Iphone Foldable Phone: ಆ್ಯಪಲ್ (Apple) ಜನಪ್ರಿಯ ಕಂಪನಿಯಾಗಿದ್ದು, ಈ ಕಂಪನಿ ಪರಿಚಯಿಸುವ ಉತಪನ್ನಗಳಿಗೆ ವಿಶೇಷ ಬೇಡಿಕೆಯಿದೆ. ಅದರಲ್ಲೂ ಐಫೋನ್ಗಳಿಗೆ (Iphone) ಬೇಡಿಕೆ ಕೊಂಚ ಜಾಸ್ತಿ ಎಂದೇ ಹೇಳಬಹುದು. ಬಹುತೇಕರು ಐಫೋನ್ ಅನ್ನು ಖರೀದಿಸಲು ಮುಂದಾಗುತ್ತಾರೆ. ಅಂದಹಾಗೆಯೇ ಈ ಬ್ರ್ಯಾಂಡ್ ಕಂಪನಿ (Brand Company) ಗ್ರಾಹಕರ ಮನದಾಸೆಯನ್ನಿಟ್ಟುಕೊಂಡು ಇದೀಗ ಮಡಚುವ ಫೋನ್ ಉತ್ಪಾದಿಸುತ್ತಿದೆ. ಇದರ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ನಂತರ ತಯಾರಿಸುತ್ತಿದೆ. ಸದ್ಯ ಹೊರಬಿದ್ದ ಮಾಹಿತಿಯಂತೆಯೇ ಆ್ಯಪಲ್ ಫೋಲ್ಡಬಲ್ ಐಫೋನ್ (Apple Foldable Iphone) ಹೊಸ ರೀತಿಯ ಪ್ರದರ್ಶನದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಹೇಳಲಾಗುತ್ತಿದೆ. ನೂತನ ಫೋಲ್ಡೆಬಲ್ ಐಫೋನ್ Samsung Galaxy Z Fold 3 ಅನ್ನು ಹೋಲುವಂತಿದ್ದು, ಆಕರ್ಷಕವಾಗಿ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಮಾಹಿತಿಯಂತೆಯೇ, ಮಡಚುವ ಐಫೋನ್ OLED ಪ್ಯಾನೆಲ್ನಲ್ಲಿ ಬರಲಿದೆ. ಇದರಲ್ಲಿ ಪೋಲರೈಸರ್-ಲೆಸ್ ಡಿಸ್ಪ್ಲೇ ತಂತ್ರಜ್ಞಾನವನ್ನು Samsung ತನ್ನ Galaxy Z Fold 3 ಮತ್ತು ಅದರ Eco-OLED ಡಿಸ್ಪ್ಲೇಯಲ್ಲಿ ಬಳಸುತ್ತದೆ ಎಂದು ಹೇಳಲಾಗುತ್ತಿದೆ.
ಸ್ಯಾಮ್ಸಂಗ್ನ ಈ ಫೋನ್ನಂತಿದೆ
ಪರದೆಯನ್ನು ವಿಭಿನ್ನವಾಗಿ ತರಲು ಪ್ರಯತ್ನಿಸುತ್ತಿದೆ. ಸ್ಯಾಮ್ಸಂಗ್ ಡಿಸ್ಪ್ಲೇ TFE ನಲ್ಲಿ CF ಎಂದು ಸಂಕ್ಷಿಪ್ತಗೊಳಿಸಿದ ತೆಳುವಾದ ಫಿಲ್ಮ್ ಎನ್ಕ್ಯಾಪ್ಸುಲೇಶನ್ನಲ್ಲಿ ಬಣ್ಣದ ಫಿಲ್ಟರ್ ಅನ್ನು ಮುದ್ರಿಸಿ ಬರಲಿದೆ ಎಂಬುದು ಸದ್ಯ ಹೊರಬಿದ್ದ ಮಾತಾಗಿದೆ. ಕಪ್ಪು ಪಿಕ್ಸೆಲ್ ಡಿಫೈನಿಂಗ್ ಲೇಯರ್ ಸೇರಿಸಿಕೊಂಡಿದೆ. ಇದು ಬಣ್ಣ ಫಿಲ್ಟರ್ಗಳ ಮೂಲಕ ಸ್ಪಷ್ಟವಾದ ಬಣ್ಣಗಳನ್ನು ಒದಗಿಸಲು ಮಡಿಸಬಹುದಾದ ಫಲಕಕ್ಕೆ ಅವಕಾಶ ಮಾಡಿಕೊಟ್ಟಿದೆ.
ಜನಪ್ರಿಯ ವಿಶ್ಲೇಷಕ ಮಿಂಗ್-ಚಿ ಕುವೊ ಅವರು ಮುಂದಿನ ಕೆಲವು ವರ್ಷಗಳಲ್ಲಿ ಮಡಚಬಹುದಾದ ಐಫೋನ್ ನಿಜವಾಗಬಹುದು ಎಂದು ಹೇಳಿದ್ದಾರೆ. ಮಡಿಸಬಹುದಾದ ಐಫೋನ್ನ ಪರದೆಯ ಗಾತ್ರವು 7.5 ಮತ್ತು 8-ಇಂಚಿನ ನಡುವೆ ಇರುತ್ತದೆ. ಮುಂಬರುವ ಫೋಲ್ಡಬಲ್ ಐಫೋನ್ ಐಫೋನ್ 12 ಪ್ರೊ ಮ್ಯಾಕ್ಸ್ನ ಗಾತ್ರಕ್ಕೆ ಹತ್ತಿರದಲ್ಲಿದೆ ಎಂದು ಹಿಂದಿನ ವದಂತಿಗಳು ಸೂಚಿಸಿವೆ ಎಂದಿದ್ದಾರೆ.
ಇದನ್ನೂ ಓದಿ: Tata Car ಖರೀದಿಸುವ ಕನಸನ್ನ ನನಸಾಗಿಸುವ ಸಮಯ, ಭರ್ಜರಿ ರಿಯಾಯಿತಿ ಬೆಲೆಗೆ ನಿಮ್ಮಿಷ್ಟದ ಕಾರುಗಳು
ಐಫೋನ್ ಐಪ್ಯಾಡ್ ಮಿನಿಯಂತೆ ಕಾಣುತ್ತದೆ ಈ ಫೋನ್
ಸ್ಯಾಮ್ಸ್ಸಂಗ್ ಈಗಾಗಲೇ ಮಡಚುವ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಹುತೇಕರು ಈ ಫೊನಿನ ಲುಕ್ಗೆ ಮಾರು ಹೋಗಿ ಖರೀದಿಸುತ್ತಿದ್ದಾರೆ. ಅದರಂತೆಯೇ ಇದೀಗ ಫೋಲ್ಡೆಬಲ್ ಐಫೋನ್ ಅನ್ನು ಆ್ಯಪಲ್ ಕಂಪನಿ ಸಿದ್ಧಪಡಿಸುತ್ತಿದೆ. ಮುಂಬರುವ ಫೋಲ್ಡಬಲ್ ಐಫೋನ್ನ ಪರದೆಯು ಮಡಿಸಿದಾಗ ಐಪ್ಯಾಡ್ ಮಿನಿ ಗಾತ್ರವಾಗಿ ಕಾಣಿಸಲಿದೆ.
ಇದನ್ನೂ ಓದಿ: Electric Auto Tour: ಎಲೆಕ್ಟ್ರಿಕ್ ಆಟೋದಲ್ಲೇ ಯುವಕನ ಪ್ರವಾಸ! ಭೇಷ್, ಭೇಷ್ ಎಂದ ಆನಂದ್ ಮಹೀಂದ್ರಾ
ಅಂದಹಾಗೆಯೇ ಸ್ಯಾಮ್ಸಂಗ್ ಪರಿಚಯಿಸಿರುವ ಗ್ಯಾಲಕ್ಸಿ ಫೋಲ್ಡ್ನಂತೆಯೇ ಐಫೊನ್ ಮಡಚುವ ಫೋನ್ ಬರಲಿದೆ. ಗ್ಯಾಲಕ್ಸಿ ವಿಧಾನವನ್ನೇ ಆ್ಯಪಲ್ ಸ್ಪಷ್ಟವಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ.
ಡಿಸ್ಪ್ಲೇ ಸಪ್ಲೈ ಚೈನ್ ಕನ್ಸಲ್ಟೆಂಟ್ಸ್ (ಡಿಎಸ್ಸಿಸಿ) ವಿಶ್ಲೇಷಕ ರಾಸ್ ಯಂಗ್ ಅವರು ಹೇಳಿರುವಂತೆ. ನೂತನ ಮಡಚುವ ಆ್ಯಪಲ್ ಐಫೋನ್ 2025 ರ ನಂತರ ಬರಬಹುದು ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೆಂದರೆ ಕಂಪನಿಯು ಎಲ್ಲಾ-ಸ್ಕ್ರೀನ್ ಫೋಲ್ಡಬಲ್ ಮ್ಯಾಕ್ಬುಕ್ಗಾಗಿ ಹುಡುಕುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ