HOME » NEWS » Tech » APPLE IPHONE 11 AVAILABLE AT EFFECTIVE PRICE OF RS 41900 DURING HOLI SALE HG

ಹೋಳಿ ಹಬ್ಬದ ಪ್ರಯುಕ್ತ ಆ್ಯಪಲ್​ ಪ್ರಾಡೆಕ್ಟ್​ ಮೇಲೆ ಭರ್ಜರಿ ಆಫರ್​; ಕಡಿಮೆ ಬೆಲೆಗೆ ಐಫೊನ್​ 11

ಆ್ಯಪಲ್ ಹೋಳಿ ಹಬ್ಬದ ಪ್ರಯುಕ್ತ ಈ ಆಫರ್​ ಹಮ್ಮಿಕೊಂಡಿದೆ. ಆನ್​ಲೈನ್​ ಮತ್ತು ಆಫ್​ಲೈನ್​ ಸ್ಟೋರ್​ಗಳಲ್ಲಿ ಕಡಿಮೆ ಬೆಲೆಗೆ ಆ್ಯಪಲ್​ ಪ್ರಾಡೆಕ್ಟ್​ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. 

news18-kannada
Updated:March 25, 2021, 10:21 AM IST
ಹೋಳಿ ಹಬ್ಬದ ಪ್ರಯುಕ್ತ ಆ್ಯಪಲ್​ ಪ್ರಾಡೆಕ್ಟ್​ ಮೇಲೆ ಭರ್ಜರಿ ಆಫರ್​; ಕಡಿಮೆ ಬೆಲೆಗೆ ಐಫೊನ್​ 11
iphone 11
  • Share this:
ಹೋಳಿ ಹಬ್ಬದ ಸಂಭ್ರಮಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇದೆ. ಹೀಗಿರುವಾಗ ಜನಪ್ರಿಯ ಬ್ರಾಂಡ್​ ಆಗಿರುವ ಆ್ಯಪಲ್​​​ ತನ್ನ ಐಫೋನ್​ಗಳ ಮೇಲೆ ರಿಯಾಯಿತಿ ನೀಡಿದೆ. ಐಫೋನ್​ 11, ಐಫೊನ್​ 12, ಮ್ಯಾಕ್​ಬುಕ್​ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಆ್ಯಪಲ್ ಹೋಳಿ ಹಬ್ಬದ ಪ್ರಯುಕ್ತ ಈ ಆಫರ್​ ಹಮ್ಮಿಕೊಂಡಿದೆ. ಆನ್​ಲೈನ್​ ಮತ್ತು ಆಫ್​ಲೈನ್​ ಸ್ಟೋರ್​ಗಳಲ್ಲಿ ಕಡಿಮೆ ಬೆಲೆಗೆ ಆ್ಯಪಲ್​ ಪ್ರಾಡೆಕ್ಟ್​ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.  ಐಫೊನ್​ 12 ಮತ್ತು ಐಫೋನ್​ 12 ಮಿನಿ ಮೇಲೆ ಡಿಸ್ಕೌಂಟ್​​ ನೀಡಿದೆ. ಅಂತೆಯೇ ಐಫೋನ್​ 11 ಮೇಲೆ 5 ಸಾವಿರ ಕ್ಯಾಶ್​ಬ್ಯಾಕ್​ ಮತ್ತು ಅಸೆಸ್ಸರೀಸ್​ ಮೇಲೆ 8 ಸಾವಿರ ಡಿಸ್ಕೌಂಟ್ ನೀಡಿದೆ. ಅಷ್ಟು ಮಾತ್ರವಲ್ಲದೆ, ಎಕ್ಸ್​ಚೇಂಜ್​ ಆಫರ್​ ನೀಡಿದ್ದು, 3 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತದೆ ಹಾಗಾಗಿ ಕಡಿಮೆ ಬೆಲೆಗೆ ಐಫೋನ್​ 11 ಖರೀದಿಸುವ ಅವಕಾಶ ಒದಗಿಸಿದೆ.

ಐಫೊನ್​ 12 ಮಿನಿಯನ್ನು 48,900 ರೂ ಮತ್ತು ಐಫೊನ್​ 12 ಅನ್ನು 65,900 ರೂ.ಗೆ ಸೇಲ್​ ಮಾಡುತ್ತಿದೆ. ಗ್ರಾಹಕರಿಗಾಗಿ ಹೆಚ್​ಡಿಎಫ್​ಸಿ ಕ್ಯಾಶ್​​ಬ್ಯಾಕ್​ ಆಫರ್​ ನೀಡುತ್ತಿದ್ದು, ಮಾರ್ಚ್​ 27ರವರೆಗೆ ಅವಕಾಶ ನೀಡಿದೆ. ಅಂತೆಯೇ ಮ್ಯಾಕ್​ಬುಕ್​ ಏರ್ (98,900ರೂ)​ ಮತ್ತು ಮ್ಯಾಕ್​ಬುಕ್​ ಪ್ರೊವನ್ನು ( 1,22,900 ರೂ)ಗೆ ಮಾರಾಟ ಮಾಡುತ್ತಿದೆ. ಇನ್ನು ಮ್ಯಾಕ್​ಬುಕ್​ ಮೇಲೆ ಹೆಚ್​ಡಿಎಫ್​ಸಿ ಬ್ಯಾಂಕ್​ ಮೂಲಕ 6 ಸಾವಿರ ಕ್ಯಾಶ್​ಬ್ಯಾಕ್​ ನೀಡಿದರೆ, ಮ್ಯಾಕ್​ಬುಕ್​ ಪ್ರೊ ಮೇಲೆ 7 ಸಾವಿರ ಕ್ಯಾಶ್​ಬ್ಯಾಕ್​ ನೀಡುತ್ತಿದೆ.
Youtube Video

ಐಫೋನ್​ 11 2019ರವೇಳೆಗೆ ಬಿಡುಗಡೆಯಾಯಿತು. 6.10 ಇಂಚಿನ ಲಿಕ್ವಿಡ್​ ರೆಟಿನಾ ಡಿಸ್​​ಪ್ಲೇ ಮತ್ತು ಹೌಸ್​ ಎ-13 ಬಯೋನಿಕ್​ ಚಿಪ್​ಸೆಟ್​ ಹೊಂದಿದೆ. ಡುಯೆಲ್ ಕ್ಯಾಮೆರಾ ಸೆಟಪ್ ಹೊಮದಿರುವ ಐಫೊನ್ 11ನಲ್ಲಿ 12 ಮೆಗಾಫಿಕ್ಸೆಲ್​ ಸೆನ್ಸಾರ್​ ನೀಡಲಾಗಿದೆ. ಗ್ರಾಹಕರಿಗಾಗಿ ಕಪ್ಪು, ಹಸಿರು, ಕೆಂಪು, ಹಳದಿ, ಬಿಳಿ ಬಣ್ಣದಲ್ಲಿ ಮಾರಾಟ ಮಾಡುತ್ತಿದೆ.
Published by: Harshith AS
First published: March 25, 2021, 10:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories