Apple: ಐಫೋನ್​ ಚಾರ್ಜ್​ ಮಾಡಲು ಶೀಘ್ರದಲ್ಲೇ ಯುಎಸ್‌ಬಿ ಟೈಪ್ ಸಿ ಪೋರ್ಟ್ ನೀಡಲಿರುವ ಆ್ಯಪಲ್​!?

Apple Iphone: ಆ್ಯಪಲ್ ಕಂಪನಿಯು ಕೆಲವು ವರ್ಷಗಳ ಹಿಂದೆ ತನ್ನ ಐಪ್ಯಾಡ್ ಮತ್ತು ಮ್ಯಾಕ್‌ಗಳಿಗಾಗಿ ಟೈಪ್ ಸಿ ಇಂಟರ್‌ಫೇಸ್‌ಗೆ ಬದಲಾಯಿಸಿತು, ಆದರೆ ಐಫೋನ್‌ಗಳು ಈ ಪಟ್ಟಿಗೆ ಸೇರಬಹುದು ಎಂಬ ಯಾವುದೇ ಸೂಚನೆ ಸಿಕ್ಕಿರಲಿಲ್ಲ.

ಐಫೋನ್

ಐಫೋನ್

 • Share this:
  ಕಳೆದ ವಾರವಷ್ಟೇ ಆ್ಯಪಲ್ ಕಂಪನಿಯು (Apple Company) ತನ್ನ ಐಫೋನ್ (Iphone) ಗ್ರಾಹಕರಿಗಾಗಿ ಸಂದೇಶಗಳ ಅಪ್ಲಿಕೇಶನ್‌ಗಳಲ್ಲಿ ಆಕಸ್ಮಾತ್ ಆಗಿ ವಿನಿಮಯವಾಗುವ ನಗ್ನ ಫೋಟೋಗಳನ್ನು ಬ್ಲರ್ (Photo Blur) ಮಾಡುವಂತಹ ಒಂದು ಫೀಚರ್ ಅನ್ನು ಕೆಲವು ದೇಶಗಳಲ್ಲಿ ಹೊರ ತಂದಿದೆ ಎಂದು ತಿಳಿಸಿತ್ತು. ಹೀಗೆ ಆ್ಯಪಲ್ ಕಂಪನಿಯು ತನ್ನ ಐಫೋನ್ ಗ್ರಾಹಕರಿಗಾಗಿ ಏನಾದರೊಂದು ಹೊಸ ಹೊಸ ಫೀಚರ್‌ಗಳನ್ನು(Features)  ಪರಿಚಯಿಸುತ್ತಲೇ ಇರುತ್ತದೆ ಎಂದು ಹೇಳಬಹುದು. ಈಗ ಮತ್ತೊಂದು ಹೊಸ ಸುದ್ದಿಯು ಕೇಳಲು ಸಿಗುತ್ತಿದೆ ನೋಡಿ. ಅದೇನಪ್ಪಾ ಹೊಸ ಸುದ್ದಿ ಅಂತ ನೀವು ಕೇಳಲು ತುಂಬಾನೇ ಕಾತುರರಾಗಿರಬೇಕಲ್ಲವೇ..? ಹೌದು.. ಶೀಘ್ರದಲ್ಲಿಯೇ ಐಫೋನ್‌ಗಳನ್ನು ಚಾರ್ಜ್ (Charge) ಮಾಡಲು ಆ್ಯಪಲ್ ಶೀಘ್ರದಲ್ಲಿಯೇ ಯುಎಸ್‌ಬಿ ಟೈಪ್ ಸಿ ಪೋರ್ಟ್ (USB Type-c Port) ಅನ್ನು ನೀಡಬಹುದು ಮತ್ತು ಇದು ಸಣ್ಣ ಸಾಧನಗಳಿಗೆ ಡಿ-ಫ್ಯಾಕ್ಟೋ ಚಾರ್ಜಿಂಗ್ ಸ್ಟ್ಯಾಂಡರ್ಡ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

  ಈ ವಾರ ಯುರೋಪಿಯನ್ ಸಂಸತ್ತು ತನ್ನ ಪ್ರದೇಶದಲ್ಲಿ ಈ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕ್ಯಾಮೆರಾಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಮೊಬೈಲ್ ಸಾಧನಗಳಿಗೆ ಏಕೀಕೃತ ಚಾರ್ಜಿಂಗ್ ಮಾನದಂಡವನ್ನು ತರಲು ಮತ ಚಲಾಯಿಸಿ ನಿರ್ಧಾರವನ್ನು ತೆಗೆದುಕೊಂಡಿತು ಎಂದು ಹೇಳಲಾಗುತ್ತಿದೆ.

  ಯುಎಸ್‌ಬಿ ಟೈಪ್ ಸಿ ಇಂಟರ್‌ಫೇಸ್‌ ಈಗಾಗಲೇ ಚಾರ್ಜಿಂಗ್‌ಗಾಗಿ ಉದ್ಯಮದ ಮಾನದಂಡವಾಗಿದೆ ಎಂದು ನೀವು ಹೇಳಬಹುದು, ಅದರಲ್ಲೂ ವಿಶೇಷವಾಗಿ ಈ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಆ್ಯಪಲ್ ತನ್ನ ಸ್ವಾಮ್ಯದ ಲೈಟ್ನಿಂಗ್ ಕನೆಕ್ಟರ್ ಅನ್ನು ಐಫೋನ್‌ಗಳಲ್ಲಿ ಬಳಸುವುದನ್ನು ಮುಂದುವರಿಸುತ್ತದೆ, ಇದು ಸಾಧನಗಳನ್ನು ಚಾರ್ಜ್ ಮಾಡಲು ಅದರ ಅಡಾಪ್ಟರ್ ಮತ್ತು ಚಾರ್ಜರ್‌ಗಳನ್ನು ಖರೀದಿಸುವುದು ನಿರ್ಣಾಯಕವಾಗಿದೆ.

  ಕುತೂಹಲಕಾರಿಯಾಗಿ, ಆ್ಯಪಲ್ ಕಂಪನಿಯು ಕೆಲವು ವರ್ಷಗಳ ಹಿಂದೆ ತನ್ನ ಐಪ್ಯಾಡ್ ಮತ್ತು ಮ್ಯಾಕ್‌ಗಳಿಗಾಗಿ ಟೈಪ್ ಸಿ ಇಂಟರ್‌ಫೇಸ್‌ಗೆ ಬದಲಾಯಿಸಿತು, ಆದರೆ ಐಫೋನ್‌ಗಳು ಈ ಪಟ್ಟಿಗೆ ಸೇರಬಹುದು ಎಂಬ ಯಾವುದೇ ಸೂಚನೆ ಸಿಕ್ಕಿರಲಿಲ್ಲ. ಆದರೆ ಯುರೋಪಿಯನ್ ಸಂಸತ್ತಿನ ಹೊಸ ತೀರ್ಪು ಆ್ಯಪಲ್ ಅನ್ನು ಐಫೋನ್‌ಗಳಿಗಾಗಿ ಯುಎಸ್‌ಬಿ ಟೈಪ್ ಸಿ ಅನ್ನು ಅಳವಡಿಸಿಕೊಳ್ಳಲು ಒತ್ತಾಯಿಸುವ ಸಾಧ್ಯತೆಯಿದೆ.

  ಇದನ್ನೂ ಓದಿ: WhatsApp: ಏಕ ಕಾಲದಲ್ಲಿ 32 ಜನರಿಗೆ ಗ್ರೂಪ್ ಕರೆ ಮಾಡಲು ಈ ವಿಧಾನ ಅನುಸರಿಸಿ

  ಈ ತೀರ್ಪಿನ ಹಿಂದಿನ ಮುಖ್ಯ ಕಾರಣವು ಆ್ಯಪಲ್‌ನೊಂದಿಗೆ ಕಡಿಮೆ ಸಂಬಂಧವನ್ನು ಹೊಂದಿದ್ದು, ವರ್ಷಗಳು ಕಳೆದಂತೆ ರೂಪುಗೊಳ್ಳುವ ಇ-ತ್ಯಾಜ್ಯದ ಪ್ರಮಾಣದ ಬಗ್ಗೆ ಹೆಚ್ಚು ಗಮನ ಹರಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜನರು ಚಾರ್ಜಿಂಗ್‌ಗಾಗಿ ಸಿಂಗಲ್ ಚಾರ್ಜರ್ ಮತ್ತು ವೈರ್ ಅನ್ನು ಅವಲಂಬಿಸಬೇಕೆಂದು ಯುರೋಪಿಯನ್ ಸಂಸತ್ತು ಬಯಸುತ್ತದೆ. ಈ ರೀತಿಯಾಗಿ, ಅವರು ಬೇರೆ ಅಕ್ಸೆಸರಿಸ್‌ಗಳ ರಾಶಿ ಉಂಟಾಗುವುದಿಲ್ಲ ಮತ್ತು ಅಡಾಪ್ಟರ್‌ಗಳ ದೊಡ್ಡ ರಾಶಿಯೂ ಸಂಗ್ರಹವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Just Dial: ನೈಸ್‌ಲೋಕಲ್‌ ವೆಬ್‌ಸೈಟ್‌ಗೆ ಬಿಸಿ ಮುಟ್ಟಿಸಿದ ಜಸ್ಟ್‌ ಡಯಲ್‌ ಕಂಪನಿ!

  ಈ ತೀರ್ಪಿಗೆ ಇನ್ನೂ ಅಧಿಕೃತ ಅನುಮೋದನೆ ದೊರೆತಿಲ್ಲ ಮತ್ತು ಈ ಆದೇಶವನ್ನು ಕಾನೂನು ಬದ್ಧವಾಗಿ ಅನುಮೋದಿಸಿದರೆ, ಆ್ಯಪಲ್‌ಗೆ ಈ ಪ್ರದೇಶದ ನಿಯಮಗಳನ್ನು ಪಾಲಿಸದೆ ಬೇರೆ ಆಯ್ಕೆಗಳಿಲ್ಲ. ಇದು ಅಂತಿಮವಾಗಿ ಆ್ಯಪಲ್ ಅನ್ನು ಯುಎಸ್‌ಬಿ ಟೈಪ್ ಸಿ ಇಂಟರ್‌ಫೇಸ್‌ನೊಂದಿಗೆ ವಿಶ್ವದ ಇತರ ಭಾಗಗಳಲ್ಲಿಯೂ ಐಫೋನ್‌ಗಳನ್ನು ನೀಡಲು ಒತ್ತಾಯಿಸುತ್ತದೆ.

  ಐಫೋನ್ ರೀಟೇಲ್ ಬಾಕ್ಸ್‌ನಿಂದ ಈಗಾಗಲೇ ಚಾರ್ಜರ್ ಅನ್ನು ತೆಗೆದುಹಾಕುವ ಮೂಲಕ ಆ್ಯಪಲ್ ಪರಿಸರದ ಮೇಲೆ ತನ್ನ ಕಾಳಜಿಯನ್ನು ವ್ಯಕ್ತಪಡಿಸಿತ್ತು, ಆದರೆ ಗ್ರಾಹಕರು ಇನ್ನೂ ಅವುಗಳನ್ನು ಪ್ರತ್ಯೇಕವಾಗಿ ಖರೀದಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಹೋಲಿಸಿದರೆ, ಎಲ್ಲಾ ಸಾಧನಗಳಿಗೆ ಯುಎಸ್‌ಬಿ ಟೈಪ್ ಸಿ ಪರವಾಗಿ ಐರೋಪ್ಯ ಒಕ್ಕೂಟದ ತೀರ್ಪು ಹೆಚ್ಚು ಅರ್ಥಪೂರ್ಣವಾಗಿದೆ ಮತ್ತು ಈ ಪ್ರದೇಶದಲ್ಲಿ ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಭರವಸೆಯನ್ನು ಈ ತೀರ್ಪು ನೀಡುತ್ತದೆ.
  Published by:Harshith AS
  First published: