ನೀವು ಆ್ಯಪಲ್ iPhone-13 ಖರೀದಿಸುವ ಪ್ಲ್ಯಾನ್ ಮಾಡ್ತಾ ಇದ್ದೀರಾ? ಅಮೆಜಾನ್, ಫ್ಲಿಪ್‌ಕಾರ್ಟ್ ನಲ್ಲಿದೆ ಸೂಪರ್ ಆಫರ್

ಸಾಮಾನ್ಯವಾಗಿ ಈ ಐಫೋನ್ ಪ್ರಿಯರು ‘ಯಾವಾಗಪ್ಪಾ ಈ ಆ್ಯಪಲ್ ಐಫೋನ್ ಗಳ ಬೆಲೆಯ ಮೇಲೆ ರಿಯಾಯಿತಿ ಸಿಗುತ್ತೆ ಮತ್ತು ಕಂಪನಿಯವರು ಬೆಲೆಯನ್ನು ಕಡಿಮೆ ಮಾಡುತ್ತಾರೆ’ ಎಂದು ಕಾದು ಕುಳಿತಿರುತ್ತಾರೆ. ಈಗ ನೀವು ಆ್ಯಪಲ್ ಐಫೋನ್ 13 ಅನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದಿರದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆ್ಯಪಲ್ ಐಫೋನ್ 13

ಆ್ಯಪಲ್ ಐಫೋನ್ 13

  • Share this:
ಸಾಮಾನ್ಯವಾಗಿ ಈ ಐಫೋನ್ (iPhone) ಪ್ರಿಯರು ‘ಯಾವಾಗಪ್ಪಾ ಈ ಆ್ಯಪಲ್ ಐಫೋನ್ ಗಳ ಬೆಲೆಯ ಮೇಲೆ ರಿಯಾಯಿತಿ (Offer) ಸಿಗುತ್ತೆ ಮತ್ತು ಕಂಪನಿಯವರು (Company) ಬೆಲೆಯನ್ನು ಕಡಿಮೆ ಮಾಡುತ್ತಾರೆ’ ಎಂದು ಕಾದು ಕುಳಿತಿರುತ್ತಾರೆ. ಈಗ ನೀವು ಆ್ಯಪಲ್ ಐಫೋನ್ 13 ಅನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದಿರದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇ-ಕಾಮರ್ಸ್ ದೈತ್ಯರಾದ ಅಮೆಜಾನ್ (Amazon) ಮತ್ತು ಫ್ಲಿಪ್‌ಕಾರ್ಟ್ ನಲ್ಲಿ (Flipkart) ಈ ಆ್ಯಪಲ್ ಐಫೋನ್ 13 ಎಕ್ಸ್ಚೇಂಜ್ ಆಫರ್ ಮತ್ತು ಇತರೆ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ ಭಾರಿ ರಿಯಾಯಿತಿಗೆ ಲಭ್ಯವಿದೆ. ಆ್ಯಪಲ್ ಐಫೋನ್ 13 ಪ್ರಸ್ತುತ ಅಮೆಜಾನ್ ನಲ್ಲಿ 72,990 ರೂಪಾಯಿಗೆ ಮಾರಾಟವಾಗುತ್ತಿದ್ದು, ಅದರ ನೈಜವಾದ ಬೆಲೆ 79,900 ರೂಪಾಯಿಯಾಗಿದೆ.

ಇದಲ್ಲದೆ, ಅಮೆಜಾನ್ ನಲ್ಲಿ ಐಫೋನ್ 13 ನ ಮೇಲೆ ಆಕರ್ಷಕ ವಿನಿಮಯ ಮತ್ತು ಬ್ಯಾಂಕ್ ಕೊಡುಗೆಗಳಿವೆ. ಐಫೋನ್ ಖರೀದಿಸಲು ಬಯಸುವವರು ರಿಯಾಯಿತಿಯನ್ನು ಪಡೆಯಬಹುದು ಮತ್ತು ಅಮೆಜಾನ್ ನಲ್ಲಿ ಗಣನೀಯ ಪ್ರಮಾಣದ ಹಣವನ್ನು ಸಹ ನೀವು ಉಳಿಸಬಹುದು.

ಅಮೆಜಾನ್ ನಲ್ಲಿ ಶೇಕಡಾ 9 ರಷ್ಟು ರಿಯಾಯಿತಿ
ಅಮೆಜಾನ್ ನವರು ಆ್ಯಪಲ್ ಐಫೋನ್ 13 ಮೇಲೆ ಶೇಕಡಾ 9 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ, ಇದು ಸ್ಮಾರ್ಟ್‌ಫೋನ್ ನ ಬೆಲೆಯನ್ನು 72,990 ರೂಪಾಯಿಗೆ ಇಳಿಸುತ್ತದೆ. ಇದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಗಳು ಅಥವಾ ಇಎಂಐ ವಹಿವಾಟುಗಳ ಮೂಲಕ ಖರೀದಿಸುವಾಗ ಖರೀದಿದಾರರು 4,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು, ಇದು ಅಮೆಜಾನ್ ನಲ್ಲಿ ಐಫೋನ್ 13 ರ ಬೆಲೆಯನ್ನು 68,990 ರೂಪಾಯಿಗೆ ಇಳಿಸುತ್ತದೆ.

ಇದನ್ನೂ ಓದಿ: Realme Offer: ₹15,999 ಮೌಲ್ಯದ ಸ್ಮಾರ್ಟ್​​ಫೋನ್​​ ಕೇವಲ 10,999 ರೂ.ಗೆ ಲಭ್ಯ; ಬರೋಬ್ಬರಿ ₹5 ಸಾವಿರ ಕಡಿತ

ಇದಲ್ಲದೆ, ಅಮೆಜಾನ್ ನಲ್ಲಿ ಐಫೋನ್ 13 ಮೇಲೆ 12,550 ರೂಪಾಯಿಗಳವರೆಗೆ ಎಕ್ಸ್ಚೇಂಜ್ ಆಫರ್ ಇದೆ, ಇದು ಐಫೋನ್ 13 ರ ಬೆಲೆಯನ್ನು ಮೂಲ 128 ಜಿಬಿ ಸ್ಟೋರೇಜ್ ರೂಪಾಂತರಕ್ಕೆ ಅತ್ಯಂತ ಆಕರ್ಷಕ 56,490 ರೂಪಾಯಿಗೆ ಇಳಿಸಿದೆ.

ಫ್ಲಿಪ್‌ಕಾರ್ಟ್ ಅಲ್ಲಿಯೂ ಇದೆ ಸ್ಪೆಷಲ್ ಆಫರ್
ಫ್ಲಿಪ್‌ಕಾರ್ಟ್, ವಾಲ್ಮಾರ್ಟ್ ಒಡೆತನದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ 72,999 ರೂಪಾಯಿಗಳ ಪಟ್ಟಿಯ ಬೆಲೆಯ ನಂತರ, ಐಫೋನ್ 13 ರಲ್ಲಿ 15,500 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ಇದು ಐಫೋನ್ 13 ರ ಬೆಲೆಯನ್ನು 57,499 ರೂಪಾಯಿಗೆ ಇಳಿಸುತ್ತದೆ, ಇದು ಇತ್ತೀಚಿನ ಪೀಳಿಗೆಯ ಐಫೋನ್ ಮಾದರಿಯಲ್ಲಿ ಮತ್ತೆ ಸೂಪರ್ ಡೀಲ್ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಜೊತೆಗೆ ಆ್ಯಪಲ್ ಮರು ಮಾರಾಟಗಾರರಿಗೆ ಎಕ್ಸ್ಚೇಂಜ್ ಆಫರ್ ಅನ್ನು ಸಹ ಹೊಂದಿದೆ.

ಇಂಡಿಯಾ ಐಸ್ಟೋರ್ ನಲ್ಲಿಯೂ ಎಕ್ಸ್ಚೇಂಜ್ ಆಫರ್
ಭಾರತದಲ್ಲಿ ಅಧಿಕೃತ ಮರು ಮಾರಾಟಗಾರರಾದ ಇಂಡಿಯಾ ಐಸ್ಟೋರ್ ನಲ್ಲಿ ವೆನಿಲ್ಲಾ ಐಫೋನ್ 13 ಮೇಲೆ 5,000 ರೂಪಾಯಿಗಳ ತ್ವರಿತ ಸ್ಟೋರ್ ರಿಯಾಯಿತಿಯನ್ನು ನೀಡುತ್ತಿದೆ, ಇದು 79,900 ರೂಪಾಯಿಗಳ ಐಫೋನ್ ಅನ್ನು 74,900 ರೂಪಾಯಿಗೆ ಇಳಿಸಿದೆ. ಇದಲ್ಲದೆ, ಎಚ್‌ಡಿ‌ಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ 4,000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಇದೆ, ಇದು ಐಫೋನ್ 13 ರ ಬೆಲೆಯನ್ನು 70,900 ರೂಪಾಯಿಗೆ ಇಳಿಸಿದೆ.

ಇದನ್ನೂ ಓದಿ: Apple: ದೈತ್ಯ ಮೈಕ್ರೋಸಾಫ್ಟ್ ಮತ್ತು ನಿಂಟೆಂಡೊವನ್ನು ಹಿಂದಿಕ್ಕಿದ ಆ್ಯಪಲ್, ಅಡ್ಡ ಸಿಕ್ಕವರೆಲ್ಲಾ ಧೂಳಿಪಟ!

ಇದಲ್ಲದೆ, ಎಕ್ಸ್ಚೇಂಜ್ ಆಫರ್ ಸಹ ಇದೆ, ಅಲ್ಲಿ ಆ್ಯಪಲ್ ಮರು ಮಾರಾಟಗಾರರು ಸಹ ಎಕ್ಸ್ಚೇಂಜ್ ಆಫರ್ ಅನ್ನು ಹೊಂದಿದ್ದಾರೆ, ಅಲ್ಲಿ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಬಹುದು. ಇಂಡಿಯಾ ಐಸ್ಟೋರ್ ವೆಬ್‌ಸೈಟ್ ನಲ್ಲಿ ಉತ್ತಮ ಸ್ಥಿತಿಯ ಐಫೋನ್ ಎಕ್ಸ್ ಆರ್ ಮೌಲ್ಯವನ್ನು 18,000 ರೂಪಾಯಿಗಳೆಂದು ತೋರಿಸುತ್ತದೆ, ಇದು ಐಫೋನ್ 13 ರ ಪರಿಣಾಮಕಾರಿ ಬೆಲೆಯನ್ನು ಗಣನೀಯವಾಗಿ ಕಡಿಮೆ ಎಂದರೆ 52,900 ರೂಪಾಯಿಗೆ ಇಳಿಸಿದೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: