ಮೂರು ಕ್ಯಾಮೆರಾದ ಆ್ಯಪಲ್​ ಎಕ್ಸ್​ ಪ್ಲಸ್​ ಮಾರುಕಟ್ಟೆಗೆ ?!


Updated:June 12, 2018, 8:46 PM IST
ಮೂರು ಕ್ಯಾಮೆರಾದ ಆ್ಯಪಲ್​ ಎಕ್ಸ್​ ಪ್ಲಸ್​ ಮಾರುಕಟ್ಟೆಗೆ ?!

Updated: June 12, 2018, 8:46 PM IST
ನ್ಯೂಯಾರ್ಕ್:  ಆ್ಯಪಲ್​ ಕಂಪನಿಯಂದ ಕಳೆದ ವರ್ಷ ಬಿಡುಗಡೆ ಮಾಡಿ ಭಾರೀ ಸದ್ದು ಮಾಡಿದ್ದ ಐಫೋನ್​ ಎಕ್ಸ್​ ಮೊಬೈಲ್​ನ ಅಪ್​ಡೇಟೆಡ್​ ವರ್ಶನ್​ ಎಕ್ಸ್​ ಪ್ಲಸ್​ನ ಚಿತ್ರಗಳು ಲೀಕ್​ ಆಗಿದ್ದ 3 ಬ್ಯಾಕ್​ ಕ್ಯಾಮೆರಾಗಳನ್ನು ಅಳವಡಿಸಲು ಆ್ಯಪಲ್​ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಫೋರ್ಬ್ಸ್​ನ ಇತ್ತೀಚಿನ ವರದಿಗಳ ಪ್ರಕಾರ ಐಫೋನ್​ ಎಕ್ಸ್​ ಪ್ಲಸ್​ ಈ ಮೊದಲು ಬಿಡುಗಡೆಯಾಗಿದ್ದ ಎಕ್ಸ್​ ಮೊಬೈಲ್​ಗಿಂತ 0.7 ಇಂಚುಗಳಷ್ಟು ದೊಡ್ಡ ಡಿಸ್​ಪ್ಲೇ ಹೊಂದಲಿದೆ ಎನ್ನಲಾಗಿದೆ. ಅಲ್ಲದೇ ಹುವಾವೆಯ P20 Pro ನಂತಯೇ ಹಿಂಬದಿ ಮೂರು ಕ್ಯಾಮೆರಾಗಳನ್ನು ಒಳಗೊಳ್ಳಲಿದೆ ಎನ್ನಲಾಗಿದೆ.ಐಫೊನ್​ ಎಕ್ಸ್​ ಪ್ಲಸ್​ 6.5-inch OLED ಡಿಸ್​ಪ್ಲೇ ಹೊಂದಿದ್ದು ಮೇಲಿನ ಚಿತ್ರವನ್ನು ವೀಕ್ಷಿಸಿದರೆ ಹಿಂಬದಿ ಮೂರು ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಒಂದು ಕ್ಯಾಮೆರಾಗೆ ಹೆಚ್ಚಿನ ಜೂಮಿಂಗ್​ ಮತ್ತು ಡೆಪ್ತ್​ ಮೋಡ್​ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ವರದಿ ಪ್ರಕಾರ ಈಫೋನ್​ ಎಕ್ಸ್​ ಪ್ಲಸ್​ಗೆ $900ರಿಂದ $1000 ಡಾಲರ್​ಗಳು ಬೆಲೆ ತಗುಲಬಹುದು ಎನ್ನಲಾಗಿದೆ.
First published:June 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...