HOME » NEWS » Tech » APPLE DIWALI OFFER GET AIRPODS FOR FREE WITH AN IPHONE 11 HG

ಆ್ಯಪಲ್​ ದೀಪಾವಳಿ ಆಫರ್​; ಐಫೋನ್​​ 11 ಖರೀದಿಸಿದರೆ ಏರ್​​ಪಾಡ್ಸ್​​ ಉಚಿತ!

Apple Diwali offer: ಅಮೆಜಾನ್​ ಅ.17 ರಂದು ಗ್ರೇಟ್​ ಇಂಡಿಯನ್​​ ಪೆಸ್ಟಿವಲ್​ ನಡೆಸಲು ಮುಂದಾಗಿದೆ. ಇದೀಗ ಅದೇ ದಿನದಂದು ಆ್ಯಪಲ್​ ಸಂಸ್ಥೆ ಕೂಡ ದೀಪಾವಳಿ ಉಡುಗೊರೆಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದೆ.

news18-kannada
Updated:October 10, 2020, 12:06 PM IST
ಆ್ಯಪಲ್​ ದೀಪಾವಳಿ ಆಫರ್​; ಐಫೋನ್​​ 11 ಖರೀದಿಸಿದರೆ ಏರ್​​ಪಾಡ್ಸ್​​ ಉಚಿತ!
ಐಫೋನ್​​ 11
  • Share this:
ದೀಪಾವಳಿ ಹಬ್ಬದ ಸಡಗರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಜನಪ್ರಿಯ ಆ್ಯಪಲ್​ ಸಂಸ್ಥೆ ತನ್ನ ಗ್ರಾಹಕರಿಗಾಗಿ ‘ದೀವಾಳಿ ಆಫರ್’​ ನೀಡಲು ಯೋಜನೆ ಹಾಕಿಕೊಂಡಿದೆ. ಅ.17ರಿಂದ ಈ ಸೇಲ್​ ಅನ್ನು ಪ್ರಾರಂಭಿಸುವ ಮೂಲಕ ಗ್ರಾಹಕರಿಗೆ ಕಡಿಮೆ ಬೆಲೆ ಉತ್ಪನ್ನಗಳನ್ನು ಮಾರಾಟ ನಡೆಸಲು ಮುಂದಾಗಿದೆ. ಅಷ್ಟು ಮಾತ್ರವಲ್ಲದೆ, ಐಫೋನ್​ ಮೇಲಿನ ಬೆಲೆಯನ್ನು ಕಡಿತಗೊಳಿಸಿ ಮಾರಾಟ ನಡೆಸುವಾಗಿ ತಿಳಿಸಿದೆ.

ಈಗಾಗಲೇ ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​, ಅಮೆಜಾನ್​, ಸ್ನಾಪ್​ಡೀಲ್​ ಮತ್ತು ರಿಯಲ್​ಮಿ, ಶಿಯೋಮಿ, ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ದೀಪಾವಳಿ ಸೇಲ್​​ ನಡೆಸುದಾಗಿ ತಿಳಿಸಿದೆ. ಅ.16 ಫ್ಲಿಪ್​ಕಾರ್ಟ್​, ಸ್ನಾಪ್​ಡೀಲ್​, ರಿಯಲ್​ಮಿ, ಶಿಯೋಮಿ ಮಾರಾಟ ನಡೆಸಿದರೆ, ಅಮೆಜಾನ್​ ಅ.17 ರಂದು ಗ್ರೇಟ್​ ಇಂಡಿಯನ್​​ ಪೆಸ್ಟಿವಲ್​ ನಡೆಸಲು ಮುಂದಾಗಿದೆ. ಇದೀಗ ಅದೇ ದಿನದಂದು ಆ್ಯಪಲ್​ ಸಂಸ್ಥೆ ಕೂಡ ದೀಪಾವಳಿ ಉಡುಗೊರೆಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದೆ.



ಆ್ಯಪಲ್​ ದೀಪಾವಳಿ ಸೇಲ್​​ನಲ್ಲಿ ಐಫೊನ್​ 11 ಖರೀದಿಸಿದರೆ ಅದಕ್ಕೆ ಉಚಿತವಾಗಿ ಏರ್​ಪಾಡ್ಸ್​ ನೀಡಲಿದೆ. ಇನ್ನು 64GB ಇಂಟರ್​ನಲ್​ ಸ್ಟೊರೇಜ್​​ ಹೊಂದಿರುವ ಐಫೋನ್​ 11 ಅನ್ನು 68,300 ರೂಗೆ ಮಾರಾಟ ಮಾಡಲಿದೆ. 128GB ಸ್ಟೊರೇಜ್​ ಆಯ್ಕೆಯ ಐಫೋನ್​​ 11 ಅನ್ನು 73,600 ರೂ.ಗೆ, 256GB ಸ್ಟೊರೇಜ್​ ಆಯ್ಕೆಯನ್ನು 84,100 ರೂ.ಗೆ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಆ್ಯಪಲ್​​​ ಏರ್​ಪಾಡ್ಸ್​​​ ಮೇಲೂ ದರ ಕಡಿತ ಮಾರಾಟ ಮಾಡುತ್ತಿದೆ. 14,900 ರೂ.ಗೆ ಏರ್​ಪಾಡ್ಸ್​ ಸಿಗಲಿದೆ.
Published by: Harshith AS
First published: October 10, 2020, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories