ಕಾರಿನಲ್ಲೇ ಹೊತ್ತಿ ಉರಿದ ಆ್ಯಪಲ್​ ಐಫೋನ್​ 6


Updated:August 14, 2018, 5:13 PM IST
ಕಾರಿನಲ್ಲೇ ಹೊತ್ತಿ ಉರಿದ ಆ್ಯಪಲ್​ ಐಫೋನ್​ 6

Updated: August 14, 2018, 5:13 PM IST
ನ್ಯೂಸ್​ 18 ಕನ್ನಡ

ಚಿನಾದ ಮೊಬೈಲ್​ಗಳು ಇದ್ದಕ್ಕಿದ್ದಂತೆಯೇ ಬೆಂಕಿ ಹತ್ತಿಕೊಂಡು ಒಡೆದು ಹೋಗೋದು ಮಾಮೂಲಿ, ಆದರೆ ಇದೀಗ ಅಮೆರಿಕದ ಆ್ಯಪಲ್​ ಐಫೋನ್​ ಸಿಕ್ಸ್​ ಕೂಡಾ ಬ್ಲಾಸ್ಟ್​ ಆಗಿರುವ ವಿಡಿಯೋ ವೈರಲ್​ ಆಗಿದೆ.

ಚೀನಾದ ಶಾಂಘೈನಲ್ಲಿ ಈ ಘಟನೆ ನಡೆದಿದ್ದು ಚಲಿಸುತ್ತಿದ್ದ ಕಾರ್​ನಲ್ಲಿದ್ದ ಆ್ಯಪಲ್​ ಐಫೋನ್​ 6 ಮೊಬೈಲ್​ ಇದ್ದಕ್ಕಿದಂತೆಯೇ ಬೆಂಕಿ ಹೊತ್ತಿಕೊಂಡಿದೆ, ಕೆಲವೇ ಕ್ಷಣಗಳಲ್ಲಿ ಮೊಬೈಲ್​ ಸಂಪೂರ್ಣವಾಗಿ ಹೊತ್ತಿ ಬೆಂಕಿ ಜ್ವಾಲೆಗಳು ಹೊರ ಸೂಸುವುದು ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದೆ.

ಸ್ಥಳೀಯ ಮಾಧ್ಯಮ ಥ್ರಿಲ್ಲಿಯಸ್ಟ್​ ವರದಿ ಪ್ರಕಾರ, ಎರಡು ವಾರದ ಹಿಂದೆ ಘಟನೆ ನಡೆದಿದ್ದು, ಶಾಂಘೈನ ಹೆದ್ದಾರಿಯೊಂದರಲ್ಲಿ ಮಹಿಳೆ ಹಾಗೂ ಆಕೆಯ ಗಂಡ ಪ್ರಯಾಣಿಸುತ್ತಿದ್ದ ಕಾರಿನ ಡ್ಯಾಶ್​ಬೋರ್ಡ್​ನಲ್ಲಿದ್ದ ಮೊಬೈಲ್​ ಇದ್ದಕ್ಕಿದ್ದಂತೆ ಹೊತ್ತಿಕೊಂಡಿದೆ. ಭಯಗೊಂಡ ಮಹಿಳೆ ಚೀರಿಕೊಂಡು ಕಾರಿನಿಂದ ಇಳಿದಿದ್ದಾರೆ.

ಮಹಿಳೆಯ ಗಂಡ ನೀಡಿದ ಹೇಳಿಕೆ ಪ್ರಕಾರ, ಘಟನೆಗೂ ಮುನ್ನ ಸ್ಥಳೀಯ ಅಂಗಡಿಯಲ್ಲಿ ಐಫೋನ್​ 6ನ ಮೊಬೈಲ್​ನ ಬ್ಯಾಟರಿಯನ್ನು ಬದಲಾಯಿಸಲಾಗಿತ್ತು, ಇದಾಗಿ ಕೆಲವೇ ತಿಂಗಳಾಗಿತ್ತು. ಹೀಗಾಗಿ ತಜ್ಞರ ಪ್ರಕಾರ ಘಟನೆಗೆ ಮೊಬೈಲ್​ ಬ್ಯಾಟರಿಯೇ ಕಾರಣ ಎನ್ನಲಾಗಿದೆ. ಮೊಬೈಲ್​ ಬ್ಲಾಸ್ಟ್​​ನ ವಿಡಿಯೋ ಇಲ್ಲಿದೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ