iPhone SE: ಅತಿ ಕಡಿಮೆ ಬೆಲೆಗೆ ಸಿಗಲಿಗೆ ಐಫೋನ್​ ಎಸ್​ಇ; ಹೇಗೆ ಖರೀದಿಸಬಹುದು ಗೊತ್ತಾ?

Apple iPhone SE 2020: ಆ್ಯಪಲ್​ ಸಂಸ್ಥೆ ಎಚ್​ಡಿಎಫ್​​ಸಿ ಬ್ಯಾಂಕ್​ ಜೊತೆ ಸಹಭಾಗಿತ್ವ ಹೊಂದಿದ್ದು, ನೂನತ ಐಫೋನ್​ ಎಸ್​ಇ 2020 ಮೇಲೆ 3,600 ರಷ್ಟು ಕ್ಯಾಶ್​ಬ್ಯಾಕ್​ ಆಫರ್​ ನೀಡಿದೆ.

news18-kannada
Updated:May 11, 2020, 5:24 PM IST
iPhone SE: ಅತಿ ಕಡಿಮೆ ಬೆಲೆಗೆ ಸಿಗಲಿಗೆ ಐಫೋನ್​ ಎಸ್​ಇ; ಹೇಗೆ ಖರೀದಿಸಬಹುದು ಗೊತ್ತಾ?
ಐಫೋನ್​ ಎಸ್​ಇ
  • Share this:
ಜನಪ್ರಿಯ ಆ್ಯಪಲ್​ ಸಂಸ್ಥೆ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಐಫೋನ್​ ಪರಿಚಯಿಸುವುದಾಗಿ ಈ ಹಿಂದೆ ಹೇಳಿತ್ತು. ಅದರಂತೆ ಕಂಪೆನಿ ನೂತನ ಐಫೋನ್​ ಎಸ್​ಇ 2020 ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಭಾರತೀಯ ಗ್ರಾಹಕರಿಗೆ ಖರೀದಿಸಲು ಅನುಕೂಲವಾಗಲೆಂದು ನೂತನ ಐಫೋನ್​ ಮೇಲೆ ಕ್ಯಾಶ್ ಬ್ಯಾಕ್​ ಆಫರ್​ ಅನ್ನು ನೀಡಿದೆ.

ಆ್ಯಪಲ್​ ಸಂಸ್ಥೆ ಎಚ್​ಡಿಎಫ್​​ಸಿ ಬ್ಯಾಂಕ್​ ಜೊತೆ ಸಹಭಾಗಿತ್ವ ಹೊಂದಿದ್ದು, ನೂನತ ಐಫೋನ್​ ಎಸ್​ಇ 2020 ಮೇಲೆ 3,600 ರಷ್ಟು ಕ್ಯಾಶ್​ಬ್ಯಾಕ್​ ಆಫರ್​ ನೀಡಿದೆ.

ಐಫೋನ್​ ಎಸ್​ಇ 2020 ಬೆಲೆ 42,500 ರೂಪಾಯಿಯಾಗಿದೆ. ಆದರೀಗ ಹೆಚ್​ಡಿಎಫ್​​ಸಿ ಬ್ಯಾಂಕ್​ ನೀಡಿರುವ ಕ್ಯಾಶ್​ ಬ್ಯಾಕ್​ ಆಫರ್​ ಮೇರೆಗೆ  ಐಫೋನ್​ ಎಸ್​ಇ 38,900ರೂ.ಗೆ ಸಿಗಲಿದೆ. ಕುಪರ್ಟಿನೋ ಟೆಕ್​​ ನೀಡಿರುವ ಮಾಹಿತಿ ಮೇರೆಗೆ ಸದ್ಯದಲ್ಲೇ ಐಫೋನ್​ ಎಸ್​ಇ ಭಾರತ ಸೇರಿ ಎಲ್ಲಾ ದೇಶಗಳಲ್ಲಿ ಸಿಗಲಿದೆ. ಅದರ ಜೊತೆಗೆ ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲೂ ಮಾರಾಟ ಮಾಡಲಿದೆ ಎಂದಿದೆ.

ಐಫೋನ್​ ಎಸ್​ಇ ಕೊಂಡುಕೊಳ್ಳುವ ಗ್ರಾಹಕರು ಹೆಚ್​​ಡಿಎಫ್​ಸಿ ಬ್ಯಾಂಕ್​​​ ಡೆಬಿಟ್​​ ಕಾರ್ಡ್ ಅಥವಾ ಕ್ರೆಡಿಟ್​​ ಕಾರ್ಡ್​​ ಮೂಲಕ ಖರೀದಿಸಬಹುದಾಗಿದೆ. ಆದರೆ ಭಾರತದಲ್ಲಿ ನೂತನ ಐಫೋನ್​ ಎಸ್​ಇ 2020 ಬಿಡುಗಡೆಯಾಗಲಿರುವ ದಿನಾಂಕವನ್ನುಇನ್ನು ಪ್ರಕಟಿಸಿಲ್ಲ.

ಐಫೋನ್​ ಎಸ್​ಇ 2020 ವೈಶಿಷ್ಟ್ಯತೆ ಮತ್ತು ಬೆಲೆ:

ಐಫೋನ್​ 8 ವಿನ್ಯಾಸದಂತಿರುವ ನೂತನ ಐಫೋನ್​ ಎಸ್​ಇ ಫೋನ್​ನಲ್ಲಿ ಎ13 ಬಯೋನಿಕ್​ ಪ್ರೊಸೆಸರ್​ ಅಳವಡಿಸಲಾಗಿದೆ.

ಐಫೋನ್​ ಎಸ್​ಇ 2020 ಭಾರತೀಯರಿಗೆ ಮೂರು ವೆರಿಯಂಟ್​ಗಳಲ್ಲಿ ಸಿಗಲಿದೆ.  ಐಫೋನ್​ ಎಸ್​ಇ 64ಜಿಬಿ ಮೋಡೆಲ್​​ ಬೆಲೆ 45,500 ರೂ.ಗೆ ಸಿಗಲಿದೆ. ಇನ್ನು 128ಜಿಬಿ ಮತ್ತು 256ಜಿಬಿ ವೆರಿಯಂಟ್​ಗಳಲ್ಲೂ ಬಿಡುಗಡೆ ಮಾಡಿದೆ. ಇದರ ಬೆಲೆ 47,800 ರೂ ಮತ್ತು 58,300 ರೂ ಇರಲಿದೆ.ಹೆಚ್​​ಡಿಎಫ್​ಸಿ ಬ್ಯಾಂಕ್​ ನೀಡಿರುವ ಕ್ಯಾಶ್​​ ಬ್ಯಾಕ್​ ಮೇಲೆ 64ಜಿಬಿ ಐಫೋನ್​ ಎಸ್​ಇ ಫೋನ್​​ 38,900 ರೂಗೆ ಗ್ರಾಹಕರಿಗೆ ಸಿಗಲಿದೆ. 128ಜಿಬಿ ಫೋನ್​​ 44,200 ರೂ.ಗೆ ಅಂತೆಯೇ 256ಜಿಬಿ ಸ್ಟೊರೇಜ್ ಹೊಂದಿರುವ ಐಫೋನ್​ ಎಸ್​ಇ ಫೋನ್​​ 54,700 ರೂ.ಗೆ ಮಾರಾಟ ಮಾಡಲಿದೆ. ಕೆಂಪು, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಐಫೋನ್​ ಎಸ್​ಇ ಫೋನ್​ ಗ್ರಾಹಕರಿಗೆ ಸಿಗಲಿದೆ.

ಸಿನಿಮಾವೊಂದರಲ್ಲಿ ನಟಿಸಲು ಆಸ್ಟ್ರೇಲಿಯಾದ ಕ್ರಿಕೆಟಿಗನಿಗೆ ಆಫರ್​ ನೀಡಿದ ಪುರಿ ಜಗನ್ನಾಥ್​!
First published: May 11, 2020, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading