HOME » NEWS » Tech » APPLE DAYS SALE ON FLIPKART BIG DISCOUNT ON IPHONE XR IPHONE SE 2020 AND MORE HG

Apple Days sale: ಫ್ಲಿಪ್​ಕಾರ್ಟ್​ ಆ್ಯಪಲ್​ ಡೇಸ್​ ಸೇಲ್​; iPhone XR, iPhone SE 2020 ಮೇಲೆ ಭರ್ಜರಿ ಡಿಸ್ಕೌಂಟ್​

Filpkart Apple Days sale: ಫ್ಲಿಪ್​ಕಾರ್ಟ್​ ಆ್ಯಪಲ್​ ಡೇಸ್​ ಸೇಲ್​ನಲ್ಲಿ ಆಕರ್ಷಕ ಬೆಲೆಗೆ ಐಫೋನ್​ ಸಿರೀಸ್​ಗಳನ್ನು ಮಾರಾಟ ಮಾಡುವುದಲ್ಲದೆ, ಎಕ್ಸ್​ಜೇಂಜ್​ ಮತ್ತು ಬ್ಯಾಂಕ್​ ಕಾರ್ಡ್​ ಆಫರ್​ ನೀಡುತ್ತಿದೆ.

news18-kannada
Updated:December 8, 2020, 3:41 PM IST
Apple Days sale: ಫ್ಲಿಪ್​ಕಾರ್ಟ್​ ಆ್ಯಪಲ್​ ಡೇಸ್​ ಸೇಲ್​; iPhone XR, iPhone SE 2020 ಮೇಲೆ ಭರ್ಜರಿ ಡಿಸ್ಕೌಂಟ್​
ಫ್ಲಿಪ್​ಕಾರ್ಟ್​ ಆ್ಯಪಲ್​ ಡೇಸ್​ ಸೇಲ್​
  • Share this:
ಆನ್​ಲೈಮ್​ ಮಾರಾಟ ಮಳಿಗೆಯಾದ ಫ್ಲಿಪ್​​ಕಾರ್ಟ್​ ಆ್ಯಪಲ್​​ ಡೇಸ್​ ಸೇಲ್​ ಹಮ್ಮಿಕೊಂಡಿದೆ. ಡಿಸೆಂಬರ್​ 11ರವರೆಗೆ ಈ ಸೇಲ್​ ನಡೆಸುತ್ತಿದ್ದು, ಆಕರ್ಷಕ ಬೆಲೆಗೆ ಐಫೋನ್​  ಎಸ್​ಇ, ಐಫೋನ್​ 11 ಪ್ರೊ, ಐಫೋನ್​ ಎಕ್ಸ್​ಆರ್​, ಐಫೋನ್​ 12 ಮಾರಾಟ ಮಾಡುತ್ತಿದೆ.

ಫ್ಲಿಪ್​ಕಾರ್ಟ್​ ಆ್ಯಪಲ್​ ಡೇಸ್​ ಸೇಲ್​ನಲ್ಲಿ ಆಕರ್ಷಕ ಬೆಲೆಗೆ ಐಫೋನ್​ ಸಿರೀಸ್​ಗಳನ್ನು ಮಾರಾಟ ಮಾಡುವುದಲ್ಲದೆ, ಎಕ್ಸ್​ಜೇಂಜ್​ ಮತ್ತು ಬ್ಯಾಂಕ್​ ಕಾರ್ಡ್​ ಆಫರ್​ ನೀಡುತ್ತಿದೆ.

ಆ್ಯಪಲ್​ ಡೇಸ್ ಸೇಲ್​ನಲ್ಲಿ 1,06,600 ರೂ.ವಿನ ಐಫೋನ್​ 11 ಪ್ರೊವನ್ನು 79,999 ರೂ.ಗೆ ಮಾರಾಟ ಮಾಡುತ್ತಿದೆ. ಅಂದರೆ 26, 601 ರೂ.ವಿನಷ್ಟು ಡಿಸ್ಕೌಂಟ್​ ನೀಡಿದೆ. 1,750 ರೂ.ನಷ್ಟು ಹೆಚ್​ಡಿಎಫ್​ಸಿ ಕ್ರೆಡಿಟ್​ ಮತ್ತು ಡೆಬಿಟ್ ಕಾರ್ಡ್​ ಬಳಸಿ ಖರೀದಿಸುವ ಅವಕಾಶ ಒದಗಿಸುತ್ತದೆ. ಹಳೆಯ ಫೋನಿನ ಮೇಲೆ 15,150 ರೂ.ನಷ್ಟು ಎಕ್ಸ್​ಚೇಂಜ್​ ಆಫರ್​ ಒದಗಿಸುತ್ತಿದೆ.

ಐಫೋನ್​ 11 ಸಿರೀಸ್​​ ಮೇಲೂ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಐಫೋನ್​ 12 ಮೇಲೆ 6 ಸಾವಿರ ಇನ್​ಸ್ಟಂಟ್​​ ಡಿಸ್ಕೌಂಟ್​​ ನೀಡುತ್ತಿದೆ. ಇಎಂ​ಐ ಆಯ್ಕೆಯಲ್ಲಿ ಖರೀದಿಸುವ ಆಯ್ಕೆಯನ್ನು ನೀಡಿದೆ.

79,900 ರೂ.ವಿನ ಐಫೋನ್​ 12 ಅನ್ನು 73,900 ರೂ.ಗೆ ಮಾರಾಟ ಮಾಡುತ್ತಿದೆ. ಐಫೋನ್​ 12 ಪ್ರೊ ಮೇಲೆ 5 ಸಾವಿರ ಡಿಸ್ಕೌಂಟ್​ ನೀಡುತ್ತಿದೆ. ಹೆಚ್​ಡಿಎಫ್​ಸಿ ಬ್ಯಾಂಕ್​ ಕಾರ್ಡ್​ ಬಳಸಿ ಇಎಂ​ಐ ಆಯ್ಕೆಯಲ್ಲೂ ಖರೀದಿಸಬಹುದಾಗಿದೆ.

ಇನ್ನು ಐಫೋನ್​ 12 ಪ್ರೊ ಬೆಲೆ 1,14, 900 ರೂ ಆಗಿದೆ. ಐಫೋನ್​ 12 ಮಿನಿ 63,900 ರೂ.ಗೆ ಮಾರಾಟ ಮಾಡುತ್ತಿದೆ. ಐಫೋನ್​ 12 ಸಿರೀಸ್​ ಮೇಲೆ ಎಕ್ಸ್​ಚೇಂಜ್​ ಆಫರ್​ ಒದಗಿಸುತ್ತಿದೆ. ಐಫೋನ್​ 12 ಪ್ರೊ ಮ್ಯಾಕ್ಸ್​ ಮೇಲೆ 5 ಸಾವಿರ ಡಿಸ್ಕೌಂಟ್​​ ನೀಡುತ್ತಿದೆ.
ಆ್ಯಪಲ್​ ಡೇಸ್​ ಸೇಲ್​ನಲ್ಲಿ ಐಫೋನ್​ ಎಕ್ಸ್​ಆರ್​​ 40,999 ರೂ.ಗೆ ಮಾರಾಟ ಮಾಡುತ್ತಿದೆ.  15,150 ರೂ ಎಕ್ಸ್​ಚೇಂಜ್​ ಆಫರ್​ ನೀಡಿದೆ. ಐಫೋನ್​ ಎಸ್​ಇ 2020 ಅನ್ನು 32,999 ರೂ.ಗೆ ಮಾರಾಟ ಮಾಡುತ್ತಿದೆ. ಇನ್ನು ಫ್ಲಿಪ್​ಕಾರ್ಟ್​ 1,750 ಇನ್​ಸ್ಟಂಟ್​ ಡಿಸ್ಕೌಂಟ್​ ನೀಡುತ್ತಿದೆ.
Published by: Harshith AS
First published: December 8, 2020, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories