• Home
  • »
  • News
  • »
  • tech
  • »
  • Apple Self Repair Kit: ಐಫೋನ್‌ 13 ಮಿನಿ ರಿಪೇರಿಗೆ 36 ಕೆಜಿ ಟೂಲ್‌ ಕಿಟ್‌ ಕಳಿಸಿದ ಆ್ಯಪಲ್‌! ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ?

Apple Self Repair Kit: ಐಫೋನ್‌ 13 ಮಿನಿ ರಿಪೇರಿಗೆ 36 ಕೆಜಿ ಟೂಲ್‌ ಕಿಟ್‌ ಕಳಿಸಿದ ಆ್ಯಪಲ್‌! ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತಾ?

ಆ್ಯಪಲ್‌ ರಿಪೇರಿ ಟೂಲ್‌ ಕಿಟ್‌

ಆ್ಯಪಲ್‌ ರಿಪೇರಿ ಟೂಲ್‌ ಕಿಟ್‌

ಆ್ಯಪಲ್‌ ತನ್ನ ಬಳಕೆದಾರರು ತಮ್ಮ ಐಫೋನ್‌ಗಳನ್ನು ತಾವೇ ರಿಪೇರಿ ಮಾಡಿಕೊಳ್ಳಲು ಬಯಸುತ್ತದೆಯೇ ಎಂದು ನೆಟ್ಟಿಗರು ಆಶ್ಚರ್ಯ ಪಡುವಂತೆ ಮಾಡಿದೆ. ದಿ ವರ್ಜ್‌ ಸೀನ್‌ ಹಾಲಿಸ್ಟರ್‌ ಎಂಬುವವರು ಇತ್ತೀಚೆಗೆ ತಮ್ಮ ‘ಐಫೋನ್‌ 13 ಮಿನಿ’ಯನ್ನು ಆ್ಯಪಲ್‌ನ ಸ್ವಯಂ ರಿಪೇರಿ ಸೇವೆಯಲ್ಲಿ ರಿಪೇರಿ ಮಾಡಲು ಬಯಸಿದ್ದರು. ಆದರೆ, ಸೆಲ್ಫ್‌ ರಿಪೇರಿ ಸೇವೆ ಆಯ್ಕೆ ಮಾಡಿಕೊಂಡ ಅವರಿಗೆ ಆ್ಯಪಲ್‌ ಸಂಸ್ಥೆ ಅಚ್ಚರಿಯೊಂದನ್ನು ನೀಡಿತ್ತು.

ಮುಂದೆ ಓದಿ ...
  • Share this:

ಆ್ಯಪಲ್‌ (Apple) ಎಂದರೆ ಮೊಬೈಲ್‌ (Mobile) ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ತನ್ನ ಗ್ರಾಹಕರಿಗಾಗಿ (customers) ಹೊಸ ಹೊಸ ತಂತ್ರಜ್ಞಾನಗಳನ್ನು (Technology), ಯೋಜನೆಗಳನ್ನು ಆ್ಯಪಲ್‌ ಆವಿಷ್ಕರಿಸುತ್ತಲೇ ಬಂದಿದೆ. ಅದರಂತೆ ಇತ್ತೀಚೆಗೆ ಆ್ಯಪಲ್‌ ಸೆಲ್ಫ್‌ ರಿಪೇರ್‌ ಸೇವೆಯನ್ನು (Apple Self Repair Service) ಪ್ರಾರಂಭಿಸಿತ್ತು. ಇದರಲ್ಲಿ ಐಫೋನ್‌ ಬಳಕೆದಾರರು ಕಂಪನಿಯಿಂದ (Company) ರಿಪೇರಿ ಕಿಟ್ ಅನ್ನು (Repair Kit) ಬಾಡಿಗೆಗೆ (Rent) ಪಡೆದು ತಮ್ಮ ಸ್ವಂತ ಸಾಧನಗಳನ್ನು ಸರಿಪಡಿಸಿಕೊಳ್ಳಲು ಆ್ಯಪಲ್‌ ಅವಕಾಶ ಮಾಡಿಕೊಟ್ಟಿತ್ತು. ಇದು ತುಂಬಾ ಸರಳ ಮತ್ತು ಬಳಕೆದಾರ ಸ್ನೇಹಿ ಎಂದು ಕಂಡುಬಂದರೂ, ಇತ್ತೀಚಿಗೆ ವೈರಲ್‌ (Viral) ಆದ ಸುದ್ದಿಯೊಂದು ನೆಟ್ಟಿಗರ ತಲೆಕೆಡಿಸಿದೆ.


ಸೆಲ್ಫ್‌ ರಿಪೇರಿ ಸೇವೆ
ಹೌದು, ಅದೊಂದು ಸುದ್ದಿ ಟೆಕ್‌ ದೈತ್ಯ ಆ್ಯಪಲ್‌ ತನ್ನ ಬಳಕೆದಾರರು ತಮ್ಮ ಐಫೋನ್‌ಗಳನ್ನು ತಾವೇ ರಿಪೇರಿ ಮಾಡಿಕೊಳ್ಳಲು ಬಯಸುತ್ತದೆಯೇ ಎಂದು ನೆಟ್ಟಿಗರು ಆಶ್ಚರ್ಯ ಪಡುವಂತೆ ಮಾಡಿದೆ. ದಿ ವರ್ಜ್‌ ಸೀನ್‌ ಹಾಲಿಸ್ಟರ್‌ ಎಂಬುವವರು ಇತ್ತೀಚೆಗೆ ತಮ್ಮ ‘ಐಫೋನ್‌ 13 ಮಿನಿ’ಯನ್ನು ಆ್ಯಪಲ್‌ನ ಸ್ವಯಂ ರಿಪೇರಿ ಸೇವೆಯಲ್ಲಿ ರಿಪೇರಿ ಮಾಡಲು ಬಯಸಿದ್ದರು. ಆದರೆ, ಸೆಲ್ಫ್‌ ರಿಪೇರಿ ಸೇವೆ ಆಯ್ಕೆ ಮಾಡಿಕೊಂಡ ಅವರಿಗೆ ಆ್ಯಪಲ್‌ ಸಂಸ್ಥೆ ಅಚ್ಚರಿಯೊಂದನ್ನು ನೀಡಿತ್ತು.


ಐಫೋನ್ 13 ಮಿನಿʼ ಬ್ಯಾಟರಿಯನ್ನು ಸರಿಪಡಿಸಲು 36 ಕೆಜಿ ತೂಕದ ಟೂಲ್‌ಕಿಟ್
1.1 ಔನ್ಸ್ ತೂಕ ಇರುವ ʼಐಫೋನ್ 13 ಮಿನಿʼ ಬ್ಯಾಟರಿಯನ್ನು ಸರಿಪಡಿಸಲು 36 ಕೆಜಿ ತೂಕದ ಎರಡು ಸೂಟ್‌ಕೇಸ್‌ಗಳಲ್ಲಿ ಟೂಲ್‌ಕಿಟ್ ಅನ್ನು ಟೆಕ್‌ ದೈತ್ಯ ಆ್ಯಪಲ್‌ ಕಂಪನಿ ಕಳುಹಿಸಿತ್ತು. ಅಲ್ಲಿನ ವೆಬ್‌ ಪೋ‌ರ್ಟಲ್‌ ವರದಿ ಮಾಡಿದಂತೆ, ಸ್ಕ್ರೂಡ್ರೈವರ್‌ಗಳು, ಸ್ಪಡ್ಜರ್‌ಗಳು ಮತ್ತು ಇಕ್ಕಳಗಳ ಬದಲಿಗೆ, ಆ್ಯಪಲ್ ತನ್ನ ಗ್ರಾಹಕರಿಗೆ 79 ಪೌಂಡ್‌ಗಳ ಉಪಕರಣ ಇರುವ ಎರಡು ದೈತ್ಯ ಸೂಟ್‌ಕೇಸ್‌ಗಳನ್ನು ಕಳುಹಿಸಿದೆ. ಅದರಲ್ಲಿ ಭಾರೀ ಗಾತ್ರದ, ಕೈಗಾರಿಕೆಯಲ್ಲಿ ಬಳಸುವ ಶಾಖ ಕೇಂದ್ರ ಮತ್ತು ಬೃಹತ್ ಸ್ಪ್ರಿಂಗ್‌ ಲೋಡೆಡ್‌ ಪ್ರೆಸ್ ಉಪಕರಣ ಕೂಡ ಇತ್ತು.


ಇದನ್ನೂ ಓದಿ:   Realme GT: 3 ಸಾವಿರ ರೂಪಾಯಿಯ ತ್ವರಿತ ರಿಯಾಯಿತಿ ಬೆಲೆಗೆ ಖರೀದಿಸಿ ರಿಯಲ್​ಮಿ ಜಿಟಿ ಸ್ಮಾರ್ಟ್​ಫೋನ್​!


ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ
ಇಲ್ಲಿ ಕೇವಲ ಭಾರೀ ಗಾತ್ರದ ಟೂಲ್‌ಕಿಟ್‌ ಮಾತ್ರ ಸಮಸ್ಯೆಯಾಗಿದ್ದಿಲ್ಲ. ಸಂಪೂರ್ಣ ರಿಪೇರಿ ಪ್ರಕ್ರಿಯೆಯು ಕೂಡ ಸವಾಲುಗಳಿಂದ ಕೂಡಿತ್ತು. ರಿಪೇರಿ ಕೈಪಿಡಿ ಕೂಡ ಗ್ರಾಹಕರಿಗೆ ಸಹಾಯಕವಾಗಿದ್ದಿಲ್ಲ ಎಂಬುದು ಕಂಡುಬಂದಿದೆ. ಇನ್ನು, ಹೋಲಿಸ್ಟರ್‌ ಅವರು ಸ್ಕ್ರೀನ್‌ ಅಲ್ಲಿರುವ ತೇವಾಂಶವನ್ನು ತೆಗೆಯಲು ಪ್ರಯತ್ನಿಸಿದಾಗ ತಾಪನ ಯಂತ್ರವು ಎರರ್‌ ಕೋಡ್‌ ತೋರಿಸುತ್ತಿದೆ. ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಆ್ಯಪಲ್‌ನ ರಿಪೇರಿ ಕೈಪಿಡಿಯಲ್ಲಿ ತಿಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ನಾನು ಐಫೋನ್‌ ಸ್ಕ್ರೀನ್‌ ಅನ್ನು ಸತತವಾಗಿ ಎರಡು ಬಾರಿ ಬಿಸಿ ಮಾಡಿದ್ದೇನೆ. ಆದರೆ, ತಾಪ ಯಂತ್ರವನ್ನು ತೆಗೆದಾಗ ನನ್ನ ಸ್ಕ್ರೀನ್‌ ತಕ್ಷಣ ಪಾಪ್‌ ಅಪ್‌ ಆಗಲಿಲ್ಲ ಎಂದು ಹೋಲಿಸ್ಟರ್‌ ಬರೆದುಕೊಂಡಿದ್ದಾರೆ. ಇನ್ನು, ಐಫೋನ್‌ 13 ಮಿನಿಯ ಫ್ರೇಮ್‌ ಅನ್ನು ಬಿಡಿಸಲು ಆ್ಯಪಲ್‌ ನೀಡಿದ ಸಣ್ಣ ಕಟ್ಟರ್ ಬಳಸಿದ್ದಾರೆ. ಆಗ ಕಟ್ಟರ್‌ ಬ್ಲೇಡ್‌ ಕೂಡ ಫ್ರೇಮ್‌ನಲ್ಲಿ ಸಿಕ್ಕಿಕೊಂಡು, ಅದನ್ನು ಹೊರಹಾಕಬೇಕಾಯಿತು. ಹೆಚ್ಚುವರಿಯಾಗಿ, ಆ್ಯಪಲ್ ತನ್ನ ಟೂಲ್‌ ಕಿಟ್‌ನಲ್ಲಿ ಫ್ಯಾನ್ಸಿ ಟಾರ್ಕ್ ಡ್ರೈವರ್‌ಗಳ ಸೆಟ್ ಅನ್ನು ಸಹ ಒದಗಿಸಿತ್ತು. ಇವುಗಳಿಂದ ನೀವು ಫೋನ್‌ನ ಸಣ್ಣ ಸ್ಕ್ರೂಗಳನ್ನು ಬಿಗಿಯಾಗಿ ಸ್ಕ್ರೂ ಮಾಡಲು ಕೂಡ ಆಗುವುದಿಲ್ಲ ಎಂದು ಹೋಲಿಸ್ಟರ್‌ ಹೇಳಿದ್ದಾರೆ.


ಇದನ್ನೂ ಓದಿ:  Smart phone: ನೀವು ಮಾಡುವ ಈ ತಪ್ಪಿನಿಂದ ಸ್ಮಾರ್ಟ್ ​ಫೋನ್​ ಸ್ಲೋ ಆಗೋದು!


ಇಷ್ಟೆಲ್ಲಾ ಸಮಸ್ಯೆ, ಬೇಸರದ ಕಾರ್ಯ ಹೊಂದಿದ ಆ್ಯಪಲ್‌ನ ಸ್ವಯಂ ರಿಪೇರಿ ಸೇವಾ ಕಾರ್ಯವು ದುಬಾರಿ ಕೂಡ. ಹೌದು, ಈ ಭಾರೀ ಟೂಲ್‌ಕಿಟ್‌ಗಾಗಿ ಕಂಪನಿಯು ಹೋಲಿಸ್ಟರ್‌ ಅವರಿಗೆ 1,200 ಡಾಲರ್‌ ಶುಲ್ಕವನ್ನು ವಿಧಿಸಿದೆ. ಅದಲ್ಲದೇ ಉಪಕರಣಗಳನ್ನು ಒಂದು ವಾರದವರೆಗೆ ಬಾಡಿಗೆ ನೀಡಲು 49 ಡಾಲರ್‌ ಹಾಗೂ ಹೊಸ ಬ್ಯಾಟರಿಗೆ 69 ಡಾಲರ್‌ ತೆಗೆದುಕೊಂಡಿದೆ. ಇದು ಆ್ಯಪಲ್‌ ಸ್ಟೋರ್‌ಗಳಲ್ಲಿ ಬ್ಯಾಟರಿ ಬದಲಾಯಿಸಲು ತೆಗೆದುಕೊಳ್ಳುವ ವೆಚ್ಚಕ್ಕಿಂತ ದುಬಾರಿಯಾಗಿದೆ. ಸ್ವಯಂ ರಿಪೇರಿ ಸೇವೆಯೂ ಸಾಕಷ್ಟು ಒತ್ತಡ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿರುವುದರಿಂದ ಅನೇಕ ಗ್ರಾಹಕರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನಾದರೂ ಆ್ಯಪಲ್‌ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿದೆ. ಹೌದಲ್ವಾ?

Published by:Ashwini Prabhu
First published: