ಕಡಿಮೆ ಬೆಲೆಯಲ್ಲಿ ಐಫೋನ್​ ಕೊಳ್ಳಲು ಇದೆ ಸುವರ್ಣಾವಕಾಶ; ಹಬ್ಬಕ್ಕೆ ಭಾರೀ ಆಫರ್​

ಇತ್ತೀಚಿಗೆ ಆನ್​ಲೈನ್​ ಮಳಿಗೆಯಾದ ಅಮೆಜಾನ್​ ಸಂಸ್ಥೆ ತನ್ನ ಗ್ರಾಹಕರಿಗಾಗಿ​ ‘ಫ್ರೀಡಂ ಸೇಲ್‘​ ಆರಂಭಿಸಿದೆ. ಫ್ಲಿಪ್​ ಕಾರ್ಟ್​ ಹಮ್ಮಿಕೊಂಡಿರುವ ಈ ಸೇಲ್​​ನಲ್ಲಿ ಗ್ಯಾಜೆಟ್​ ವಸ್ತುಗಳ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ.

news18
Updated:August 10, 2019, 11:34 AM IST
ಕಡಿಮೆ ಬೆಲೆಯಲ್ಲಿ ಐಫೋನ್​ ಕೊಳ್ಳಲು ಇದೆ ಸುವರ್ಣಾವಕಾಶ;  ಹಬ್ಬಕ್ಕೆ ಭಾರೀ ಆಫರ್​
ಐಫೋನ್
  • News18
  • Last Updated: August 10, 2019, 11:34 AM IST
  • Share this:
ಐಫೋನ್​ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅನೇಕರು ಜೀವನದಲ್ಲಿ ಒಮ್ಮೆಯಾದರೂ ಐಫೋನ್​ ಖರೀದಿಸ ಬೇಕೆಂದು ಆಸೆ ಪಡುತ್ತಾರೆ. ಇನ್ನು ಕೆಲವರಂತೂ ಯಾವ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಐಫೋನ್​ ಸಿಗುತ್ತೆ? ಯಾವ ದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ? ಎಂದು ಹುಡುಕಾಡುತ್ತಿರುತ್ತಾರೆ. ಅಂತವರಿಗಾಗಿ ದೇಶಿಯ ಮಾರುಕಟ್ಟೆಯ ಕೆಲ ಆನ್​ಲೈನ್​ ಮಳಿಗೆಯಲ್ಲಿ ಐಫೋನ್​ ಕಡಿಮೆ ಬೆಲೆಗೆ ಸಿಗುತ್ತಿದೆ.

ಇತ್ತೀಚಿಗೆ ಆನ್​ಲೈನ್​ ಮಳಿಗೆಯಾದ ಅಮೆಜಾನ್​ ಸಂಸ್ಥೆ ತನ್ನ ಗ್ರಾಹಕರಿಗಾಗಿ​ ‘ಫ್ರೀಡಂ ಸೇಲ್‘​ ಆರಂಭಿಸಿದೆ. ಫ್ಲಿಪ್​ ಕಾರ್ಟ್​ ಹಮ್ಮಿಕೊಂಡಿರುವ ಈ ಸೇಲ್​​ನಲ್ಲಿ ಗ್ಯಾಜೆಟ್​ ವಸ್ತುಗಳ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ. ಅಂತೆಯೇ ಸ್ಮಾರ್ಟ್​ಪೋನ್​ಗಳ ಮೇಲೂ ಭಾರಿ ಡಿಸ್ಕೌಂಟ್​ ನೀಡಿದ್ದು, ನಿಮ್ಮ ನೆಚ್ಚಿನ ಐಫೋನ್​​ಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ: ಮುಖ್ಯಮಂತ್ರಿಯ ಹೆಂಡತಿಗೆ ಆನ್​ಲೈನ್​ನಲ್ಲಿ 23 ಲಕ್ಷ ರೂ. ವಂಚನೆ ಮಾಡಿದ ಖದೀಮ!

ಅಮೆಜಾನ್ ​‘ಫ್ರೀಡಂ ಸೇಲ್‘​ನಲ್ಲಿ ಐಫೋನ್​​ಗಳ ಮೇಲೆ ಶೇ.20 ರಷ್ಟು ರಿಯಾಯಿತಿಯನ್ನು ನೀಡಿದೆ. ಜೊತೆಗೆ ಐಸಿಐಸಿಐ ಕ್ರೆಡಿಟ್​ ಕಾರ್ಡ್​ ಅಥವಾ ಡೆಬಿಟ್​ ಕಾರ್ಡ್​ ಮೂಲಕ ಐಫೋನ್​ ಕೊಂಡರೆ ಶೇ. 10ರಷ್ಟು ರಿಯಾಯಿತಿ ಸಿಗಲಿದೆ. ಅಂತೆಯೇ, ಹಳೆಯ ಫೋನ್​ ಜತೆ ಎಕ್ಸ್​ಚೇಂಜ್​ ಮಾಡಿದರೆ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. ಪ್ರಿಪೇಯ್ಡ್​ ಆರ್ಡರ್​ನಲ್ಲಿ 1,000 ರೂ. ಡಿಸ್ಕೌಂಟ್​​ ನೀಡುತ್ತಿದೆ.

ಇನ್ನು ಫ್ಲಿಪ್​ಕಾರ್ಟ್​ ಕೂಡ ಗ್ರಾಹಕರಿಗಾಗಿ ‘ನ್ಯಾಷನಲ್​ ಶಾಪಿಂಗ್​ ಡೇ ಸೇಲ್​‘ ಆಯೋಜಿಸಿದೆ.  ಈ ಸೇಲ್​ನಲ್ಲೂ ಸ್ಮಾರ್ಟ್​ಫೋನ್​​ಗಳ ಮೇಲೆ ಭರ್ಜರಿ ಆಫರ್​ ನೀಡಿದ್ದು, ಆ್ಯಪಲ್​ ಎಕ್ಸ್​ ಎಸ್​, ಆ್ಯಪಲ್​ ಎಕ್ಸ್​ ಆರ್​, ಐಫೋನ್​ ಎಕ್ಸ್​, ಐಫೋನ್​ 8 ಪ್ಲಸ್​, ಐಫೋನ್​ 8, ಐಫೋನ್​ 7, ಐಫೋನ್​ 6 ಮೇಲೆ ಭರ್ಜರಿ ರಿಯಾಯಿತಿ ನೀಡಿದೆ. ​
First published:August 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...