iPhone 13 Proಗಾಗಿ ಹೊಸ ಕ್ಯಾಮರಾ ಫೀಚರ್ಸ್ ಪರಿಚಯಿಸಲಿರುವ Apple

ಈ ಫೀಚರ್ ಅನ್ನು ಸಕ್ರಿಯಗೊಳಿಸಲು ಐಫೋನ್ 13 ಪ್ರೊ ಹಾಗೂ ಐಫೋನ್ 13 ಪ್ರೊ ಮ್ಯಾಕ್ಸ್ ಬಳಕೆದಾರರು ಸೆಟ್ಟಿಂಗ್ಸ್ > ಕ್ಯಾಮೆರಾ > ಫಾರ್ಮ್ಯಾಟ್ಸ್ > Apple ProRes ನಲ್ಲಿ ಟಾಗಲ್ ಮಾಡಿದರೆ ಸಾಕು.

iPhone 13 Pro

iPhone 13 Pro

 • Share this:
  Apple ತನ್ನ ಐಒಎಸ್ 15.1 ಬೀಟಾ 3 ಅನ್ನು ಡೆವಲಪರ್‌ಗಳಿಗಾಗಿ ಬಿಡುಗಡೆ ಮಾಡುತ್ತಿದ್ದು ಈ ಆವೃತ್ತಿಯು ಹೊಸ ಐಫೋನ್ 13 ಪ್ರೊ ಸೀರೀಸ್‌ಗೆ ಕ್ಯಾಮೆರಾ ಸುಧಾರಣೆಗಳನ್ನುಂಟು ಮಾಡಲಿದೆ. 9to5Mac ತಿಳಿಸಿರುವ ಪ್ರಕಾರ ಬೀಟಾ ಆವೃತ್ತಿಯು ProRes ವಿಡಿಯೋವನ್ನು ತರುತ್ತಿದ್ದು ಇದು ವಿಡಿಯೋ ರೆಸಲ್ಯೂಶನ್ ಅನ್ನು ಬೆಂಬಲಿಸುವ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ಬಳಸಲು ಆ್ಯಪಲ್ ಅಭಿವೃದ್ಧಿಪಡಿಸಿರುವ ಉನ್ನತ-ಗುಣಮಟ್ಟದ ವಿಡಿಯೋ ಕಂಪ್ರೆಷನ್ ಫಾರ್ಮ್ಯಾಟ್ ಆಗಿದ್ದು ಇದು 8ಕೆ ವರೆಗೆ ವಿಡಿಯೋ ರೆಸಲ್ಯೂಶನ್‌ಗೆ ಬೆಂಬಲ ನೀಡಲಿದೆ.

  ಏನೆಲ್ಲಾ ಫೀಚರ್ಸ್​​ ಇರಲಿದೆ? 

  ವಾಣಿಜ್ಯ, ವೈಶಿಷ್ಟ್ಯಗಳು, ಬ್ಲು-ರೇ ಹಾಗೂ ಸ್ಟ್ರೀಮಿಂಗ್‌ ಕ್ಷೇತ್ರದಲ್ಲಿ ಎಚ್‌ಡಿ ಬ್ರಾಡ್‌ಕಾಸ್ಟ್ ಫೈಲ್‌ಗಳಿಗೆ ಅಂತಿಮ ಫಾರ್ಮ್ಯಾಟ್ ಡೆಲಿವರಿ ವಿಧಾನದಂತೆ ವ್ಯಾಪಕವಾಗಿ ಬಳಸಲಾಗುತ್ತದೆ. ಸ್ಕ್ರೀನ್‌ಶಾಟ್ ವೈಶಿಷ್ಟ್ಯವು ಬಳಕೆದಾರರಿಗೆ 1080p ರೆಸಲ್ಯೂಶನ್‌ ವಿಡಿಯೋಗಳನ್ನು 60fps ಅಥವಾ 4K ರೆಸಲ್ಯೂಶನ್‌ನಲ್ಲಿ ಕ್ಯಾಪ್ಚರ್ ಮಾಡಬಹುದಾಗಿದ್ದು ಐಫೋನ್ 13 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಡಿವೈಸ್‌ಗಳಲ್ಲಿ ಲಭ್ಯವಿರಲಿದೆ. ಈ ಫೀಚರ್ 128ಜಿಬಿ ಸ್ಟೋರೇಜ್ ಡಿವೈಸ್‌ಗಳಲ್ಲಿ ಮಾತ್ರ ಲಭ್ಯ ಎಂಬುದನ್ನು ಗಮನಿಸಬೇಕು.

  ಸುದೀರ್ಘ ವಿಡಿಯೋಗಳ ಸೆರೆಗೆ ಸಹಾಯಕಾರಿ 

  ನಿರೀಕ್ಷೆಯಂತೆಯೇ, ProRes ಮೋಡ್‌ನಲ್ಲಿ ವಿಡಿಯೋಗಳನ್ನು ದೊಡ್ಡ ಗಾತ್ರದಲ್ಲಿ ರೆಕಾರ್ಡ್ ಮಾಡಬಹುದಾಗಿದ್ದು, ಬಳಕೆದಾರರು ಸ್ಟೋರೇಜ್ ಡ್ರೈವ್‌ಗೆ ಇದನ್ನು ವರ್ಗಾಯಿಸಬಹುದಾಗಿದೆ. ಒಂದು ನಿಮಿಷದ ದೀರ್ಘವಿರುವ ವಿಡಿಯೋವನ್ನು 10-bit HDR ಅನ್ನು 1.7ಜಿಬಿ ಹಾಗೂ 6 ಜಿಬಿ ಗೆ 4K ನಲ್ಲಿ ರೆಕಾರ್ಡ್ ಮಾಡಬಹುದು. ಇದಲ್ಲದೆ ProRes ಟಾಗಲ್ ಅನ್ನು ಆನ್ ಆಗಿದ್ದರೆ, ಸ್ಟೋರೇಜ್ ಸಾಮರ್ಥ್ಯವನ್ನು ಅನುಸರಿಸಿ ಲಭ್ಯವಿರುವ ಗರಿಷ್ಠ ಸಮಯದಲ್ಲಿ ಕ್ಯಾಮೆರಾ ಪ್ರದರ್ಶನಗೊಳ್ಳುತ್ತದೆ. ಈ ಫೀಚರ್ ಅನ್ನು ಸಕ್ರಿಯಗೊಳಿಸಲು ಐಫೋನ್ 13 ಪ್ರೊ ಹಾಗೂ ಐಫೋನ್ 13 ಪ್ರೊ ಮ್ಯಾಕ್ಸ್ ಬಳಕೆದಾರರು ಸೆಟ್ಟಿಂಗ್ಸ್ > ಕ್ಯಾಮೆರಾ > ಫಾರ್ಮ್ಯಾಟ್ಸ್ > Apple ProRes ನಲ್ಲಿ ಟಾಗಲ್ ಮಾಡಿದರೆ ಸಾಕು.

  ಆನ್ ಅಥವಾ ಆಫ್ ಟಾಗಲ್ ಇರಲಿದೆ

  ಪ್ರಸ್ತುತ ಐಫೋನ್ 13 ಪ್ರೊ ಸೀರೀಸ್‌ನಲ್ಲಿರುವ ಕ್ಯಾಮೆರಾ ಆ್ಯಪ್, ಸಬ್ಜೆಕ್ಟ್ (ವಸ್ತು) ಗೆ ನಿಕಟವಾದಾಗ ಸ್ವಯಂಚಾಲಿತವಾಗಿ ಮ್ಯಾಕ್ರೊ ಮೋಡ್‌ಗೆ ಬದಲಾಗುತ್ತದೆ. ಕೆಲವೊಮ್ಮೆ ಈ ವೈಶಿಷ್ಟ್ಯ ಅನುಕೂಲಕರವೆಂದು ಸಾಬೀತಾಗಿದ್ದರೂ ಸ್ವಯಂಚಾಲಿತ ಬದಲಾವಣೆ ಹೆಚ್ಚಿನ ಬಳಕೆದಾರರನ್ನು ಸಮೀಪಿಸಿಲ್ಲ. ಇದರ ಫಲಿತಾಂಶವಾಗಿ, ಆ್ಯಪಲ್ ಕ್ಯಾಮೆರಾ ಸೆಟ್ಟಿಂಗ್‌ಗಳಲ್ಲಿ ಹೊಸ ಟಾಗಲ್ ಅನ್ನು ಪರಿಚಯಿಸಿದ್ದು ಬೀಟಾ ಆವೃತ್ತಿಯೊಂದಿಗೆ ‘ಅಟೊ ಮ್ಯಾಕ್ರೊ’ ಎಂಬುದಾಗಿ ಇದನ್ನು ಕರೆಯಲಾಗಿದೆ. ಸ್ವಯಂಚಾಲಿತ ಫೋಕಸ್ ಬದಲಾವಣೆಗಾಗಿ ಬಳಕೆದಾರರು ಆನ್ ಅಥವಾ ಆಫ್ ಟಾಗಲ್ ಮಾಡಬಹುದು.

  ಇದನ್ನೂ ಓದಿ: ಸೋರಿಕೆಯಾಯ್ತು ಆ್ಯಪಲ್ Iphone 14 ಫೀಚರ್ಸ್! ಏನೆಲ್ಲಾ ಇದೆ ಗೊತ್ತಾ?

  ಐಒಎಸ್ 15.1 ನ ಹಿಂದಿನ ಬೀಟಾ ಬಿಲ್ಡ್‌ಗಳೊಂದಿಗೆ ಆ್ಯಪಲ್ ವ್ಯಾಲೆಟ್‌ಗೆ ಪರಿಶೀಲಿಸಬಹುದಾದ COVID-19 ವ್ಯಾಕ್ಸಿನೇಷನ್ ಕಾರ್ಡ್‌ಗಳನ್ನು ಸೇರಿಸುವ ಸಾಮರ್ಥ್ಯದ ಮೇಲೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಐಫೋನ್ ಬಳಕೆದಾರರು ವಿಮಾನ ನಿಲ್ದಾಣ ಹಾಗೂ ಇತರ ಸಂಸ್ಥೆಗಳಲ್ಲಿ ತಮ್ಮ ಲಸಿಕೆ ಸ್ಥಿತಿಯನ್ನು ತ್ವರಿತವಾಗಿ ಪ್ರದರ್ಶಿಸಲು ಸಾಧ್ಯವಾಗುತ್ತದೆ. ಆ್ಯಪಲ್ ತಿಳಿಸಿರುವಂತೆ, ಹೊಸ ವೈಶಿಷ್ಟ್ಯವು ಅಂತಾರಾಷ್ಟ್ರೀಯ ಸ್ಮಾರ್ಟ್ ಆರೋಗ್ಯ ಕಾರ್ಡ್‌ಗಳ ಪ್ರಮಾಣದ ಲಾಭವನ್ನು ಪಡೆಯುತ್ತದೆ (ಈಗಾಗಲೇ ಅಮೆರಿಕದ ಹಲವು ರಾಜ್ಯಗಳಲ್ಲಿ ಬಳಕೆಯಲ್ಲಿದೆ) ಲಸಿಕೆಯ ಪುರಾವೆಗಳನ್ನು ತಯಾರಿಸಲು, ಖಾಸಗಿ ಕೀಯ ಮೂಲಕ ಸಹಿ ಮಾಡಿ ಮತ್ತು ನಿಮ್ಮ ಮಾಹಿತಿಯನ್ನು ಪರಿಶೀಲಿಸಲು ಸಾರ್ವಜನಿಕ ಕೀಯನ್ನು ರಚಿಸಿ.
  Published by:Kavya V
  First published: