Iphone 13: ಇದೇ ವಿಚಾರಕ್ಕೆ ಐಫೋನ್​ 13 ಉತ್ಪಾದನೆ ಕಡಿತಗೊಳ್ಳುವ ಸಾಧ್ಯತೆಯಿದೆ! ಹಾಗಿದ್ದರೆ ಖರೀದಿಸಿದವರ ಗತಿ?

Apple Iphones: ಚಿಪ್‌ ಸೆಳೆತವು ಆಟೋಮೊಬೈಲ್‌ಗಳಿಂದ ಎಲೆಕ್ಟ್ರಾನಿಕ್ಸ್‌ವರೆಗೆ ಕೈಗಾರಿಕೆಗಳ ಮೇಲೆ ಅಪಾರ ಒತ್ತಡವನ್ನುಂಟು ಮಾಡಿದೆ, ಇದರಿಂದಾಗಿ ಅನೇಕ ವಾಹನ ತಯಾರಕರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

Apple Iphones

Apple Iphones

 • Share this:
  ಜಾಗತಿಕ ಚಿಪ್‌ಗಳ ಕೊರತೆಯಿಂದಾಗಿ ಟೆಕ್ ದೈತ್ಯ ಆ್ಯಪಲ್ ಇಂಕ್ (Apple Inc) ತನ್ನ Iphone 13 ರ ಉತ್ಪಾದನೆಯನ್ನು 10 ದಶಲಕ್ಷ ಯೂನಿಟ್‌ಗಳಷ್ಟು ಕಡಿತಗೊಳಿಸಲು ಮುಂದಾಗಿದೆ ಎಂಬ ವರದಿ ಬಹಿರಂಗವಾಗಿದೆ. ಬಹುತೇಕ ಆ್ಯಪಲ್ ಪ್ರಿಯರಿಗೆ ಈ ವಿಚಾರದ ಬಗ್ಗೆ ಅನುವಿತ್ತಾದರು ಮಂಗಳವಾರದಂದು ಚಿಪ್​ ಕೊರತೆಯ ಬಗ್ಗೆ ಬ್ಲೂಮ್‌ಬರ್ಗ್ (Bloomburg) ಧೃಡಪಡಿಸಿದೆ.

  ವರದಿಯ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್ ಇಂಕ್ ಹೊಸ ಐಫೋನ್ ಮಾದರಿಗಳನ್ನು 90 ದಶಲಕ್ಷ ಯೂನಿಟ್‌ಗಳಷ್ಟು ಉತ್ಪಾದಿಸುವ ನಿರೀಕ್ಷೆಯಿತ್ತು, ಆದಾಗ್ಯೂ, ಆ್ಯಪಲ್ ತಿಳಿಸಿದಂತೆ ಚಿಪ್​ ಪೂರೈಕೆದಾರಿಂದಾಗಿ ಉತ್ಪಾದಿಸುವ ಯುನಿಟ್​ಗಳು ಕಡಿಮೆ ಸಂಖ್ಯೆಯಲ್ಲಿವೆ. ಬ್ರಾಡ್‌ಕಾಮ್ ಇಂಕ್ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಚಿಪ್ ಪೂರೈಕೆದಾರರು ಮತ್ತು ಘಟಕಗಳಿಗೆ ತಲುಪಿಸಲು ಹರಸಾಹಸ ಪಡುತ್ತಿದೆ ಎಂದಿದೆ.

  ಈ ವಿಚಾರವಾಗಿ ಆ್ಯಪಲ್ ಷೇರುಗಳು ಗಂಟೆಗಳ ನಂತರ ವಹಿವಾಟಿನಲ್ಲಿ 1.2% ಕುಸಿದಿದೆ, ಆದರೆ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಬ್ರಾಡ್ಕಾಮ್ ಎರಡೂ 1% ನಷ್ಟು ಕಡಿಮೆಯಾಗಿದೆ.

  ಜುಲೈನಲ್ಲಿ, ಆ್ಯಪಲ್ ಆದಾಯದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಮುನ್ಸೂಚನೆ ನೀಡಿತು ಮತ್ತು ಚಿಪ್ ಕೊರತೆಯಿಂದ ಮ್ಯಾಕ್ ಮತ್ತು ಐಪ್ಯಾಡ್‌ಗಳ ಮಾರಾಟ ಸಾಮರ್ಥ್ಯವನ್ನು ಕುಂಠಿವಾಗುತ್ತಿದೆ ಎಂದು ಹೇಳಲಾಗುತ್ತಿದೆ.

  ಚಿಪ್‌ ಸೆಳೆತವು ಆಟೋಮೊಬೈಲ್‌ಗಳಿಂದ ಎಲೆಕ್ಟ್ರಾನಿಕ್ಸ್‌ವರೆಗೆ ಕೈಗಾರಿಕೆಗಳ ಮೇಲೆ ಅಪಾರ ಒತ್ತಡವನ್ನುಂಟು ಮಾಡಿದೆ, ಇದರಿಂದಾಗಿ ಅನೇಕ ವಾಹನ ತಯಾರಕರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

  ಮತ್ತೊಂದು ವಿಚಾರವೆಂದರೆ ಚಿಪ್ ಮಾರಾಟಗಾರರೊಂದಿಗಿನ ಬೃಹತ್ ಖರೀದಿ ಸಾಮರ್ಥ್ಯ ಮತ್ತು ದೀರ್ಘಾವಧಿಯ ಪೂರೈಕೆ ಒಪ್ಪಂದಗಳೊಂದಿಗೆ, ಆ್ಯಪಲ್ ಇತರ ಕಂಪನಿಗಳಿಗಿಂತ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿದೆ, ಆದರೆ ವಿಶ್ಲೇಷಕರು ತಿಳಿಸುವಂತೆ ಐಫೋನ್​ 13 ಅಪ್‌ಗ್ರೇಡ್ ಮಾಡಲು ನೋಡುತ್ತಿದ್ದಂತೆ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಫೋನ್ ಮಾದರಿಗಳು ಬಲವಾದ ಮಾರಾಟ ವರ್ಷವನ್ನು ಕಂಡುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

  ಕಳೆದ ವರ್ಷದ ಐಫೋನ್ 12 ಕ್ಕಿಂತ ಐಫೋನ್ 13 ಮಾರಾಟವು ಆರೋಗ್ಯಕರ ಮತ್ತು ಅಧಿಕವಾಗಿದೆ ಕಾಣುತ್ತಿದೆ ಎಂದು ಅಂದಾಜಿಸಲಾಗಿದೆ.

  ಇದನ್ನು ಓದಿ: WhatsApp, Gmail ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನ ವಶಕ್ಕೆ ಪಡೆಯುತ್ತಿರುವ ಚೀನಾ ಪೊಲೀಸರು

  ಸೋರಿಕೆಯಾಯ್ತು ಆ್ಯಪಲ್ Iphone 14 ಫೀಚರ್ಸ್! ಏನೆಲ್ಲಾ ಇದೆ ಗೊತ್ತಾ?

  ಮಾರುಕಟ್ಟೆಯಲ್ಲಿ ಐಫೋನ್​ 13 ಸರಣಿ ಉತ್ಪಾದನೆ ಮತ್ತು ಚಿಪ್​ಸೆಟ್​ ಕೊರತೆಯ ವಿಚಾರಗಳು ಹರಿದಾಡುತ್ತಿರುವ ಹೊತ್ತಲ್ಲಿ ಮುಂಬರುವ ಐಫೋನ್​ 14 (Iphone 14) ಸರಣಿಯ ಬಗ್ಗೆ ಸುದ್ದಿಗಳು ಕೇಳಿಬಂದಿದೆ. ನೂತನ ಫೋನಿನ ಕೆಲವು ಫೀಚರ್ಸ್​​ಗಳ ಕುರಿತಾಗಿ ಮಾಹಿತಿ ಹರಿದಾಡುತ್ತಿದೆ.

  ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮುಂಬರುವ ಭವಿಷ್ಯದಲ್ಲಿ ಆ್ಯಪಲ್ ತನ್ನ ಐಫೋನ್ 14 ಸರಣಿಯಲ್ಲಿ ಸಂಪೂರ್ಣವಾಗಿ ನಾಚ್ ಅನ್ನು ಬಿಡಬಹುದು. ಆ್ಯಪಲ್ ವಿಶ್ಲೇಷಕರ ಪ್ರಕಾರ, ಮಿಂಗ್-ಚಿ ಕುವೊ, ಆ್ಯಪಲ್ ಐಫೋನ್ 14 ಬಯೋಮೆಟ್ರಿಕ್ ಕಾರ್ಯವಿಧಾನವನ್ನು ಹೊಂದಿರಬಹುದು ಅದು ಟಚ್ ಐಡಿ ಮತ್ತು ಫೇಸ್ ಐಡಿಯೊಂದಿಗೆ ಬರಬಹುದಾದ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

  ಆ್ಯಪಲ್ 14 ಸರಣಿಗೆ ಸಂಬಂಧಿಸಿದಂತೆ, ಟಿಪ್ಸ್ಟರ್ ಪಾಂಡ ಹೇಳಿದಂತೆ ಐಫೋನ್​ 14 ಸರಣಿಯಲ್ಲಿ ಟಚ್ ಐಡಿಯನ್ನು ಹಿಂತಿರುಗುವುದಿಲ್ಲ ಎಂದು ಹೇಳಿಕೊಂಡಿದೆ. ಇತರ ವರದಿಗಳಂತೆ ಆ್ಯಪಲ್ ಫೇಸ್ ಐಡಿ ಮತ್ತು ಟಚ್ ಐಡಿಯ ಸಂಯೋಜನೆಯನ್ನು ಒಳಗೊಂಡಿರುತ್ತದೆ ಎಂದು ಹೇಳುತ್ತದೆ. ಒಟ್ಟಾರೆ ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರಿಗೆ ಪ್ರವೇಶವನ್ನು ನೀಡುತ್ತದೆ ಮಾಸ್ಕ್ ಧರಿಸಿದಾಗಲು ಫೋನ್ ಸುಲಭವಾಗಿ ಕಕಾರ್ಯನಿರ್ವಹಿಸುತ್ತದೆ ಎಂದಿದೆ.

  ಮತ್ತೊಂದೆಡೆ ಟಿಪ್​ಸ್ಟಾರ್ ಪಾಂಡ ಆ್ಯಪಲ್ ತನ್ನ ಮುಂದಿನ ಐಫೋನ್ ಮಾದರಿಗಳಿಂದ ಐಕಾನಿಕ್ ನಾಚ್ ಅನ್ನು ತೆಗೆದುಹಾಕುವುದಿಲ್ಲ ಆದರೆ ನಾಚ್ ಅನ್ನು ಕುಗ್ಗಿಸಬಹುದು ಎಂದಿದೆ.

  ಇದನ್ನು ಓದಿ: 6G ಭಾರತಕ್ಕೆ ಯಾವಾಗ ಬರುತ್ತೆ? ಇಂಟರ್​ನೆಟ್​ ವೇಗ ಮತ್ತು ವಿಶೇಷತೆಯ ಬಗ್ಗೆ ಇಲ್ಲಿದೆ ಮಾಹಿತಿ

  ಇಲ್ಲಿಯವರೆಗೆ, ಐಫೋನ್ 14 ಸರಣಿಗಾಗಿ ಬಿಡುಗಡೆಗಾಗಿ ಕಾಯುತ್ತಿರುವವರು ಬಹಳಸಮಯದ ವರೆಗೆ ಕಾಯಬೇಕಾಗುತ್ತದೆ. ಈ ವರ್ಷ ಐಫೋನ್ 13 ಸರಣಿ ಬಿಡುಗಡೆಯಾಗಿದೆ. ಅದರಂತೆ ಮುಂಬರುವ ವರ್ಷ ಐಫೋನ್​ 14 ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದಕ್ಕೂ ಮುನ್ನ ಗ್ರಾಹಕರಿಗೆ ವಿಭಿನ್ನ ಮತ್ತು ವಿಶೇಷ ಎನಿಸುವ ಫೀಚರ್ಸ್​ ಅಳವಡಿಸುವ ಸಿದ್ಧತೆ ಮಾಡುತ್ತಿದೆ.
  Published by:Harshith AS
  First published: