Tim Cook ಈ ಮಾತನ್ನು ಹೇಳಿದ್ದೇ ತಡ, Apple ಉದ್ಯೋಗಿಗಳು ಕೆಲಸ ಬಿಡುತ್ತಿದ್ದಾರಂತೆ!

Tim Cook: ಆ್ಯಪಲ್ ಮತ್ತು ಗೂಗಲ್‌ನಂತಹ ದೈತ್ಯ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳಲು ಕೇಳುತ್ತಿವೆ. ಟೆಕ್ ದೈತ್ಯರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ, ಹೆಚ್ಚಿನ ದಿನಗಳಲ್ಲಿ ಉದ್ಯೋಗಿಗಳನ್ನು ಕಚೇರಿಯಲ್ಲಿರಲು ಪ್ರೋತ್ಸಾಹಿಸಲು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೂ, ಕಾರ್ಮಿಕರು ಕಂಪನಿಗಳ ಹೊಸ ನೀತಿಯಿಂದ ಸಂತೋಷವಾಗಿರುವಂತೆ ಕಾಣುತ್ತಿಲ್ಲ.

ಟಿಮ್ ಕುಕ್ (Tim Cook)

ಟಿಮ್ ಕುಕ್ (Tim Cook)

  • Share this:
    ಕಳೆದ ಎರಡು ವರ್ಷಗಳಿಂದ ವಿಶ್ವಾದ್ಯಂತ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಬಹುತೇಕ ಕಂಪನಿಗಳಿಗೆ ಬೀಗ ಜಡಿದಿದ್ದು, ಉದ್ಯೋಗಿಗಳಿಗೆ (Employee) ತಮ್ಮ ಮನೆಯಲ್ಲಿ ಸುರಕ್ಷಿತವಾಗಿ ಇದ್ದು ಕಂಪನಿಯ (Company) ಕೆಲಸವನ್ನು ಮನೆಯಿಂದಲೇ ಮಾಡಲು ಹೇಳಿದ್ದರು. ಅದೇ ರೀತಿಯಾಗಿ ಬಹುತೇಕ ಐಟಿ ಕಂಪನಿಗಳ ಕೆಲಸಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ‘ವರ್ಕ್ ಫ್ರಮ್ ಹೋಮ್’ (Work From Home) ಮಾದರಿಯಲ್ಲಿ ಬಹುತೇಕ ಕಂಪನಿಗಳ ಕೆಲಸ ಮಾತ್ರ ಯಾವುದೇ ಅಡೆತಡೆ ಇಲ್ಲದೆ ಹಾಗೆಯೇ ನಡೀತಾ ಇತ್ತು. ಎರಡು ವರ್ಷಗಳ ನಂತರ ಜಗತ್ತು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ, ಆ್ಯಪಲ್ (Apple) ಮತ್ತು ಗೂಗಲ್‌ನಂತಹ (Google) ದೈತ್ಯ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳಲು ಕೇಳುತ್ತಿವೆ. ಟೆಕ್ ದೈತ್ಯರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ, ಹೆಚ್ಚಿನ ದಿನಗಳಲ್ಲಿ ಉದ್ಯೋಗಿಗಳನ್ನು ಕಚೇರಿಯಲ್ಲಿರಲು ಪ್ರೋತ್ಸಾಹಿಸಲು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೂ, ಕಾರ್ಮಿಕರು ಕಂಪನಿಗಳ ಹೊಸ ನೀತಿಯಿಂದ ಸಂತೋಷವಾಗಿರುವಂತೆ ಕಾಣುತ್ತಿಲ್ಲ.

    76 ಪ್ರತಿಶತದಷ್ಟು ಉದ್ಯೋಗಿಗಳು ಕಂಪನಿಗೆ ಮರಳಲು ವಿರೋಧಿಸುತ್ತಿದ್ದಾರಂತೆ..!

    ಒಬ್ಬರಲ್ಲ, ಇಬ್ಬರಲ್ಲ ಸುಮಾರು 76 ಪ್ರತಿಶತದಷ್ಟು ಆ್ಯಪಲ್ ಉದ್ಯೋಗಿಗಳು ಕಂಪನಿಗೆ ಮರಳಲು ಹೇಳಿರುವುದನ್ನು ವಿರೋಧಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಅವರು ವಾರಕ್ಕೊಮ್ಮೆ ಕಚೇರಿಯಲ್ಲಿರಬೇಕಾದ ಅಗತ್ಯವಿದೆ. ಮೇ 23 ರಿಂದ, ಆ್ಯಪಲ್ ಸಿಇಒ ಟಿಮ್ ಕುಕ್ ಅವರು ಉದ್ಯೋಗಿಗಳಿಗೆ ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಲ್ಲಿರಲು ಸೂಚಿಸಿದ್ದಾರೆ. ಇದು ಉದ್ಯೋಗಿಗಳಿಗೆ ಹೆಚ್ಚು ನಿರಾಶೆಯನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಸಮೀಕ್ಷೆ ಏನನ್ನು ಸೂಚಿಸುತ್ತಿದೆ..?

    ಅನಾಮಧೇಯ ಸಾಮಾಜಿಕ ನೆಟ್‌ವರ್ಕ್ ಬ್ಲೈಂಡ್ ನಡೆಸಿದ ಸಮೀಕ್ಷೆಯು ಆ್ಯಪಲ್ ಉದ್ಯೋಗಿಗಳಲ್ಲಿ ಹೆಚ್ಚಿನವರು ಕಂಪನಿಯ ಹೊಸ ನೀತಿಯಿಂದ ತುಂಬಾನೇ ಅಸಮಾಧಾನಗೊಂಡಿದ್ದಾರೆ ಮತ್ತು ಸ್ವಲ್ಪ ಹೆಚ್ಚು ನಮ್ಯತೆಯನ್ನು ಒದಗಿಸುವ ಇತರ ಕೆಲವು ಟೆಕ್ ಕಂಪನಿ ಸೇರಲು ಬಯಸುತ್ತಿರುವುದನ್ನು ಇದು ಸೂಚಿಸಿದೆ ಎಂದು ಹೇಳಲಾಗುತ್ತಿದೆ.

    ಏಪ್ರಿಲ್ 13 ಮತ್ತು ಏಪ್ರಿಲ್ 19 ರ ನಡುವೆ 652 ಆ್ಯಪಲ್ ಉದ್ಯೋಗಿಗಳಿಂದ ಉತ್ತರಗಳನ್ನು ಸಂಗ್ರಹಿಸಲಾಗಿದೆ ಎಂದು ಬ್ಲೈಂಡ್ ಹೇಳಿದೆ.

    ಇದನ್ನೂ ಓದಿ: Heat Wave: ವಿಪರೀತ ಬಿಸಿಲು! ನಿಮ್ಮ ಕಾರನ್ನು ಸುಸಜ್ಜಿತವಾಗಿರಿಸಲು ಸಲಹೆಗಳು ಮತ್ತು ತಂತ್ರಗಳು ಇಲ್ಲಿವೆ

    2020 ರಲ್ಲಿ ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಸುಮಾರು ಏಪ್ರಿಲ್ ಮಧ್ಯದವರೆಗೆ, ಹೆಚ್ಚಿನ ಆ್ಯಪಲ್ ಉದ್ಯೋಗಿಗಳು ಎರಡು ವರ್ಷಗಳಿಂದ ಸಂಪೂರ್ಣವಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಉದ್ಯೋಗಿಗಳು ನಿಯಮಿತ ಪ್ರಯಾಣವನ್ನು ಪುನಾರಂಭಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಅವರಲ್ಲಿ ಕೆಲವರು ಹೆಚ್ಚು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳೊಂದಿಗೆ ಇತರ ಟೆಕ್ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆಯುತ್ತಾರೆ ಎಂದು ಹೇಳುತ್ತಿದ್ದಾರೆ.

    ಅಧ್ಯಯನದ ಪ್ರಕಾರ, ಸುಮಾರು 56 ಪ್ರತಿಶತದಷ್ಟು ಉದ್ಯೋಗಿಗಳು ಆ್ಯಪಲ್ ಕಂಪನಿಯನ್ನು ಕಚೇರಿ ಅವಶ್ಯಕತೆಗಳಿಂದಾಗಿ ತೊರೆಯಲು ನೋಡುತ್ತಿದ್ದಾರೆ. ಕಂಪನಿಯು ಉದ್ಯೋಗಿಗಳ ಅತೃಪ್ತಿಯ ಬಗ್ಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    ಇದನ್ನೂ ಓದಿ: YouTube Go: ಆಗಸ್ಟ್‌ನಲ್ಲಿ ಯೂಟ್ಯೂಬ್ ಗೋ ಸ್ಥಗಿತಗೊಳಿಸಲಿದೆ ಗೂಗಲ್‌

    ಆ್ಯಪಲ್ ಕಂಪನಿಯವರಿಗೆ ಇದು ಹೊಸದೇನಲ್ಲ ಬಿಡಿ, ಏಕೆಂದರೆ ಡಿಸೆಂಬರ್‌ನಲ್ಲಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದ್ದರ ಪ್ರಕಾರ ಸ್ಟೋರ್‌ಗಳಲ್ಲಿ ಆ್ಯಪಲ್‌ನ ಕೆಲವು ಗಂಟೆಗಳ ಆಧಾರದಲ್ಲಿ ಕೆಲಸ ಮಾಡುವ ಕೆಲಸಗಾರರು ತೆರಿಗೆ ವಿಧಿಸುವ ಪರಿಸ್ಥಿತಿಗಳಿಂದಾಗಿ ಅಸಂತುಷ್ಟರಾಗಿದ್ದರು. ಅಟ್ಲಾಂಟಾದ ಆ್ಯಪಲ್ ಕಂಬರ್‌ಲ್ಯಾಂಡ್ ಮಾಲ್ ಸ್ಟೋರ್‌ನಲ್ಲಿ ಕೆಲವು ಆ್ಯಪಲ್ ಕಾರ್ಮಿಕರು ಇತ್ತೀಚೆಗೆ ಒಕ್ಕೂಟದ ಚುನಾವಣೆಗೆ ಅರ್ಜಿ ಸಹ ಸಲ್ಲಿಸಿದರು, ಇದು ಉತ್ತಮ ವೇತನ ಮತ್ತು ಪ್ರಯೋಜನಗಳನ್ನು ಪಡೆಯಲು ಅವರು ಮಾಡಿದ ಪ್ರಯತ್ನವಾಗಿತ್ತು ಎಂದು ಹೇಳಲಾಗಿದೆ.

    ಇತ್ತ ಇನ್ನೊಂದು ಟೆಕ್ ದೈತ್ಯ ಗೂಗಲ್ ಸಹ ತನ್ನ ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆಸಿಕೊಳ್ಳುತ್ತಿದೆ ಮತ್ತು ಉಚಿತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಲು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಟೆಕ್ ದೈತ್ಯ ಹೊಸ "ರೈಡ್ ಸ್ಕೂಟ್" ಕಾರ್ಯಕ್ರಮವನ್ನು ಪ್ರಾರಂಭಿಸಲು ಇ-ಸ್ಕೂಟರ್ ತಯಾರಕ ಯುನಾಗಿಯೊಂದಿಗೆ ಪಾಲುದಾರಿಕೆ ಹೊಂದಿದೆ.
    Published by:Harshith AS
    First published: