HOME » NEWS » Tech » APPLE IPHONE 13 WILL NOT HAVE TOUCH ID EVERYTHING WE KNOW ABOUT THIS YEAR IPHONE STG HG

Iphone 13 ಇಷ್ಟೆಲ್ಲಾ ಫೀಚರ್ಸ್​ ಹೊಂದಿರಲಿದೆಯಾ? ನೀವು ತಿಳಿಯಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿದೆ

ಐಫೋನ್ 13 ಸರಣಿಯು ಬಯೋಮೆಟ್ರಿಕ್ ಆಯ್ಕೆಗಳಾದ ಫೇಸ್ ಐಡಿ ಮತ್ತು ಟಚ್ ಐಡಿಯೊಂದಿಗೆ ಬರಲಿದೆ ಎಂಬ ವರದಿಗಳು ಇಂಟರ್‌ನೆಟ್‌ನಲ್ಲಿ ಪ್ರಕಾಟವಾಗಿದ್ದವು. ಆದರೆ, ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಈಗ ಆ್ಯಪಲ್ ಐಫೋನ್‌ನಲ್ಲಿ ಟಚ್ ಐಡಿಯನ್ನು ಇಷ್ಟು ಬೇಗ ಅಪ್‌ಡೇಟ್‌ ಮಾಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ.

Trending Desk
Updated:July 20, 2021, 2:25 PM IST
Iphone 13 ಇಷ್ಟೆಲ್ಲಾ ಫೀಚರ್ಸ್​ ಹೊಂದಿರಲಿದೆಯಾ? ನೀವು ತಿಳಿಯಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿದೆ
iPhone 13
  • Share this:

Iphone 13: ಈ ವರ್ಷ ಬಿಡುಗಡೆಯಾಗುವ ಐಫೋನ್ 13 ಕುರಿತು ಕೆಲವು ವದಂತಿಗಳು ಹರಿದಾಡುತ್ತಿವೆ. ಆದರಲ್ಲಿ ಐಫೋನ್ ಈ ವರ್ಷ ಬಿಡುಗಡೆ ಮಾಡುವ ಐಫೋನ್ 13 ಅನ್ನು ಕಂಪನಿಯ ಟಚ್ ಐಡಿ ಫಿಂಗರ್​ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನದ ಅಪ್‌ಡೇಟ್‌ನೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಎಂಬ ಸುದ್ದಿ ಇಂಟರ್‌ನೆಟ್‌ನಲ್ಲೂ ಭಾರೀ ಸುದ್ದಿ ಮಾಡಿದ್ದು, ಆದರೆ ಇದು ಸುಳ್ಳು ಎಂದು ವರದಿಯ ಮೂಲಕ ತಿಳಿದುಬಂದಿದೆ. ಟಚ್ ಐಡಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನ ಐಫೋನ್‌ನ ಮುಖ್ಯ ಕಾರ್ಯವಲ್ಲವಾದರೂ, ಆದರೆ ಐಫೋನ್‌ ಬಳಕೆದಾರರು ಟಚ್ ಐಡಿ ಫಿಂಗರ್‌ಪ್ರಿಂಟ್ ಬಯೋಮೆಟ್ರಿಕ್ಸ್ ಬೇಕು ಎಂದು ಬಯುಸುತ್ತಾರೆ. ಏಕೆಂದರೆ ಐಫೋನ್‌ ಬಳಕೆದಾರರು ಫೇಸ್ ಐಡಿ ಮೂಲಕ ಐಫೋನ್ ಅನ್‌ಲಾಕ್‌ ಮಾಡಲು ಸಾಧ್ಯವಿಲ್ಲ ಅವರ ಪ್ರತಿ ಬಾರಿ ಲಾಕ್ ಮಾಡಲು ತಮ್ಮ ಪಿನ್‌ ಅಥವಾ ಸೈಡ್‌ ಕೀ ಅನ್ನು ಒತ್ತಬೇಕು ಇದು ಬಳಕೆದಾರರಲ್ಲಿ ಬೇಸರವನ್ನುಂಟು ಮಾಡಿದೆ. ಆದ್ದರಿಂದ ಕಂಪೆನಿಯು ಆ್ಯಪಲ್ಐ ಒಎಸ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿತು, ಅದರಲ್ಲಿ ಬಳಕೆದಾರರು ತಮ್ಮ ಐಫೋನ್ ಅನ್ಲಾಕ್ ಮಾಡಲು ಆಪಲ್ ವಾಚ್ ಅನ್ನು ಬಳಸಬಹುದು.ಆದರೆ ಎಲ್ಲಾ ಐಫೋನ್ ಬಳಕೆದಾರರ ಬಳಿ ಐಫೋನ್‌ ಆ್ಯಪಲ್ ವಾಚ್ ಇರುವುದಿಲ್ಲ ಹಾಗೂ ಅದು ಕೂಡ ಕೆಲವು ಮಿತಿಗಳನ್ನು ಸಹ ಹೊಂದಿದೆ.


ಐಫೋನ್ 13 ಸರಣಿಯು ಬಯೋಮೆಟ್ರಿಕ್ ಆಯ್ಕೆಗಳಾದ ಫೇಸ್ ಐಡಿ ಮತ್ತು ಟಚ್ ಐಡಿಯೊಂದಿಗೆ ಬರಲಿದೆ ಎಂಬ ವರದಿಗಳು ಇಂಟರ್‌ನೆಟ್‌ನಲ್ಲಿ ಪ್ರಕಾಟವಾಗಿದ್ದವು. ಆದರೆ, ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಈಗ ಆ್ಯಪಲ್ ಐಫೋನ್‌ನಲ್ಲಿ ಟಚ್ ಐಡಿಯನ್ನು ಇಷ್ಟು ಬೇಗ ಅಪ್‌ಡೇಟ್‌ ಮಾಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ. ಆದರೆ, ಈ ವರ್ಷದ ಐಫೋನ್‌ಗಾಗಿ ಆಪಲ್ ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಅನ್‌ಲಾಕ್‌ ತಂತ್ರಜ್ಞಾನವನ್ನು ಅಳವಡಿಸುವ ಯೋಜನೆಯಲ್ಲಿದೆ ಎಂದು ಗುರ್ಮನ್ ಹೇಳಿದ್ದಾರೆ, ಆದರೆ ಈ ಪೀಳಿಗೆಯಲ್ಲಿ ಈ ವೈಶಿಷ್ಟ್ಯವು ಗೋಚರಿಸದಿರಬಹುದು. ಐಫೋನ್ 13 ಸರಣಿಯು ಟಚ್ ಐಡಿಯನ್ನು ಅಪ್‌ಡೇಟ್‌ ಮಾಡುವುದಿಲ್ಲಾವಾದರು, ಇದು ಕಳೆದ ವರ್ಷದ ಡಿವೈಸ್‌ಗಿಂತ ಕೆಲವು ಪ್ರಮುಖ ಅಪ್‌ಡೇಟ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ.



ಈ ವರ್ಷದ ಆ್ಯಪಲ್ ಐಫೋನ್ ಸರಣಿಯು 120Hz ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದು ಹೇಳಲಾಗುತ್ತದೆ, ಮತ್ತು ದೊಡ್ಡ ಬ್ಯಾಟರಿಗಳೊಂದಿಗೆ ಬರುತ್ತದೆ. ಐಫೋನ್ 12 ಸರಣಿಯಂತೆಯೇ ಐಫೋನ್ 13 ವಿನ್ಯಾಸವನ್ನು ಕುರಿತು ಸುಳಿವು ಕಂಪನಿಯು ಸುಳಿವು ನೀಡಿದೆ, ಸಣ್ಣ ವ್ಯತ್ಯಾಸಗಳೊಂದಿಗೆ, ಮುಖ್ಯವಾಗಿ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸದಲ್ಲಿ ಬದಲಾವಣೆ ಉಂಟಾಗಲಿದೆ. ಈ ವರ್ಷ ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಸುಧಾರಿತ ಅಲ್ಟ್ರಾ-ವೈಡ್ ಕ್ಯಾಮೆರಾಗಳೊಂದಿಗೆ ಬರಲಿದೆ ಎಂದು ಹೇಳಲಾಗಿದೆ.




Smartphone: ಡಿಸ್​ಪ್ಲೇ ಒಡೆದರೆ ಚಿಂತಿಸಬೇಕಾಗಿಲ್ಲ! ಒಂದೇ ನಿಮಿಷದಲ್ಲಿ ತಾನೇ ಜೋಡಿಕೊಳ್ಳೋ ಹೊಸಾ ಟೆಕ್!

ಆ್ಯಪಲ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಲಿದೆ ಎಂಬ ವದಂತಿ ಇದೆ. ಕ್ಯುಪರ್ಟಿನೋ ಮೂಲದ ದೈತ್ಯ ಕಂಪನಿಯು ಈ ವರ್ಷವೂ ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ವರದಿಯು ಸೆಪ್ಟೆಂಬರ್ - ನವೆಂಬರ್ ನಡುವೆ ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳು ಬಿಡುಗಡೆ ಮಾಡಲಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.

First published: July 20, 2021, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories