಧಿಸುವುದನ್ನು ತಡೆಯಲು ಕಂಪನಿಗಳು ಗೂಗಲ್ ವಿರುದ್ಧ ಮೊಕದ್ದಮೆಗಳನ್ನು ಹೂಡಿದರೂ ಆಶ್ಚರ್ಯವೇನಿಲ್ಲ. ಆದರೆ ಆ್ಯಪ್ ಸ್ಟೋರ್ ನೀತಿಗಳು ಬದಲಾಗುವ ಸಾಧ್ಯತೆಯಿಲ್ಲ ಎಂಬುದಕ್ಕೆ ಸ್ಪಷ್ಟ ಸೂಚನೆ ಈಗಾಗಲೇ ಸಿಕ್ಕಿದೆ.

ಚಿಪ್ ಕೊರತೆಯೆ ಆದಾಯ ಕಡಿಮೆಯಾಗಲು ಕಾರಣ
ಮೈಕ್ರೋಸಾಫ್ಟ್ ಮತ್ತು ನಿಂಟೆಂಡೊ ಆದಾಯದಲ್ಲಿ ಬೀಳುತ್ತಿರುವುದು ಉದ್ಯಮದಲ್ಲಿನ ಚಿಪ್ ಕೊರತೆಯಿಂದಾಗಿ ಎಂದು ಹೇಳಲಾಗಿದ್ದು ಪೂರೈಕೆ ಸರಪಳಿ ಸಮಸ್ಯೆಗಳೇ ಕಾರಣ ಎನ್ನಲಾಗುತ್ತಿದೆ. ಆದರೆ ಪ್ಲೇಸ್ಟೇಷನ್‌ಗೆ ಹೋಲಿಸಿದರೆ ಎಕ್ಸ್‌ಬಾಕ್ಸ್‌ನ ಸೀಮಿತ ಜನಪ್ರಿಯತೆಯು ಕಂಪನಿಯ ವಿರುದ್ಧ ಕೆಲಸ ಮಾಡುತ್ತಿದೆ. ಮೈಕ್ರೋಸಾಫ್ಟ್ $12.9 ಶತಕೋಟಿ ಗಳಿಸಿದೆ ಎಂದು ವರದಿ ಹೇಳುತ್ತದೆ, ಆದರೆ ನಿಂಟೆಂಡೊ ಕಳೆದ ವರ್ಷ $8.1 ಶತಕೋಟಿ ಆದಾಯದೊಂದಿಗೆ ಪಟ್ಟಿಗಿಂತ ಕೆಳಗಿತ್ತು.

ಇದನ್ನೂ ಓದಿ: Smart Phone ಬಳಕೆದಾರರೇ ಎಚ್ಚರ! ಈ ಅಪಾಯಕಾರಿ ಮಾಲ್ವೇರ್ ದಾಳಿಗೆ ತುತ್ತಾಗದಿರಿ

ಈ ಅಂಕಿಅಂಶಗಳು 2021ಸಾಲಿನ ವರ್ಷದ್ದಾಗಿದ್ದು ಈ ವರ್ಷ ಉದ್ಯಮದಲ್ಲಿ ಬೇಡಿಕೆ ಮತ್ತು ಪೂರೈಕೆ ಅನುಪಾತವು ನಿರ್ವಹಿಸಬಹುದಾದ ರೀತಿಯಲ್ಲಿ ಮತ್ತೆ ನಿರ್ಮಾಣಗೊಂಡು ಇತರೆ ಕಂಪನಿಗಳ ಆದಾಯವು ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ.

2019 ರಲ್ಲಿ $8.5 ಬಿಲಿಯನ್ ಗಳಿಸಿದ ಆ್ಯಪಲ್
2019 ರಲ್ಲೂ ಗೇಮಿಂಗ್‌ನಿಂದ ಆ್ಯಪಲ್ $8.5 ಬಿಲಿಯನ್ ಗಳಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ಪೋಸ್ಟ್ ಪ್ರಕಾರ, ಆ್ಯಪಲ್ ನಿಂಟೆಂಡೋ, ಸೋನಿ, ಮೈಕ್ರೋಸಾಫ್ಟ್ ಮತ್ತು ಆಕ್ಟಿವಿಸನ್ ಆದಾಯಗಳನ್ನು ಮೀರಿಸಿ ಹೆಚ್ಚು ಗಳಿಸಿತ್ತು. 2020ರ ಆರ್ಥಿಕ ವರ್ಷದಲ್ಲಿ ಆ್ಯಪ್ ಸ್ಟೋರ್‌ನಲ್ಲಿ ಮೊಬೈಲ್ ಗೇಮ್‌ಗಳಿಗಾಗಿ ಆಟಗಾರರು $45 ಬಿಲಿಯನ್ ಖರ್ಚು ಮಾಡುತ್ತಾರೆ ಎಂದು ಸಹ ವರದಿಯಾಗಿದೆ.
Published by:Ashwini Prabhu
First published: