ಆ್ಯಪಲ್ ಕಂಪನಿಯ ವರ್ಚುವಲ್ ಅಸಿಸ್ಟೆಂಟ್ ಸಿರಿಯನ್ನು ನೀವು ನಂಬ್ತೀರಾ ಎಂದರೆ, ಆ್ಯಪಲ್‌ನ ಮುಂದಿನ ಈವೆಂಟ್ ಬಹುಶಃ ಏಪ್ರಿಲ್ 20, ಮಂಗಳವಾರದಂದು ನಡೆಯಲಿದೆ. ಹೌದು, ಆಶ್ಚರ್ಯಕರ ಬೆಳವಣಿಗೆಯಲ್ಲಿ, ಕ್ಯುಪರ್ಟಿನೋ ಮೂಲದ ದೈತ್ಯ ಕಂಪನಿ ಆ್ಯಪಲ್‌ನ ಮುಂದಿನ ಈವೆಂಟ್ ಬಗ್ಗೆ ಸಿರಿ ಜನರಿಗೆ ಹೇಳುತ್ತಿದೆ. ಆ್ಯಪಲ್ ಈ ತಿಂಗಳು ಹೊಸ ಐಪ್ಯಾಡ್ ಪ್ರೊ ಮಾದರಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಳೆದ ಕೆಲವು ವಾರಗಳಿಂದ ಅನೇಕ ವದಂತಿಗಳಿವೆ. ಆದರೂ, ಸಿರಿ ಈ ಬಗ್ಗೆ ಮಾಹಿತಿ ಬಹಿರಂಗಪಡಿಸುವವರೆಗೆ ಆ್ಯಪಲ್ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.
ಮುಂದಿನ ಆ್ಯಪಲ್ ಈವೆಂಟ್ ಯಾವಾಗ ಎಂದು ನ್ಯೂಸ್ 18 ತಂಡ ಐಮ್ಯಾಕ್, ಮ್ಯಾಕ್‌ಬುಕ್ ಹಾಗೂ ಐಫೋನ್ ನಲ್ಲಿ ಸಿರಿಯನ್ನು ಕೇಳಿದಾಗ ಹಲವು ಬಾರಿ ಅದೇ ಉತ್ತರವನ್ನು ನೀಡಿದೆ. “ವಿಶೇಷ ಕಾರ್ಯಕ್ರಮ ಏಪ್ರಿಲ್ 20 ರ ಮಂಗಳವಾರ, ಸಿಎ ಕ್ಯುಪರ್ಟಿನೊದಲ್ಲಿನ ಆ್ಯಪಲ್ ಪಾರ್ಕ್‌ನಲ್ಲಿ. ನೀವು ಎಲ್ಲಾ ವಿವರಗಳನ್ನು ಆ್ಯಪಲ್ ಡಾಟ್ ಕಾಮ್ ನಲ್ಲಿ ಪಡೆಯಬಹುದು” ಎಂದು ಸಿರಿ ಹೇಳುತ್ತದೆ.
ಈಗ, ವರ್ಚುವಲ್ ಅಸಿಸ್ಟೆಂಟ್ ಈ ಏಪ್ರಿಲ್ 20 ರ ಘಟನೆಯ ಕುರಿತು “ಇನ್ನಷ್ಟು ನೋಡಲು” ಆ್ಯಪಲ್ ಡಾಟ್ ಕಾಮ್‌ಗೆ ಹೋಗಲು ಒಂದು ಆಯ್ಕೆಯನ್ನು ತೋರಿಸುತ್ತಿದೆ. ಆ ಆಯ್ಕೆಗಳನ್ನು ಕ್ಲಿಕ್ ಮಾಡಿದರೆ ನಮ್ಮನ್ನು ಆ್ಯಪಲ್ ಈವೆಂಟ್ಸ್ ಪೇಜ್‌ಗೆ ಮರು ನಿರ್ದೇಶಿಸಲಾಗುತ್ತದೆ. ಆದರೆ, ಈ ಪೇಜ್‌ನಲ್ಲಿ ಪ್ರಸ್ತುತ ಏಪ್ರಿಲ್ 20 ರ ಆ್ಯಪಲ್ ಈವೆಂಟ್ ಅನ್ನು ಉಲ್ಲೇಖಿಸುವುದಿಲ್ಲ. ಇದರರ್ಥ ಮುಂದಿನ ದಿನಗಳಲ್ಲಿ ಆ್ಯಪಲ್‌ನಿಂದ ಅಧಿಕೃತ ಪ್ರಕಟಣೆ ಬರಲಿದೆ. ಕಂಪನಿಯು ಸಾಂಪ್ರದಾಯಿಕವಾಗಿ ದಿನಾಂಕಕ್ಕೆ ಒಂದು ವಾರದ ಮೊದಲು ತನ್ನ ಈವೆಂಟ್‌ಗಳಿಗೆ ಆಹ್ವಾನಗಳನ್ನು ಕಳುಹಿಸುತ್ತದೆ. ಕಳೆದ ಒಂದು ತಿಂಗಳಿನಿಂದ ಆ್ಯಪಲ್ ಹೊಸ ಐಪ್ಯಾಡ್ ಪ್ರೊ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂದು ತೀವ್ರ ವದಂತಿಗಳಿವೆ. ಕಂಪನಿಯು ತನ್ನ ಮೊದಲ ಮಿನಿ-ಎಲ್ಇಡಿ ಡಿಸ್ಪ್ಲೇ ಹೊಂದಿರುವ ಐಪ್ಯಾಡ್ ಪ್ರೊ ಅನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು 2021 ರ 12.9-ಇಂಚಿನ ಮಾಡೆಲ್ ಐಪ್ಯಾಡ್ ಎಂದೂ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ