ಸೆ.27 ರಿಂದ ‘ಐಫೋನ್​ 11‘ ಸೀರಿಸ್​ ‘ಮಾರಾಟ ಪ್ರಾರಂಭ; ಭಾರತದ ಮಾರುಕಟ್ಟೆ ಬೆಲೆ ಇಲ್ಲಿದೆ

ಆ್ಯಪಲ್​ ಕಂಪೆನಿ ಬಿಡುಗಡೆ ಮಾಡಿರುವ ನೂತನ 11 ಸಿರೀಸ್​ ಫೋನ್​ಗಳ ಪ್ರಾರಂಭಿಕ ಬೆಲೆಯನ್ನು 64,900 ರೂಪಾಯಿಯಿಂದ ಆರಂಭಿಸಿದೆ.

news18-kannada
Updated:September 11, 2019, 4:34 PM IST
ಸೆ.27 ರಿಂದ ‘ಐಫೋನ್​ 11‘ ಸೀರಿಸ್​ ‘ಮಾರಾಟ ಪ್ರಾರಂಭ; ಭಾರತದ ಮಾರುಕಟ್ಟೆ ಬೆಲೆ ಇಲ್ಲಿದೆ
.
  • Share this:
ಆ್ಯಪಲ್​ ಕಂಪೆನಿ ಸಿರೀಸ್​ ಫೋನ್​ಗಳಾದ ಐಫೋನ್​ 11, ಐಫೋನ್​ 11 ಪ್ರೊ, ಐಫೋನ್​ 11 ಪ್ರೊ ಮ್ಯಾಕ್ಸ್​ ಫೋನ್​ಗಳು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನೂತನ ಮಾದರಿಯ ಈ ಫೋನ್​ಗಳು ಸೆ. 27 ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ.

ಆ್ಯಪಲ್​ ಕಂಪೆನಿ ಬಿಡುಗಡೆ ಮಾಡಿರುವ ನೂತನ 11 ಸಿರೀಸ್​ ಫೋನ್​ಗಳ ಪ್ರಾರಂಭಿಕ ಬೆಲೆಯನ್ನು 64,900 ರೂಪಾಯಿಯಿಂದ ಆರಂಭಿಸಿದೆ. ಸ್ಮಾರ್ಟ್​ಫೋನ್​ಗಳ ಎದುರು ತೀವ್ರ ಪೈಪೋಟಿ ನೀಡಲು ಸಜ್ಜಾಗಿರುವ ಐಫೋನ್​ ತನ್ನ ಬೆಲೆಯಲ್ಲಿ ಬದಲಾವಣೆ ತಂದಿದೆ.

ಐಫೋನ್​ 11 ಪ್ರೊ ಬೆಲೆ 99,900 ರುಪಾಯಿಯಾಗಿದ್ದು, ಐಫೋನ್​ 11 ಪ್ರೊ ಮ್ಯಾಕ್ಸ್​​ 1,09,900 ರೂಪಾಯಿಯಾಗಿದೆ. ಇದರ ಜೊತೆಗೆ ಆ್ಯಪಲ್​ ಕಂಪೆನಿ ಈ ಹಿಂದೆ​ ಬಿಡುಗಡೆ ಮಾಡಿದ  ಐಫೋನ್​ 8 ಮತ್ತು ಐಫೋನ್​​ ಎಕ್ಸ್​ಆರ್​ ಬೆಲೆಯಲ್ಲಿ ಇಳಿಕೆ ಮಾಡಿದೆ.

ಫೋನ್​ 11 ಸರಣಿ ಫೋನ್​ಗಳ ಬೆಲೆ ವಿವರ:

ಐಫೋನ್​ 11:

64GB RAM​ ಸಾಮರ್ಥ್ಯದ ​ಫೋನ್​ ಬೆಲೆ- 64,900

256GB RAM​ ಸಾಮರ್ಥ್ಯದ ​ಫೋನ್​ ಬೆಲೆ- 69,900512GB RAM​ ಸಾಮರ್ಥ್ಯದ ಫೋನ್​ ಬೆಲೆ- 79,900

ಐಫೋನ್​ 11 ಪ್ರೊ:

64GB RAM​ ಸಾಮರ್ಥ್ಯದ ​ಫೋನ್​ ಬೆಲೆ- 99,900

256GB RAM​ ಸಾಮರ್ಥ್ಯದ ​ಫೋನ್​ ಬೆಲೆ- 1,13,900

512GB RAM​ ಸಾಮರ್ಥ್ಯದ ​ಫೋನ್​ ಬೆಲೆ- 1,31,900

ಐಫೋನ್​ 11 ಪ್ರೊ ಮ್ಯಾಕ್ಸ್​:

64GB RAM​ ಸಾಮರ್ಥ್ಯದ ​ಫೋನ್​ ಬೆಲೆ- 1,09,900

256GB RAM​ ಸಾಮರ್ಥ್ಯದ ​ಫೋನ್​ ಬೆಲೆ- 1,23,900

512GB RAM ಸಾಮರ್ಥ್ಯದ ​ಫೋನ್​ ಬೆಲೆ- 1,41,900

ಐಫೋನ್​​ 11 ಸೀರಿಸ್ ಫೋನ್​​ ಬಿಡುಗಡೆ ಕಾರ್ಯಕ್ರಮದಲ್ಲಿ ಆ್ಯಪಲ್​ ವಾಚ್​​ ಸೀರಿಸ್​ 5 ಮತ್ತು ಐಪ್ಯಾಡ್​ 7 ಮಾದರಿಯನ್ನು ಪರಿಚಯಿಸಿದೆ. ಇದರ ಜೊತೆಗೆ ಐವಾಚ್​ ಸಿರೀಸ್​​ 3 ಬೆಲೆಯಲ್ಲಿ ಇಳಿಕೆ ಮಾಡಿದೆ.

ಹೊಸ ಐಫೋನ್​ 11 ಸಿರೀಸ್​ ಪೋನ್​ ಆ್ಯಪಲ್​ ರಿಟೇಲ್​ ಮಳಿಗೆಗಳಲ್ಲಿ, ಆನ್​ಲೈನ್​ ಸ್ಟೋರ್​​ಗಳಲ್ಲಿ ಲಭ್ಯವಾಗಲಿದೆ. ನೂತನ ಫೋನ್​ಗಳ ಮೇಲೆ ಟೆಲಿಕಾಂ ಮತ್ತು ಬ್ಯಾಂಕ್​ಗಳ ಆರಂಭಿಕ ಕೊಡುಗೆ ಹಾಗೂ ಆಫರ್​ಗಳನ್ನು ನೀಡುವ ನಿರೀಕ್ಷೆಯಿದೆ.

First published: September 11, 2019, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading