HOME » NEWS » Tech » APPLE EVENT HIGHLIGHTS INDIA PRICE OF WATCH SE WATCH SERIES 6 AND IPAD AIR HG

Apple Event 2020: ಆ್ಯಪಲ್​​​ ಪರಿಚಯಿಸುತ್ತಿದೆ ವಾಚ್​ ಎಸ್​ಇ, ವಾಚ್ ಸಿರೀಸ್ 6, ಐಪ್ಯಾಡ್; ಬೆಲೆ ಎಷ್ಟು?

Apple Event September 2020s: ಆ್ಯಪಲ್​ ಪರಿಚಿಸಿರುವ ಈ ನೂತನ ವಸ್ತುಗಳು ಅಕ್ಟೋಬರ್​ ತಿಂಗಳಿನಲ್ಲಿ ಖರೀದಿಸಿಗೆ ಸಿಗಲಿದೆ. ಸದ್ಯ ಕೊರೋನಾ ಸಮಯದಲ್ಲಿ ಹೆಚ್ಚಿನ ಕಂಪನಿಗಳು ಮಾರಾಟವನ್ನು ಪ್ರಾರಂಭಿಸಿದೆ. ಆ್ಯಂಡ್ರಾಯ್ಡ್​ ಕಂಪನಿಗಳು ಕೂಡ ಹೊಸ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತದೆ. ಅದರಂತೆ ಆ್ಯಪಲ್ ಸಂಸ್ಥೆ ಕೂಡ ಆ್ಯಪಲ್​ ವಾಚ್​ ಎಸ್​ಇ, ವಾಚ್​ 6, ಐಪ್ಯಾಡ್​ ಏರ್​, 8th ಜನರೇಶನ್​ ಐಪ್ಯಾಡ್​​ ಅನ್ನು ಇಂದು ಗ್ರಾಹಕರಿಗೆ ಪರಿಚಯಿಸುತ್ತಿದೆ.

news18-kannada
Updated:September 16, 2020, 3:17 PM IST
Apple Event 2020: ಆ್ಯಪಲ್​​​ ಪರಿಚಯಿಸುತ್ತಿದೆ ವಾಚ್​ ಎಸ್​ಇ, ವಾಚ್ ಸಿರೀಸ್ 6, ಐಪ್ಯಾಡ್; ಬೆಲೆ ಎಷ್ಟು?
ಆ್ಯಪಲ್​ ವಾಚ್​ ಎಸ್​ಇ
  • Share this:
ಪ್ರತಿಷ್ಠಿತ ಆ್ಯಪಲ್​ ಸಂಸ್ಥೆ  ಇಂದು ‘ಟೈಮ್​​ ಫೈಲ್’​ ಎಂಬ ಇವೆಂಟ್​ ಆಯೋಜಿಸಿದ್ದು, ಇದರಲ್ಲಿ ಆ್ಯಪಲ್​ ವಾಚ್​ ಎಸ್​ಇ, ವಾಚ್​ 6, ಐಪ್ಯಾಡ್​ ಏರ್​, 8th ಜನರೇಶನ್​ ಐಪ್ಯಾಡ್​​ ಅನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಕೊರೋನಾ ಸಮಯದಲ್ಲಿ ಗ್ರಾಹಕರನ್ನುಆಕರ್ಷಿಸುವ ಸಲುವಾಗಿ ಮತ್ತು ತನ್ನ ವ್ಯಾಪಾರವನ್ನು ಅಭಿವೃದ್ಧಿಸುವ ಸಲುವಾಗಿ ನೂತನ ಉತ್ಪನ್ನಗಳನ್ನ ಪರಿಚಯಿಸುತ್ತಿದೆ.  ಆ್ಯಪಲ್​ ಆಯೋಜಿಸಿರುವ ‘ಟೈಮ್​ ಫೈಲ್​‘ ಇವೆಂಟ್​ ಕಾರ್ಯಕ್ರಮದಲ್ಲಿ ಆ್ಯಪಲ್​ ವಾಚ್​ 6 (ಜಿಪಿಎಸ್​) ಅನ್ನು 49,000 ರೂ.ಗೆ ಪರಿಚಯಿಸುತ್ತಿದೆ. ಇನ್ನು ವಾಚ್​ ಎಸ್​ಇ (ಜಿಪಿಎಸ್​) 29,900 ರೂ.ಗೆ ಗ್ರಾಹಕರ ಕೈ ಸೇರಲಿದೆ. ಅದರ ಜೊತೆಗೆ ಆ್ಯಪಲ್​ ವಾಚ್​ ಎಸ್​ಇ (ಜಿಪಿಎಸ್​ +ಸೆಲ್ಯೂಲರ್​) 33,900 ರೂ.ಗೆ ಸಿಗಲಿದೆ.

ಅಮೆರಿಕದ ಬೆಲೆಯನ್ನು ತಾಳೆಮಾಡಿ ನೋಡಿದಾಗ ಭಾರತದಲ್ಲಿ ಆ್ಯಪಲ್ ಪರಿಚಯಿಸುತ್ತಿರುವ ಹೊಸ ಉತ್ಪನ್ನಗಳು ಕೊಂಚ ಕಡಿಮೆ ಬೆಲೆಗೆ  ಸಿಗುತ್ತಿದೆ. ಅದರ ಜೊತೆಗೆ ವೈಯ್ಯಕ್ತಿಕ ಯೋಜನೆಯನ್ನು ಕಡಿಮೆ ಬೆಲೆಗೆ ಸಿಗುತ್ತಿದೆ . ಆ್ಯಪ್​​ ಮ್ಯೂಸಿಕ್​, ಆ್ಯಪಲ್​ ಟಿವಿ, ಆರ್ಕೆಡ್​​​ ಮತ್ತು 50ಜಿಬಿ ಐಕ್ಲೌಡ್​​ ಸ್ಟೊರೇಜ್​​ ಬೆಲೆ 195 ರೂ ಆಗಿದೆ.

ಇನ್ನು ಫ್ಯಾಮಿಲಿ ಪ್ಲಾನ್​ನಲ್ಲಿ ಆ್ಯಪಲ್​​​ ಮ್ಯೂಸಿಕ್​, ಆ್ಯಪಲ್​ ಟಿವಿ, ಆರ್ಕೆಡ್​ ಮತ್ತು 200ಜಿಬಿ ಐಕ್ಲೌಡ್​​ ಸ್ಟೊರೇಜ್​​ ಬೆಲೆ 365 ರೂ ಆಗಿದೆ. 6 ಜನರು ಈ ಪ್ಲಾನ್​ ಅನ್ನು ಶೇರ್​ ಮಾಡಿಕೊಳ್ಬಹುದಾಗಿದೆ.

8th ಜನರೇಶನ್​ ಐಪ್ಯಾಡ್ ಬೆಲೆ 29,900 ರೂ ಆಗಿದೆ. ಆ್ಯಪಲ್​ ಪೆನ್ಸಿಲ್​ (1 ಜನರೇಶನ್​) ಬೆಲೆ 8,500 ರೂ. ಸ್ಮಾರ್ಟ್​ ಕೀ ಬೋರ್ಡ್​ ಬೆಲೆ 13,900 ರೂ.ಆ್ಯಪಲ್​ ಪರಿಚಿಸಿರುವ ಈ ನೂತನ ವಸ್ತುಗಳು ಅಕ್ಟೋಬರ್​ ತಿಂಗಳಿನಲ್ಲಿ ಖರೀದಿಸಿಗೆ ಸಿಗಲಿದೆ. ಸದ್ಯ ಕೊರೋನಾ ಸಮಯದಲ್ಲಿ ಹೆಚ್ಚಿನ ಕಂಪನಿಗಳು ಮಾರಾಟವನ್ನು ಪ್ರಾರಂಭಿಸಿದೆ. ಆ್ಯಂಡ್ರಾಯ್ಡ್​ ಕಂಪನಿಗಳು ಕೂಡ ಹೊಸ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತದೆ. ಅದರಂತೆ ಆ್ಯಪಲ್ ಸಂಸ್ಥೆ ಕೂಡ ಆ್ಯಪಲ್​ ವಾಚ್​ ಎಸ್​ಇ, ವಾಚ್​ 6, ಐಪ್ಯಾಡ್​ ಏರ್​, 8th ಜನರೇಶನ್​ ಐಪ್ಯಾಡ್​​ ಅನ್ನು ಇಂದು ಗ್ರಾಹಕರಿಗೆ ಪರಿಚಯಿಸುತ್ತಿದೆ.
Published by: Harshith AS
First published: September 16, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories