ನೀವು ಆ್ಯಪಲ್ iPhone 12 ಅಥವಾ iPhone 12 Mini ಖರೀದಿಸುವ ಯೋಚನೆಯಲ್ಲಿದ್ದರೆ, ಇದನ್ನು ಒಮ್ಮೆ ಓದಿ

Apple Diwali Sale 2021: ದೀಪಾವಳಿ ಕೊಡುಗೆಯು ಆ್ಯಪಲ್ ನ ಅಧಿಕೃತ ಭಾರತದ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ ಮತ್ತು ಈ ಎರಡು ಐಫೋನ್ ಮಾದರಿಗಳಿಗೆ ಮಾತ್ರ ಈ ಕೊಡುಗೆ ಅನ್ವಯಿಸುತ್ತದೆ ಎಂದು ಹೇಳಲಾಗುತ್ತಿದೆ.

Apple Diwali Sale 2021 Offers

Apple Diwali Sale 2021 Offers

 • Share this:
  Apple Diwali Sale 2021: ಬಹಳಷ್ಟು iPhone ಪ್ರಿಯರು ದೀಪಾವಳಿ ಹಬ್ಬ ಬರುವುದನ್ನೇ ಎದುರು ನೋಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ, ಏಕೆಂದರೆ ದೀಪಾವಳಿ ಹಬ್ಬಕ್ಕೆ ವಿಶೇಷ ಕೊಡುಗೆಗಳನ್ನು ಈ ಆ್ಯಪಲ್ ಕಂಪೆನಿಯು ತನ್ನ ಉತ್ಪನ್ನಗಳಾದ iPhone 12 ಅಥವಾ iPhone 12 Mini ಜೊತೆಗೆ ಇನ್ನಿತರೆ ಉತ್ಪನ್ನಗಳನ್ನು ನೈಜ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಪಡೆಯಲು ಅನೇಕ ಅವಕಾಶಗಳನ್ನು ತನ್ನ ಗ್ರಾಹಕರಿಗಾಗಿ ನೀಡುತ್ತದೆ.ಆ್ಯಪಲ್ ಕಂಪೆನಿಯು ಈಗಾಗಲೇ ತನ್ನ ಗ್ರಾಹಕರಿಗಾಗಿ ದೀಪಾವಳಿ ಕೊಡುಗೆಗಳನ್ನು ಬಿಡುಗಡೆ ಮಾಡಿದ್ದು, ಅಲ್ಲಿ ಐಫೋನ್ 12 ಅಥವಾ ಐಫೋನ್ 12 ಮಿನಿ ಖರೀದಿಸಲು ಯೋಜಿಸುವ ಬಳಕೆದಾರರು ಒಂದು ಜೋಡಿ ಏರ್‌ಪಾಡ್‌ಗಳನ್ನು ಉಚಿತವಾಗಿ ಪಡೆಯಬಹುದು.

  ದೀಪಾವಳಿ ಕೊಡುಗೆಯು ಆ್ಯಪಲ್ ನ ಅಧಿಕೃತ ಭಾರತದ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ ಮತ್ತು ಈ ಎರಡು ಐಫೋನ್ ಮಾದರಿಗಳಿಗೆ ಮಾತ್ರ ಈ ಕೊಡುಗೆ ಅನ್ವಯಿಸುತ್ತದೆ ಎಂದು ಹೇಳಲಾಗುತ್ತಿದೆ. ಬಳಕೆದಾರರು ಐಫೋನ್ 12 ಅಥವಾ 12 ಮಿನಿ ಪಡೆಯಲು ಐಫೋನ್ 8 ಅನ್ನು ಟ್ರೇಡ್-ಇನ್ ಮಾಡುವ ಮೂಲಕ ಹೊಸ ಐಫೋನ್ ದರದ ಮೇಲೆ 9000 ದಿಂದ 46,120 ರೂಪಾಯಿಯವರೆಗೆ ಆಫರ್ ನೀಡುತ್ತಿದೆ.

  ಆ್ಯಪಲ್‌ನ ಉಚಿತ ಏರ್‌ಪಾಡ್‌ಗಳ ಕೊಡುಗೆ ಏನು?

  ನೀವು ಆ್ಯಪಲ್ ಐಫೋನ್ 12, ಆ್ಯಪಲ್ ಐಫೋನ್ 12 ಮಿನಿಯೊಂದಿಗೆ ಉಚಿತವಾಗಿ ಏರ್‌ಪಾಡ್‌ಗಳನ್ನು ನೀಡುತ್ತಿದೆ. ಬಳಕೆದಾರರು ಹೊಸ ಐಫೋನ್ ಖರೀದಿಸುವಾಗ ಚೆಕ್ಔಟ್ ಸಮಯದಲ್ಲಿ ನಿಯಮಿತ ವೈರ್ ಚಾರ್ಜಿಂಗ್‌ನೊಂದಿಗೆ ಉಚಿತ ಏರ್‌ಪಾಡ್‌ಗಳನ್ನು ತಮ್ಮ ಬ್ಯಾಗ್‌ಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ವೈರ್‌ಲೆಸ್ ಚಾರ್ಜಿಂಗ್ ಕೇಸ್ ಮತ್ತು ಏರ್‌ಪಾಡ್ ಪ್ರೋ ಹೊಂದಿರುವ ಏರ್‌ಪಾಡ್‌ಗಳನ್ನು ತೆಗೆದುಕೊಳ್ಳಲು ಆ್ಯಪಲ್ ಬಳಕೆದಾರರಿಗೆ ಒಂದು ಆಯ್ಕೆ ನೀಡುತ್ತಿದೆ, ಆದರೆ ಇವು ಉಚಿತವಾಗಿಲ್ಲ. ಚೆಕ್ಔಟ್ ಸಮಯದಲ್ಲಿ ಇವುಗಳನ್ನು ಭಾರಿ ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತಿದೆ.

  ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಏರ್‌ಪಾಡ್‌ಗಳನ್ನು 4000 ರೂಪಾಯಿಗಳಿಗೆ ಹೆಚ್ಚುವರಿಯಾಗಿ ಪಾವತಿಸಿ ಖರೀದಿಸಬಹುದು. ಇದರ ಮುಖಬೆಲೆಯು 18,900 ರೂಪಾಯಿ ಎಂದು ಪಟ್ಟಿ ಮಾಡಲಾಗಿದೆ. ಇದರ ಮುಖಬೆಲೆಯು 24,900 ರೂಪಾಯಿಗಳಾಗಿದ್ದರೂ ಸಹ 10,000 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸುವ ಮೂಲಕ ಈ ಏರ್‌ಪಾಡ್ ಪ್ರೋ ಸಹ ನೀವು ಖರೀದಿಸಬಹುದಾಗಿದೆ.

  ಐಫೋನ್ 13ನೊಂದಿಗೆ ಉಚಿತ ಏರ್‌ಪಾಡ್ ಗಳನ್ನು ಪಡೆಯಬಹುದೇ?

  ಮೇಲೆ ಸೂಚಿಸಿದಂತೆ ಈ ಕೊಡುಗೆಯು ಕೇವಲ ಐಫೋನ್ 12, 12 ಮಿನಿ ಮಾದರಿಗಳಿಗೆ ಮಾತ್ರ ಸೀಮಿತವಾಗಿದೆ. ಚೆಕ್ಔಟ್ ಸಮಯದಲ್ಲಿ ನೀವು ಏರ್‌ಪಾಡ್‌ಗಳನ್ನು ಪೂರ್ಣ ಬೆಲೆಗೆ ಖರೀದಿಸಬಹುದು.

  ಉಚಿತ ಏರ್‌ಪಾಡ್‌ ಹೊರತುಪಡಿಸಿ ಆ್ಯಪಲ್ ಬೇರೆ ಏನನ್ನು ನೀಡುತ್ತಿದೆ?

  ಆ್ಯಪಲ್ ಉತ್ಪನ್ನಗಳ ಬಳಕೆದಾರರು ಇಂಗ್ಲಿಷ್, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಎಮೋಜಿಗಳು ಅಥವಾ ಪಠ್ಯವನ್ನು ಈ ಏರ್‌ಪಾಡ್‌ಗಳಲ್ಲಿ ಪಡೆಯಬಹುದು. ಈ ಕೊಡುಗೆಯು ಏರ್‌ಪಾಡ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.

  Apple Watch Series 7

  ಆ್ಯಪಲ್ ಕಂಪನಿಯು ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಈವೆಂಟ್‌ನಲ್ಲಿ ಐಫೋನ್ 13 ಸೀರೀಸ್‌ನೊಂದಿಗೆ (Iphone 13 Series) ಆ್ಯಪಲ್ ವಾಚ್ ಸೀರೀಸ್ 7 (Apple watchSeries 7) ಲಾಂಚ್ ಮಾಡಿತ್ತು. ಆದರೆ ಆ ಸಮಯದಲ್ಲಿ ಈ ವಾಚ್‌ನ ಬೆಲೆ ಹಾಗೂ ಆ್ಯಪಲ್ ವಾಚ್ ಅನ್ನು ಯಾವಾಗ ಖರೀದಿಸಬಹುದು ಎಂಬುದರ ಕುರಿತು ಯಾವುದೇ ಅಪ್‌ಡೇಟ್‌ಗಳು ದೊರೆತಿರಲಿಲ್ಲ. ಆದರೆ ಈಗ ಆ್ಯಪಲ್ ವಾಚ್‌ 7 ಸೀರೀಸ್‌ ಭಾರತೀಯ ಬೆಲೆ ಹಾಗೂ ಲಭ್ಯತೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅತ್ಯಾಧುನಿಕ ಆ್ಯಪಲ್ ಸ್ಮಾರ್ಟ್‌ವಾಚ್ ದೇಶದಲ್ಲಿ ಅಕ್ಟೋಬರ್ 15 ರಿಂದ ಮಾರಾಟಕ್ಕೆ ಲಭ್ಯವಾಗುತ್ತಿದ್ದು ವಾರಕ್ಕಿಂತ ಮೊದಲೇ ಪ್ರೀ ಆರ್ಡರ್‌ಗಳು ಲಭ್ಯವಾಗಲಿದೆ. ಆ್ಯಪಲ್ ವಾಚ್ ಸೀರೀಸ್ 7 ದೊಡ್ಡ ಡಿಸ್‌ಪ್ಲೇ ಒಳಗೊಂಡಿದ್ದು ಆ್ಯಪಲ್‌ನ ಅತ್ಯಾಧುನಿಕ ವಾಚ್ಒಎಸ್ 8 ಹೊಂದಿದೆ.

  ಬೆಲೆ, ಫೀಚರ್‌ಗಳು ಹೇಗಿವೆ:

  ಆ್ಯಪಲ್ ವಾಚ್ ಸೀರೀಸ್ 7 ಬೆಲೆ 41,900 ರೂ. ನಿಂದ ನಿಗದಿಪಡಿಸಲಾಗಿದೆ. ಅಕ್ಟೋಬರ್ 8, 1PM IST ಯಿಂದ ಭಾರತದಲ್ಲಿ ಪ್ರೀ-ಆರ್ಡರ್ ಆರಂಭಗೊಳ್ಳಲಿದೆ. ಇನ್ನು ಆ್ಯಪಲ್ ಸ್ಟೋರ್‌ಗಳಲ್ಲಿ ವಾಚ್ ಅಕ್ಟೋಬರ್ 15 ರಿಂದ ಲಭ್ಯವಾಗಲಿದೆ. ಭಾರತದೊಂದಿಗೆ ಆ್ಯಪಲ್ ಕಂಪನಿಯು ತನ್ನ ಆ್ಯಪಲ್ ವಾಚ್ ಸೀರೀಸ್ 7 ಅನ್ನು ಆಸ್ಟ್ರೇಲಿಯ, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಮೆಕ್ಸಿಕೋ, ರಷ್ಯಾ, ದಕ್ಷಿಣ ಕೊರಿಯಾ, ಯುಎಇ, ಇಂಗ್ಲೆಂಡ್ ಹೀಗೆ 50ಕ್ಕೂ ಹೆಚ್ಚಿನ ದೇಶಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಬಿಡುಗಡೆ ಮಾಡಲಿದೆ.

  ಆ್ಯಪಲ್ ವಾಚ್ ಸೀರೀಸ್ 7 ಐದು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಹಸಿರು, ಮಧ್ಯರಾತ್ರಿ ಬಣ್ಣ (ಮಿಡ್‌ನೈಟ್), ನ್ಯೂ ಬ್ಲೂ, ಸ್ಟಾರ್‌ಲೈಟ್, ಕೆಂಪು ಇದರೊಂದಿಗೆ ಸ್ಪೇಸ್ ಬ್ಲ್ಯಾಕ್ ಟೈಟಾನಿಯಂ ಹಾಗೂ ಟೈಟಾನಿಯಂ ಬಣ್ಣಗಳಲ್ಲಿ ವಾಚ್ ಬಳಕೆದಾರರಿಗೆ ದೊರೆಯಲಿದೆ.
  First published: