HOME » NEWS » Tech » APPLE IPHONE STOPS SELLING 8 SERIES AFTER IPHONE SE 2020 EDITION ENTERS TO MARKET RMD

ಮಾರುಕಟ್ಟೆಗೆ IPhone SE ಲಗ್ಗೆ ಇಟ್ಟ ಹಿನ್ನೆಲೆ; 8 ಸೀರಿಸ್ ಸ್ಥಗಿತಗೊಳಿಸಿದ ಆ್ಯಪಲ್!

64ಜಿಬಿ, 128ಜಿಬಿ ಹಾಗೂ 256 ಜಿಬಿ ಇಂಟರ್​ನಲ್​ ಸ್ಟೋರೆಜ್​ಗಳೊಂದಿಗೆ ಐಫೋನ್​ ಎಸ್​ಇ ಗ್ರಾಹಕರಿಗೆ​ ಲಭ್ಯವಿದೆ. ಮೊಬೈಲ್​ ರ್ಯಾಮ್​ ಬಗ್ಗೆ ಸಂಸ್ಥೆ ಅಧಿಕೃತ ಘೋಷಣೆ ಮಾಡಿಲ್ಲ.

news18-kannada
Updated:April 16, 2020, 1:49 PM IST
ಮಾರುಕಟ್ಟೆಗೆ IPhone SE ಲಗ್ಗೆ ಇಟ್ಟ ಹಿನ್ನೆಲೆ; 8 ಸೀರಿಸ್ ಸ್ಥಗಿತಗೊಳಿಸಿದ ಆ್ಯಪಲ್!
IPhone SE
  • Share this:
ಆ್ಯಪಲ್ ಎಸ್ಇ (2020) ಅನ್ನು ಲಾಂಚ್​ ಮಾಡಿದೆ. ಈ ಮೊಬೈಲ್​ ದರ ಭಾರತದಲ್ಲಿ 42 ಸಾವಿರ ರೂಪಾಯಿ ಇದೆ. ಈ ಹಿನ್ನೆಲೆಯಲ್ಲಿ ಐಫೋನ್​ ತನ್ನ 8 ಸೀರೀಸ್​ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಹೌದು, ಈಗಾಗಲೇ ಭಾರತದಲ್ಲಿ ಆ್ಯಪಲ್ ಎಸ್ಇ (2020) ಲಾಂಚ್​ ಮಾಡಿದೆ. ಹೆಚ್ಚು ಫೀಚರ್​ಗಳೊಂದಿಗೆ ಈ ಮೊಬೈಲ್​ ಮಾರುಕಟ್ಟೆ ಪ್ರವೇಶಿಸಿದೆ. ಐಫೋನ್​ 11ನಲ್ಲಿರುವ ಎ13 ಪ್ರೊಸೆಸರ್​ ಈ ಮೊಬೈಲ್​ಗೆ ನೀಡಲಾಗಿದೆ. ಹೀಗಾಗಿ ಮೊಬೈಲ್​ ವೇಗವಾಗಿ ಕೆಲಸ ಮಾಡಲಿದೆ.

Shorts; ಟಿಕ್​​ಟಾಕ್​ಗೆ ಸೆಡ್ಡು ಹೊಡೆಯಲು ಗೂಗಲ್ ಸಿದ್ಧಪಡಿಸುತ್ತಿದೆ ಈ ನೂತನ ಆ್ಯಪ್!

64 ಜಿಬಿ, 128 ಜಿಬಿ ಹಾಗೂ 256 ಜಿಬಿ ಇಂಟರ್​ನಲ್​ ಸ್ಟೋರೆಜ್​ಗಳೊಂದಿಗೆ ಐಫೋನ್​ ಎಸ್​ಇ ಗ್ರಾಹಕರಿಗೆ​ ಲಭ್ಯವಿದೆ. ಮೊಬೈಲ್​ ರ್ಯಾಮ್​ ಬಗ್ಗೆ ಸಂಸ್ಥೆ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ 3 ಜಿಬಿ ರ್ಯಾಮ್​ ಅನ್ನು ಎಸ್​ಇ ಹೊಂದಿರಲಿದೆ ಎನ್ನಲಾಗಿದೆ.

ಗ್ರಾಹಕರು ಐಫೋನ್​ ಎ​ಸ್​ಇ ಕೊಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಫೋನ್​-8 ಎಡಿಷನ್​ ಅನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಇನ್ನು, ಐಫೋನ್-8 ಪ್ಲಸ್​ ಮಾರಾಟ ಸಂಪೂರ್ಣ ಸ್ಥಗಿತಗೊಳಿಸಿಲ್ಲ ಎನ್ನಲಾಗಿದೆ. ಹೀಗಾಗಿ ಕೆಲ ಅಂಗಡಿಗಳಲ್ಲಿ ಇನ್ನೂ ಐಫೋನ್​ ಪ್ಲಸ್​ ಮಾರಾಟಕ್ಕೆ ಲಭ್ಯವಿದೆ. ಈ ಮೊದಲು ಐಫೋನ್​-11 ಬಂದಾಗ ಐಫೋನ್​ 7 ಸೀರಿಸ್​ ಮಾರಾಟ ನಿಲ್ಲಿಸಿತ್ತು.

ಚಾರ್ಜ್​ ಫುಲ್ ಆದ್ರೆ ಅಲರಾಂ ಹೊಡೆಯುತ್ತೆ; ಬ್ಯಾಟರಿ ನಿರ್ವಹಣೆಗೆ ಇದುವೇ ಸೂಪರ್ ಆ್ಯಪ್​​
Youtube Video
First published: April 16, 2020, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories