HOME » NEWS » Tech » APPLE IPHONE 12 LAUNCHED HERE THE IPHONE 12 MINI PRICE AND DETAILS HG

Apple Event Highlights: ಆ್ಯಪಲ್​ ಐಫೋನ್​ 12 ಸಿರೀಸ್​ ಮಾರುಕಟ್ಟೆಗೆ; ಹೇಗಿದೆ? ಬೆಲೆ ಎಷ್ಟು?

iPhone 12: ಈ ಬಾರಿ ಆ್ಯಪಲ್​ 5.4 ಇಂಚಿನ ಐಫೋನ್​ 12 ಮಿನಿ, 6.1 ಇಂಚಿನ ಐಫೋನ್​ 12, 6.1 ಇಂಚಿನ ಐಫೋನ್​ 12 ಪ್ರೊ ಮತ್ತು 6.7 ಇಂಚಿನ ಐಫೋನ್​ 12 ಪ್ರೊ ಮ್ಯಾಕ್ಸ್​ ಪರಿಚಯಿಸಿದೆ

news18-kannada
Updated:October 14, 2020, 9:07 AM IST
Apple Event Highlights: ಆ್ಯಪಲ್​ ಐಫೋನ್​ 12 ಸಿರೀಸ್​ ಮಾರುಕಟ್ಟೆಗೆ; ಹೇಗಿದೆ? ಬೆಲೆ ಎಷ್ಟು?
iPhone 12
  • Share this:
ಜನಪ್ರಿಯ ಆ್ಯಪಲ್​ ಸಂಸ್ಥೆ ಐಫೋನ್​ 12 ಸಿರೀಸ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐಫೋನ್​​ 12 ಮಿನಿ, ಐಫೋನ್​​ 12, ಐಫೋನ್​ 12 ಪ್ರೊ,  ಐಫೋನ್​​ 12 ಪ್ರೊ ಮ್ಯಾಕ್ಸ್​ ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ.  ಆ್ಯಪಲ್​ ಸಂಸ್ಥೆ ಉತ್ಪಾದಿಸುವ ಐಫೋನ್​ಗಳಿಗೆ ಸದಾ ಬೇಡಿಕೆ ಇದೆ. ನೂತನ ಐಫೋನ್ ಸಿರೀಸ್​ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸುತ್ತಾ ಬಂದಿದೆ. ಕಳೆದ ಬಾರಿ ಆ್ಯಪಲ್​ ಸಂಸ್ಥೆ ಕಡಿಮೆ ಬೆಲೆಯ ಐಫೋನ್​ ಎಸ್​ಇ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿತ್ತು. ಭಾರತದಲ್ಲೂ ಉತ್ಪಾದಿಸಿ ಬೇರೆ ದೇಶಕ್ಕೆ ರವಾನೆ ಮಾಡಿತ್ತು. ಇದೀಗ ಐಫೋನ್​​ 12 ಸಿರೀಸ್ ​ಅನ್ನು ಪರಿಚಯಿಸಿದೆ. ಇಂದು ರಾತ್ರಿ 10 ಗಂಟೆಗೆ ಮಾರುಕಟ್ಟೆಗೆ ಪರಿಚಯ ಮಾಡಿದೆ. ಅಕ್ಟೋಬರ್​ 30ರಿಂದ ಐಫೋನ್​​ 12 ಸಿರೀಸ್​ ಅನ್ನು ಸೇಲ್​ ಮಾಡುತ್ತಿದೆ.​

ಐಫೋನ್​ 12 ಸಿರೀಸ್​ 5ಜಿ ನೆಟ್​​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, A14 ಬಿಯಾನಿಕ್​​ ಚಿಪ್​ಸೆಟ್​ ಬೆಂಬಲವನ್ನು ಪಡೆದಿದೆ. ಸೂಪರ್​ ರೆಟಿನಾ ಎಕ್ಸ್​ಡಿಆರ್​ ಡಿಸ್​ಪ್ಲೇ ಅಳವಡಿಸಲಾಗಿದೆ. ಇನ್ನು ಐಫೋನ್​ 12 ಮತ್ತು 12 ಮಿನಿ 64GB, 128GB ಮತ್ತು 256GB ಮಾಡೆಲ್​ ಅನ್ನು ಪರಿಚಯಿಸಿದ್ದು, ನೀಲಿ, ಕಪ್ಪು ,ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಪರಿಚಯಿಸಿದೆ. ಐಫೋನ್​ 12 ಪ್ರೊ ಮತ್ತು ಪ್ರೊ ಮ್ಯಾಕ್ಸ್​ 128GB, 256GB ಮತ್ತು 512GB ಆಯ್ಕೆಯಲ್ಲಿ ಪರಿಚಯಿಸಿದೆ. ಸಿಲ್ವರ್​, ಗೋಲ್ಡ್​, ನೀಲಿ ಬಣ್ಣದಲ್ಲಿ ಪರಿಚಯಿಸಿದೆ.

ಬೆಲೆ: ಐಫೋನ್​ 12 ಬೆಲೆ 79,900 ರೂ ಆಗಿದ್ದು, ಐಫೋನ್ 12 ಮಿನಿ ಬೆಲೆ 69,900 ರೂ ಆಗಿದೆ. ಅದರಂತೆ ಪ್ರೊ ಬೆಲೆ 1,19,900 ರೂ. ಮತ್ತು ಪ್ರೊ ಮ್ಯಾಕ್ಸ್​ ಬೆಲೆ 1,29,900 ರೂ.ಆಗಿದೆ.

Youtube Video


ನೂತನ ಐಫೋನ್​​​ 12 ಸಿರೀಸ್​ 5ಜಿ ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ.
Published by: Harshith AS
First published: October 14, 2020, 7:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories