ಆ್ಯಪಲ್ ಕಂಪನಿಯ ಐಫೋನ್ ಕಡಿಮೆ ಬೆಲೆಗೆ ಸಿಗುವುದಾದರೆ ಯಾರಿಗೆ ಖರೀದಿಸಲು ಮನಸಾಗುವುದಿಲ್ಲ ಹೇಳಿ?. ನೈಜ್ಯ ಬೆಲೆ ನೋಡಿ ಐಫೋನ್ ಬೇಡ ಹೇಳುವವರು ಆಫರ್ ಬೆಲೆ ಕಂಡಾಗ ಖರೀದಿಸಿ ನಗು ಬೀರಿದವರು ಇದ್ದಾರೆ. ಆದರೀಗ ಮನಸ್ಸಿನ ಮೂಲೆಯಲ್ಲೊಂದು ಐಫೊನ್ ಖರೀದಿಸಬೇಕೆಂದುಕೊಂಡು ಕಾಯುತ್ತಿದ್ದ ಗ್ರಾಹಕರಿಗೆ ಐಫೋನ್ SE ಅನ್ನು 10 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದಾದ ಆಯ್ಕೆಯೊಂದನ್ನು ಆನ್ಲೈನ್ ಇ-ಕಾಮರ್ಸ್ ಮಳಿಗೆಯೊಂದು ನೀಡುತ್ತಿದೆ. ನೈಜ್ಯ ಬೆಲೆಗಿಂತ 15 ಸಾವಿರ ರಿಯಾಯಿತಿ ನೀಡಿ ಮಾರುತ್ತಿದೆ.
ಹಬ್ಬದ ಸೀಸನ್ನಲ್ಲಿ ಐಫೋನ್ ಎಸ್ಇ ಕಡಿಮೆ ಬೆಲೆ ಸಿಗುತ್ತಿದ್ದು, ರಿಯಾಯಿತಿ ದರದಲ್ಲಿ ಕಣ್ಣು ಮುಚ್ಚಿ ಖರೀದಿಸಬಹುದಾಗಿದೆ. 2020ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ ಪ್ರವೇಶ ಮಟ್ಟದ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬೆಲೆಯಲ್ಲಿ ಸಿಗುತ್ತಿದೆ ಮತ್ತು ಅಗ್ಗದ ಫೋನ್ಗಳಿಗಿಂತಲೂ ಭಿನ್ನವಾಗಿದೆ. ಅಷ್ಟು ಮಾತ್ರವಲ್ಲದೆ ಓಎಸ್ ನವೀಕರಣದೊಂದಿದೆ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ನೀಡುತ್ತಾಬಂದಿದೆ.
ಅಚ್ಚರಿಯ ವಿಚಾರವೆಂದರೆ ಐಫೋನ್ 9,499 ರೂಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಆದರೆ ಅದಕ್ಕೂ ಮುಂಚೆ ಗ್ರಾಹಕರು ಖರೀದಿಸುವಾಗ ಗಮನದಲ್ಲಿರಿಸಬೇಕಾದ ಹಲವು ಸಂಗತಿಗಳಿದ್ದು. ಸರಿಯಾಗಿ ಪರಿಶೀಲಿಸಿ ಖರೀದಿಸಬಹುದಾಗಿದೆ.
ಐಫೋನ್ ಎಸ್ಇ:
ಫ್ಲಿಪ್ಕಾರ್ಟ್ ಮೂಲಕ ಐಫೋನ್ ಎಸ್ಇ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಅದರೆ ಖರೀದಿಗೂ ಮುನ್ನ ಫ್ಲಿಪ್ಕಾರ್ಟ್ ನೀಡಿರುವ ಕೆಲವು ನಿಯಮವನ್ನು ಪಾಲಿಸಬೇಕಿದೆ. ಅಂದಹಾಗೆಯೇ 25,999 ಮುಖ ಬೆಲೆಯ 64 ರೂಪಾಂತರದ ಫೋನ್ 7 ಸಾವಿರ ಕಡಿತಗೊಳಿಸಿ ರಿಯಾಯಿತಿ ಬೆಲೆಗೆ ಖರೀದಿಗೆ ಸಿಗುತ್ತಿದೆ
ಇದಲ್ಲದೇ, ನೀವು ಐಸಿಐಸಿಐ ಅಥವಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, 1500 ರೂ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಈ ಐಫೋನ್ ಅನ್ನು ರೂ .24,499 ಕ್ಕೆ ಖರೀದಿಸಬಹುದಾಗಿದೆ
ವಿನಿಮಯ ಮಾಡುವ ಆಯ್ಕೆ!
ಫ್ಲಿಪ್ಕಾರ್ಟ್ ಮೂಲಕ ಐಫೊನ್ ಎಸ್ಇ ಖರೀದಿಸುವಾಗ ವಿನಿಯ ಮಾಡುವ ಆಯ್ಕೆಯನ್ನು ನೀಡಿದೆ. ಅಂದರೆ ಹಳೆಯ ಪೋನ್ ನೀಡಿ ಹೊಸ ಐಫೋನ್ ಖರೀದಿಸಬಹುದಾಗಿದೆ. ಪ್ರಸ್ತುತ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ಫ್ಲಿಪ್ಕಾರ್ಟ್ 15000 ರಿಯಾಯಿತಿ ನೀಡುತ್ತದೆ, ಒಟ್ಟಿನಲ್ಲಿ ಗ್ರಾಹಕರು 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ ಎಸ್ಇ ಖರೀದಿಸಬಹುದಾಗಿದೆ.
ಸಾಮಾನ್ಯ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಐಫೋನ್ ಖರೀದಿಸಬೇಕು ಎಂಬ ಬುಕೆಯಿರುತ್ತದೆ. ಆದರೆ ಅದರ ನೈಜ್ಯ ಬೆಲೆಯನ್ನು ಗಮನಿಸಿ ಅದರತ್ತ ಮುಖ ಮಾಡುವುದಿಲ್ಲ. ಆದರೀಗ ಫ್ಲಿಪ್ಕಾರ್ಟ್ ಭರ್ಜರಿ ಆಫರ್ ನೀಡುವ ಮೂಲಕ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ನೀಡಿದೆ. ಅದರಲ್ಲೂ 10 ಸಾವಿರಕ್ಕಿಂತ ಕಡಿಮೆ ಬೆಲೆ ಐಫೋನ್ ಎಸ್ಇ ಖರೀದಿಸುವುದು ಜಾಣತನದ ಕೆಲಸವಾಗಿದೆ.
ಐಫೋನ್ ಎಕ್ಸ್ ಆರ್ ಮತ್ತು ಐಫೋನ್ ಎಸ್ಇ ಖರೀದಿ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನ ಹೊಂದಿದೆ. ಹಾಗಾಗಿ ಹಬ್ಬದ ಸೀಸನ್ನಲ್ಲಿ ಗ್ರಾಹಕರಿಗಾಗಿ ಫ್ಲಿಪ್ಕಾರ್ಟ್ ಅಷ್ಟೊಂದು ಕಡಿಮೆ ಬೆಲೆ ಸೇಲ್ ಮಾಡುವ ಅವಕಾಶ ನೀಡಿದೆ. ಜೊತೆಗೆ ವಿನಿಮಯ ಕೂಡ ಮಾಡಬಹುದಾಗಿದೆ.
ಈಗಾಗಲೇ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ ನಡೆಸುತ್ತಿದೆ. ಅಕ್ಟೋಬರ್ 3 ರಿಂದ ಪ್ರಾರಂಭವಾಗಿ ಅಕ್ಟೋಬರ್ 10ರ ವರೆಗೆ ಸೇಲ್ ನಡೆಸುತ್ತಿದೆ. ಐಫೋನ್ ಮಾತ್ರವಲ್ಲದೆ ಇನ್ನಿತರ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಕಡಿಮೆ ಬೆಲೆಗೆ ಸಿಗುತ್ತಿದೆ.
ಇದನ್ನು ಓದಿ: TikTok: ಬ್ಯಾನ್ ಆಗಿದ್ದರೂ ಈ ವರ್ಷ ಅತಿ ಹೆಚ್ಚು ಡೌನ್ಲೋಡ್ ಕಂಡ ಆ್ಯಪ್ ಟಿಕ್ಟಾಕ್! ಗಳಿಸಿದ ಆದಾಯವೆಷ್ಟು ಗೊತ್ತಾ?
ಇನ್ನು ಅಮೆಜಾನ್ ಕೂಡ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಡೆಸುತ್ತಿದೆ. ಅದರಲ್ಲೂ ಕಡಿಮೆ ಬೆಲೆಗೆ ಮತ್ತು ರಿಯಾಯಿತಿ ಬೆಲೆಗೆ ಸ್ಮಾರ್ಟ್ಫೋನ್, ಐಒಎಸ್ ಸಾಧನಗಳನ್ನು ಮಾರಾಟ ಮಾಡುತ್ತಿದೆ. ಹಬ್ಬದ ಸೀಸನ್ನಲ್ಲಿರುವ ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಬೇಕೆಂಬ ಉದ್ದೇಶದಿಂದಾಗಿ ಆಫರ್ ನೀಡಿದೆ. ಅನೇಕರು ಆನ್ಲೈನ್ ಮಾರಾಟ ಮಳಿಗೆಯ ಮೂಲಕ ಪ್ರಯೋಜನ ಪಡೆದಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಆ್ಯಪಲ್ ಕೂಡ ತನ್ನ ಸ್ಟೋರ್ ಮೂಲಕ ಗ್ರಾಹಕರಿಗೆ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಐಫೋನ್ 12 ಖರೀದಿಸಿದರೆ ಏರ್ಪಾಡ್ ಉಚಿತವಾಗಿ ನೀಡುವ ಆಫರ್ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ