Apple: 2023ಕ್ಕೆ ಮಾರುಕಟ್ಟೆಗೆ ಬರಲಿದೆಯಂತೆ 15-ಇಂಚಿನ ಮ್ಯಾಕ್‌ಬುಕ್ ಏರ್ ಮತ್ತು 12-ಇಂಚಿನ ಲ್ಯಾಪ್​ಟಾಪ್

ಟೆಕ್ ದೈತ್ಯ ಆಪಲ್ ಕಂಪನಿ ಇತ್ತೀಚೆಗೆ ತನ್ನ ಕಸ್ಟಮ್ M2 ಚಿಪ್‌ಸೆಟ್‌ನೊಂದಿಗೆ ಎರಡು ಹೊಸ ಮ್ಯಾಕ್‌ಬುಕ್‌ಗಳನ್ನು ಪ್ರಾರಂಭಿಸಿದ ಬೆನ್ನಲ್ಲೇ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಎಂದರೆ ಆಪಲ್ ಮುಂದಿನ ವರ್ಷ ತನ್ನ ಹೊಸ, ವೇಗವಾದ ಆಂತರಿಕ ಚಿಪ್‌ಗಳನ್ನು ಬಳಸಿಕೊಂಡು ಲ್ಯಾಪ್‌ಟಾಪ್‌ಗಳ ಶ್ರೇಣಿಯನ್ನು ವಿಸ್ತರಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಟೆಕ್ ದೈತ್ಯ ಆಪಲ್ ಕಂಪನಿ (Apple Company) ಇತ್ತೀಚೆಗೆ ತನ್ನ ಕಸ್ಟಮ್ M2 ಚಿಪ್‌ಸೆಟ್‌ನೊಂದಿಗೆ ಎರಡು ಹೊಸ ಮ್ಯಾಕ್‌ಬುಕ್‌ಗಳನ್ನು (MacBook) ಪ್ರಾರಂಭಿಸಿದ ಬೆನ್ನಲ್ಲೇ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಎಂದರೆ ಆಪಲ್ ಮುಂದಿನ ವರ್ಷ ತನ್ನ ಹೊಸ, ವೇಗವಾದ ಆಂತರಿಕ ಚಿಪ್‌ಗಳನ್ನು (Chip) ಬಳಸಿಕೊಂಡು ಲ್ಯಾಪ್‌ಟಾಪ್‌ಗಳ (Laptop) ಶ್ರೇಣಿಯನ್ನು ವಿಸ್ತರಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮಾರುಕಟ್ಟೆಯ (Market) ದೊಡ್ಡ ಪಾಲನ್ನು ತನ್ನದಾಗಿಸಿಕೊಳ್ಳುವ ಗುರಿಯನ್ನು ಹೊಂದಿರುವ ಆಪಲ್ 2023ಕ್ಕೆ 15-ಇಂಚಿನ ಮ್ಯಾಕ್‌ಬುಕ್ ಏರ್ ಮತ್ತು ಹೊಸ 12-ಇಂಚಿನ ಲ್ಯಾಪ್‌ಟಾಪ್ ಅನ್ನು ಹೊರತರಲು ಪ್ಲ್ಯಾನ್ ಮಾಡಿದೆ.

M2 ಚಿಪ್‌ನೊಂದಿಗೆ ಹೊಸ 12-ಇಂಚಿನ ಮ್ಯಾಕ್‌ಬುಕ್
ಕ್ಯುಪರ್ಟಿನೊ ಆಧಾರಿತ ಟೆಕ್ ದೈತ್ಯ M2 ಚಿಪ್‌ನೊಂದಿಗೆ ಹೊಸ 12-ಇಂಚಿನ ಮ್ಯಾಕ್‌ಬುಕ್ ಅನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಮುಂಬರುವ M2 ಪ್ರೊ ಮತ್ತು M2 ಮ್ಯಾಕ್ಸ್ ಚಿಪ್‌ಗಳ ಕುರಿತು ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಮ್ಯಾಕ್‌ಬುಕ್ ಏರ್‌ನ 14 ವರ್ಷಗಳ ಇತಿಹಾಸದ ದೊಡ್ಡದಾದ ಮೊದಲ ಮಾದರಿ
ಆಪಲ್ ಮುಂದಿನ ವರ್ಷದ ಆರಂಭದಲ್ಲಿ ಮ್ಯಾಕ್‌ಬುಕ್ ಏರ್‌ನ ದೊಡ್ಡ ಆವೃತ್ತಿಯನ್ನು ಪ್ರಾರಂಭಿಸಬಹುದು ಎಂದು ಗುರ್ಮನ್ ಹೇಳಿದ್ದಾರೆ. ಕಂಪನಿಯು ಮುಂದಿನ ವರ್ಷ ಬಿಡುಗಡೆ ಮಾಡಲು 15 ಇಂಚಿನ ಸ್ಕ್ರೀನ್ ನ ದೊಡ್ಡ ಮ್ಯಾಕ್‌ಬುಕ್ ಏರ್‌ ಮೇಲೆ ಕೆಲಸ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದಿದ್ದಾರೆ. ಇದು ಮ್ಯಾಕ್‌ಬುಕ್ ಏರ್‌ನ 14 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡದಾದ ಮೊದಲ ಮಾದರಿಯಾಗಿದೆ. ಜೊತೆಗೆ ಆಪಲ್ ತನ್ನ ಹೊಸ ಲ್ಯಾಪ್‌ಟಾಪ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ವರ್ಷ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಮುಂಬರುವ ಮ್ಯಾಕ್‌ಬುಕ್ ಏರ್, ಆಪಲ್ ವರ್ಲ್ಡ್‌ವೈಡ್ ಡೆವಲಪರ್‌ಗಳ ಸಮ್ಮೇಳನ (WWDC) 2022ರಲ್ಲಿ ಅನಾವರಣಗೊಂಡ 13.6-ಇಂಚಿನ ಮ್ಯಾಕ್‌ಬುಕ್ ಏರ್‌ನ ವಿಶಾಲ ಆವೃತ್ತಿಯಾಗಿದೆ. ಮ್ಯಾಕ್‌ಬುಕ್ ಏರ್‌ನಂತೆಯೇ 15-ಇಂಚಿನ ಮ್ಯಾಕ್‌ಬುಕ್ ಏರ್ ಸಹ ಅದೇ ವಿನ್ಯಾಸವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬಿಡುಗಡೆ ಯಾವಾಗ?
ಹೊಸ 15-ಇಂಚಿನ ಮ್ಯಾಕ್‌ಬುಕ್ ಏರ್ ಮತ್ತೆ M2 ಚಿಪ್ ಅನ್ನು ಬಳಸುವ ಸಾಧ್ಯತೆಯಿದೆ. ಗುರ್ಮನ್ ಪ್ರಕಾರ, ಆಪಲ್ 12-ಇಂಚಿನ ಮ್ಯಾಕ್‌ಬುಕ್‌ನಲ್ಲಿ ಸಹ ಕಾರ್ಯನಿರ್ವಹಿಸುತ್ತಿದೆ, ಇದು 2023ರ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದಿದ್ದಾರೆ. ಆದರೆ ಆಪಲ್ ನ ಈ ಸಾಧನಗಳು ಯಾವ ಬೆಲೆ ವಿಭಾಗದಲ್ಲಿ ಪ್ರಾರಂಭಗೊಳ್ಳುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಇದನ್ನೂ ಓದಿ: Airtel New Plans: ಏರ್​​ಟೆಲ್​​ ಗ್ರಾಹಕರೇ ಅಲರ್ಟ್, 56 ಮತ್ತು 84 ದಿನಗಳಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಇಲ್ಲಿದೆ ನೋಡಿ

ಆಪಲ್ 2022ರಲ್ಲಿ M2 ಪ್ರೊ ಮತ್ತು M2 ಮ್ಯಾಕ್ಸ್ ಚಿಪ್‌ನೊಂದಿಗೆ ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸ 14-ಇಂಚಿನ ಮತ್ತು 16-ಇಂಚಿನ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ಗಳನ್ನು J414 ಮತ್ತು J416 ಎಂದು ಕೋಡ್ ನೇಮ್ ಮಾಡಲಾಗಿದೆ. ಹೆಚ್ಚುವರಿಯಾಗಿ, M2 ಮ್ಯಾಕ್ಸ್ SoC 12 CPU ಕೋರ್‌ಗಳನ್ನು ಮತ್ತು 38 GPU ಕೋರ್‌ಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

ಮ್ಯಾಕ್‌ಬುಕ್ ಏರ್‌ಗೆ ಇದು ಅತಿದೊಡ್ಡ ನಿರ್ಣಾಯಕ ಪರೀಕ್ಷೆ
ಡಿಸ್ಪ್ಲೇ ಸಪ್ಲೈ ಚೈನ್ ಕನ್ಸಲ್ಟೆಂಟ್ಸ್‌ನ ಉದ್ಯಮದ ಸಿಇಒ ರಾಸ್ ಯಂಗ್ ಅವರು 14.1-ಇಂಚಿನ ಐಪ್ಯಾಡ್ ಪ್ರೋ ಜೊತೆಗೆ ಮಿನಿ LED ಬ್ಯಾಕ್‌ಲೈಟಿಂಗ್ ಮತ್ತು ProMotion ಡಿಸ್ಪ್ಲೇ ಅಭಿವೃದ್ಧಿಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಉತ್ಪನ್ನಗಳು ಮುಂದಿನ ವರ್ಷದ ಆರಂಭದಲ್ಲಿ ಲಭ್ಯವಾಗಲಿದೆ ಎಂದು ಯಂಗ್ ತಿಳಿಸಿದ್ದಾರೆ. ಹೊಸ 11-ಇಂಚಿನ ಮತ್ತು 12.9-ಇಂಚಿನ ಐಪ್ಯಾಡ್ ಪ್ರೊ ಮಾದರಿಗಳು ಈ ವರ್ಷದ ನಂತರ ಬರಬಹುದು ಎಂದು ಗುರ್ಮನ್ ಮಾಹಿತಿ ಹಂಚಿಕೊಂಡಿದ್ದಾರೆ. 2008ರಲ್ಲಿ ಸ್ಟೀವ್ ಜಾಬ್ಸ್ ಪರಿಚಯಿಸಿದ ನಂತರ ಮ್ಯಾಕ್‌ಬುಕ್ ಏರ್‌ಗೆ ಇದು ಅತಿದೊಡ್ಡ ನಿರ್ಣಾಯಕ ಪರೀಕ್ಷೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Telegram: ಇನ್ಮುಂದೆ 'ಟೆಲಿಗ್ರಾಮ್' ಪ್ರೀಮಿಯಂ ಬಳಕೆಗೆ ಹಣ ಪಾವತಿಸಬೇಕು; ಇದೇ ತಿಂಗಳಿಂದ ಆರಂಭವಾಗಲಿದೆ ಹೊಸ ಪ್ಲ್ಯಾನ್

ಆಪಲ್ ತನ್ನ ಕೊನೆಯ 12-ಇಂಚಿನ ಲ್ಯಾಪ್‌ಟಾಪ್ ಅನ್ನು 2015ರಲ್ಲಿ ಸ್ಲಿಮ್ ಫ್ರೇಮ್‌ನೊಂದಿಗೆ ಪ್ರಾರಂಭಿಸಿತು, ಆದರೆ ಸಾಧನವು ಕೀಬೋರ್ಡ್ ವೈಫಲ್ಯಗಳು ಮತ್ತು ನಿಧಾನಗತಿಯ ಕಾರ್ಯಕ್ಷಮತೆಗಾಗಿ ಹಲವಾರು ಟೀಕೆಗಳನ್ನು ಎದುರಿಸಬೇಕಾಯಿತು. ಹೊಸ 12-ಇಂಚಿನ ಲ್ಯಾಪ್‌ಟಾಪ್ ಹೇಗಿರಲಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ ಇದು 13.3-ಇಂಚಿನ, 14.2-ಇಂಚಿನ ಮತ್ತು 16.2-ಇಂಚಿನ ಗಾತ್ರಗಳಲ್ಲಿ ಬರುತ್ತದೆ ಎನ್ನಲಾಗಿದೆ.
Published by:Ashwini Prabhu
First published: