iPhone: ಗ್ರಾಹಕರ ಮುಂದೆ ಸೆಪ್ಟೆಂಬರ್‌ನಲ್ಲಿ ಬರಲು ಸಜ್ಜಾಗಿದೆ ಐಫೋನ್ 14 ಪ್ರೋ..! ಇದರ ವಿಶೇಷತೆ ಏನು ಗೊತ್ತೇ?
iPhone 14 Pro: ಈಗಾಗಲೇ ಮೊಬೈಲ್ ಜಗತ್ತನ್ನು ಆಳುತ್ತಿರುವ ಆ್ಯಪಲ್ ಕಂಪೆನಿಯು 13 ಮೊಬೈಲ್ ಫೋನ್‌ಗಳ ಸರಣಿಗಳನ್ನು ಬಿಡುಗಡೆ ಮಾಡಿ 14ನೇ ಸರಣಿ ಬಿಡುಗಡೆ ಮಾಡುವ ಕಡೆ ಚಿಂತನೆ ನಡೆಸಿದೆ.
ಆಧುನಿಕ ಯುಗದಲ್ಲಿ ಜನರು ಒಂದು ಹೆಜ್ಜೆ ಮುಂದೆ ಇಡಬೇಕಾದರೂ ಫೋನನ್ನು ನೋಡಿಯೇ ಹೆಜ್ಜೆ ಇಡುವ ಕಾಲ ಬಂದಿದೆ. ಸಮಯ ನೋಡುವುದರಿಂದ ಹಿಡಿದು ಪ್ರತಿಯೊಂದು ವ್ಯವಹಾರಕ್ಕೂ ಮೊಬೈಲ್ (Mobile) ಬೇಕೆ ಬೇಕು ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಬಳಕೆ ವ್ಯಾಪಕವಾಗಿದ್ದು, ಜನರು ಕೂಡ ಫೋನಿನ ವೈಶಿಷ್ಟ್ಯತೆಯೊಂದಿಗೆ (Features) ಅಷ್ಟರ ಮಟ್ಟಿಗೆ ಅಪ್‍ಡೇಟ್ ಆಗುತ್ತಿದ್ದಾರೆ. ಹಾಗಾಗಿ ಅವರ ಮನಸ್ಥಿತಿಗೆ ಅನುಗುಣವಾಗಿ ಐಫೋನ್(iPhone), ಆ್ಯಂಡ್ರಾಯ್ಡ್ ಫೋನ್‍ಗಳು (Android Phones) ಹೊಸ ಹೊಸ ವೈಶಿಷ್ಟ್ಯದೊಂದಿಗೆ ಅಪ್‍ಡೇಟ್ (Updated) ಆಗುತ್ತಿವೆ. ಕಾಲ ಬದಲಾದಂತೆ ಹಲವರು ಆ್ಯಂಡ್ರಾಯ್ಡ್‌ನಿಂದ ಐಫೋನ್‍ಗೆ (Iphone) ಬದಲಾಗುತ್ತಿದ್ದಾರೆ (Switching). ಇದಕ್ಕೆ ಇದರಲ್ಲಿನ ವಿಶೇಷತೆಗಳೇ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.
ಅಪ್‍ಡೇಟೆಡ್ ಕ್ಯಾಮೆರಾ
ಈಗಾಗಲೇ ಮೊಬೈಲ್ ಜಗತ್ತನ್ನು ಆಳುತ್ತಿರುವ ಆ್ಯಪಲ್ ಕಂಪೆನಿಯು 13 ಮೊಬೈಲ್ ಫೋನ್‌ಗಳ ಸರಣಿಗಳನ್ನು ಬಿಡುಗಡೆ ಮಾಡಿ 14ನೇ ಸರಣಿ ಬಿಡುಗಡೆ ಮಾಡುವ ಕಡೆ ಚಿಂತನೆ ನಡೆಸಿದೆ. ಜೊತೆಗೆ ಜನರಿಗೆ ಹೊಸತೇನಾದರೂ ಕೊಡಬೇಕು ಎಂದು ಭಾವಿಸಿ ಕ್ಯಾಮರಾ ಮತ್ತು ಸಿಮ್ ಪೋರ್ಟ್‍ನಲ್ಲಿ ಬದಲಾವಣೆಯನ್ನು ತರಲು ಬಯಸಿದೆ.
ಹೌದು ತನ್ನ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಆಲೋಚಿಸಿರುವ ಆ್ಯಪಲ್ ಕಂಪೆನಿಯು 14 ಪ್ರೋ ಬಿಡುಗಡೆಗೆ ಸಜ್ಜಾಗಿದೆ. ಆ್ಯಪಲ್ ಕಂಪೆನಿಯು ಸೆಪ್ಟೆಂಬರ್‌ನಲ್ಲಿ ಅಥವಾ ಅದರ ಆಸುಪಾಸಿನಲ್ಲಿ ಐಫೋನ್ 14 ಸರಣಿಯನ್ನು ಘೋಷಿಸುವ ನಿರೀಕ್ಷೆಯಿದೆ ಮತ್ತು ಹೊಸ ಪ್ರೋ ಮಾದರಿಗಳು ಅಪ್‍ಡೇಟೆಡ್ ಕ್ಯಾಮೆರಾದೊಂದಿಗೆ ಬರಲಿದೆ.
ಪ್ರಸ್ತುತ ಪ್ರೋ ಐಫೋನ್‍ಗಳಲ್ಲಿ 12 ಮೆಗಾ ಪಿಕ್ಸಲ್‍ಗಳನ್ನು ಹೊಂದಿದೆ. ಇದಕ್ಕಿಂತ ಅಪ್‍ಡೇಟ್ ಅಗಿರುವ ಐಫೋನ್ 14 ಪ್ರೋ ಮಾದರಿಗಳು 48 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಒಳಗೊಂಡಿರಲಿವೆ ಎನ್ನಲಾಗುತ್ತಿದೆ. ಟ್ರೆಂಡ್ ಫೋರ್ಸ್ ಪ್ರಕಾರ, ಆ್ಯಪಲ್ ಕಂಪೆನಿಯುಈ ವರ್ಷ ಬಿಡುಗಡೆ ಮಾಡಲಿರುವ ಐಫೋನ್ 14 ಪ್ರೋ ಸರಣಿಗೆ (ತಾತ್ಕಾಲಿಕ ಹೆಸರು) 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಪರಿಚಯಿಸುವ ನಿರೀಕ್ಷೆಯಿದೆ. ಇದು 2022ರಲ್ಲಿ 12 ಮಿಲಿಯನ್ ಪಿಕ್ಸೆಲ್ ಉತ್ಪನ್ನಗಳನ್ನು ಹೊಂದಿರುವ 12 ಮೆಗಾ ಪಿಕ್ಸೆಲ್ ಉತ್ಪನ್ನಗಳು ಶೇಕಡಾ 15 ಪಾಲನ್ನು ಕಡಿಮೆ ಮಾಡುತ್ತದೆ ಎಂದಿದೆ.
ಇ-ಸಿಮ್ ಸ್ಮಾರ್ಟ್‍ಫೋನ್
ಇತ್ತೀಚೆಗೆ, ಆ್ಯಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಅವರು 2022ರ ಐಫೋನ್ 14 ಪ್ರೋ ಮತ್ತು 14 ಪ್ರೋ ಮ್ಯಾಕ್ಸ್ ಅನ್ನು ಕ್ಯಾಮೆರಾಕ್ಕಾಗಿ ಹೋಲ್-ಪಂಚ್ ಕಟೌಟ್‍ಗೆ ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನೊಳಗೆ ಇ-ಸಿಮ್ ಸ್ಮಾರ್ಟ್‍ಫೋನ್‍ಗಳನ್ನು ಮಾತ್ರ ಬಿಡುಗಡೆ ಮಾಡಲು ತಯಾರಿ ನಡೆಸುವಂತೆ ಪ್ರಮುಖ ಯುಎಸ್ ಗ್ರಾಹಕರಿಗೆ ಆಪಲ್ ಕಂಪೆನಿ ಸಲಹೆ ನೀಡಿದೆ. ಆ್ಯಪಲ್ ಕಂಪೆನಿಯು ಇದೀಗ ಪ್ರಸ್ತುತ ಹೊಸದಾಗಿ ಬಿಡುಗಡೆಗೊಳ್ಳಲು ತಯಾರಾಗಿರುವ ಐಫೊನ್ 14 ಪ್ರೋ ಸರಣಿಗಳಲ್ಲಿ ಭೌತಿಕ ಸಿಮ್ ಮಾದರಿಯ ಸಿಮ್‍ಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ. ಹೀಗಾದಲ್ಲಿ 14ನೇ ಸರಣಿಯಿಂದ 15 ಸರಣಿಯವರೆಗೂ ಇದು ಮುಂದುವರೆಯಲಿದೆ.
ನೀರಿನ ಪ್ರತಿರೋಧ
ಈ ಮೊದಲು ಸಿಮ್ ಕಾರ್ಡ್ ಹಾಕಲು ಅವಕಾಶ ಇದ್ದ ಹಿಂದಿನ ಪೋನ್‍ಗಳಿಗಿಂತ ಇಂದಿನ 14ನೇ ಸರಣಿಯಲ್ಲಿ ಈ ವ್ಯವಸ್ಥೆ ತೆಗೆದುಹಾಕಿ 2 ಸಿಮ್ ಕಾರ್ಡ್ ಹಾಕುವ ಲಕ್ಷಣವನ್ನು ಸೇರಿಸುತ್ತಿದೆ. ಎಷ್ಟೋ ಮಂದಿ ಎರಡು ಸಿಮ್ ಕಾರ್ಡ್ ಬಳಸುವವರಿದ್ದಾರೆ. ಇವರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಆ್ಯಪಲ್ ಕಂಪೆನಿ ಈ ನಿರ್ಧಾರಕ್ಕೆ ಬಂದಿದೆ. ಸಿಮ್ ಕಾರ್ಡ್ ಸ್ಲಾಟ್ ತೆಗೆದುಹಾಕುವುದರಿಂದ ನೀರಿನ ಪ್ರತಿರೋಧವನ್ನು ಇನ್ನಷ್ಟು ಸುಧಾರಿಸಬಹುದು ಎಂದೂ ಹೇಳಲಾಗಿದೆ.
ಮುಂದಿನ ಪ್ರಮುಖ ಸರಣಿ ಐಫೋನ್ 14 ಲೈನ್-ಅಪ್, 2 ಟಿಗಾ ಬೈಟ್ (ಟಿಬಿ) ಸಂಗ್ರಹಣೆಯ ಸಾಮರ್ಥವನ್ನು ಹೊಂದಿರಲಿದೆ. ಆ್ಯಪಲ್ ಮುಂದಿನ ವರ್ಷ ಜಾರಿಗೆ ಬರುವ ಐಫೋನ್‌ನಲ್ಲಿ ಕ್ಯೂಎಲ್‍ಸಿ ಫ್ಲ್ಯಾಶ್ ಸಂಗ್ರಹಣೆಯನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಇದು 2 ಟಿಗಾ ಬೈಟ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‍ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ