ಚೀನಾದ ಪ್ರಸಿದ್ಧ ಟೆಕ್ ಕಂಪೆನಿಯಾಗಿರುವ ಆ್ಯಪಲ್ (Apple) ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಈ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ಹೊಸ ಫೀಚರ್ಸ್ ಅನ್ನು ಐಫೋನ್ 14 ಸೀರಿಸ್ (IPhone 14 Series)ವರೆಗೆ ಮೊಬೈಲ್ಗಳನ್ನು ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಐಫೋನ್ 15 ಸೀರಿಸ್ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಈ ಮಧ್ಯೆ ಆ್ಯಪಲ್ ಕಂಪೆನಿ ಹೊಸ ಆ್ಯಪಲ್ ಹೋಮ್ಪಾಡ್ ಸ್ಪೀಕರ್ (Apple HomePod Speaker) ಒಂದನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ ಹೋಮ್ ಡಿವೈಸ್ ಈ ಬಾರಿ ಆ್ಯಪಲ್ ಕಂಪೆನಿಯಿಂದ ಬಿಡುಗಡೆಯಾದ ಹೊಸ ಸ್ಪೀಕರ್ ಆಗಿದೆ.
ಆ್ಯಪಲ್ ಕಂಪೆನಿ ಮಾರುಕಟ್ಟೆಗೆ ಹೊಸ ಆ್ಯಪಲ್ ಹೋಮ್ಪಾಡ್ 2ನೇ ಜೆನ್ ಎಂಬ ಸ್ಪೀಕರ್ ಅನ್ನು ಲಾಂಚ್ ಮಾಡಿದೆ. ಈ ಸ್ಪೀಕರ್ ಅನ್ನು ಬಳಕೆದಾರರು ಎಲ್ಲಿ ಬೇಕಾದರು ಕೊಂಡೊಯ್ಯಬಹುದಾಗಿದೆ. ಹಾಗಿದ್ರೆ ಈ ಸ್ಮಾರ್ಟ್ ಡಿವೈಸ್ನ ಫೀಚರ್ಸ್, ಬೆಲೆ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಆ್ಯಪಲ್ ಹೋಮ್ಪಾಡ್ 2ನೇ ಜೆನ್ ಫೀಚರ್ಸ್ ಹೇಗಿದೆ?
ಕೆಲವು ದಿನಗಳ ಹಿಂದಷ್ಟೇ ಹೊಸ ಮ್ಯಾಕ್ಬುಕ್ ಪ್ರೋ ಅನ್ನು ಲಾಂಚ್ ಮಾಡಿದ ಬಳಿಕ ಹೋಮ್ಪಾಡ್ 2 ನೇ ಜೆನ್ ಸ್ಪೀಕರ್ ಅನ್ನು ಕಂಪೆನಿ ಲಾಂಚ್ ಮಾಡಿದೆ. ಇದು ಅತ್ಯುತ್ತಮ ಅನುಭವ ನೀಡುವ ಸ್ಪೀಕರ್ ಆಗಿದೆ. ಅದರಲ್ಲೂ ನೆಕ್ಟ್ ಲೆವಲ್ನ ಅಕೌಸ್ಟಿಕ್ಸ್ ಮತ್ತು ಐಕಾನಿಕ್ ವಿನ್ಯಾಸದೊಂದಿದೆ ಈ ಡಿವೈಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಸ್ಪೀಕರ್ ಸಿರಿ ಬೆಂಬಲವನ್ನು ಸಹ ಪಡೆದುಕೊಂಡಿದೆ. ಇನ್ನು ಇದರ ಆಡಿಯೋ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು ಕಂಪ್ಯೂಟೇಶನಲ್ ಆಡಿಯೋ ಫಿಚರ್ಸ್ ಅನ್ನು ಅಳವಡಿಸಲಾಗಿದೆ.
ಎಚ್ಚರಿಕೆಯ ಫೀಚರ್ಸ್
ಇನ್ನು ಆ್ಯಪಲ್ ಕಂಪೆನಿಯ ಹೋಮ್ಪಾಡ್ 2ನೇ ಜೆನ್ ಸ್ಮಾರ್ಟ್ ಡಿವೈಸ್ ಅನ್ನು ಮನೆಯಲ್ಲಿ ಇರಿಸಿದಾಗ ಏನಾದರೂ ಹೊಗೆ ಅಥವಾ ಕಾರ್ಬನ್ ಮಾನಾಕ್ಸೈಡ್ ಕಂಡುಬಂದರೆ ಈ ಡಿವ ಐಸ್ ಅಲಾರಂ ಮಾಡುವ ಮೂಲಕ ಬಳಕೆದಾರರನ್ನು ಎಚ್ಚರಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಆದ್ದರಿಂದ ಮನೆಯಲ್ಲಾಗುವಂತಹ ಈ ರೀತಿಯ ಘಟನೆಗಳಿಂದ ಮುಂಚಿತವಾಗಿಯೇ ಕ್ರಮವನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ.
ಸೆಕ್ಯುರಿಟಿ ಹೊಂದಿದ ಡಿವೈಸ್ ಆಗಿದೆ
ಆ್ಯಪಲ್ ತನ್ನ ಸ್ಮಾರ್ಟ್ ಹೋಮ್ ಡಿವೈಸ್ಗಳ ಮೂಲಕ ನಡೆಯುವ ಯಾವುದೇ ಸಂವಹನವು ಪ್ರಾರಂಭದಿಂದ ಕೊನೆಯವರೆಗೂ ಎನ್ಕ್ರಿಪ್ಟ್ ಆಗಿರುತ್ತದೆ. ಈ ಕಾರಣಕ್ಕೆ ನಿಮ್ಮ ಸಂಭಾಷಣೆಗಳನ್ನು ಯಾರೂ ಸಹ ಕೇಳಲು ಸಾಧ್ಯವಿಲ್ಲ. ಹಾಗೆಯೇ ಆ್ಯಪಲ್ ಸಹ ಸ್ಮಾರ್ಟ್ ಹೋಮ್ ಡಿವೈಸ್ಗಳೊಂದಿಗೆ ನೀವು ನಡೆಸುತ್ತಿರುವ ಸಂಭಾಷಣೆಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ ಎಂದು ಆ್ಯಪಲ್ ಕಂಪೆನಿ ಮಾಹಿತಿ ನೀಡಿದೆ.
ಬೆಲೆ ಮತ್ತು ಲಭ್ಯತೆ
ಇನ್ನು ಭಾರತದಲ್ಲಿ ಈ ಆ್ಯಪಲ್ ಹೋಮ್ಪಾಡ್ 2ನೇ ಜೆನ್ ಸ್ಪೀಕರ್ ಅನ್ನು ಖರೀದಿ ಮಾಡುವವರಿಗೆ ಕಂಪೆನಿ ಪ್ರೀ ಬುಕಿಂಗ್ ಆರ್ಡರ್ ಮಾಡುವ ಆಯ್ಕೆಯನ್ನು ನೀಡಿದೆ. ಈ ಡಿವೈಸ್ನ ಮಾರಾಟ ಫೆಬ್ರವರಿ 3, 2023 ರಿಂದ ಮಾರುಕಟ್ಟೆಯಲ್ಲಿ ಲಭ್ಯ ಇರಲಿದ್ದು, ಆ್ಯಪಲ್ನ ಅಧಿಕೃತ ರಿಟೇಲರ್ ಶಾಪ್ ಹಾಗೂ ಆ್ಯಪಲ್ನ ಆನ್ಲೈನ್ ಶಾಪಿಂಗ್ ಮೂಲಕ ಖರೀದಿ ಮಾಡಬಹುದು.
ಇದನ್ನೂ ಓದಿ: ವಾಟ್ಸಾಪ್ನಲ್ಲಿ ಮತ್ತೊಂದು ಅಚ್ಚರಿಯ ಫೀಚರ್ಸ್ ಬಿಡುಗಡೆ! ಏನೆಂದು ಇಲ್ಲಿದೆ ಮಾಹಿತಿ
ಈ ಡಿವೈಸ್ನ ಸಾಮಾನ್ಯ ದರ 32,900 ರೂಪಾಯಿಗಳಾಗಿದ್ದು, ಈ ಹಿಂದೆ ಲಾಂಚ್ ಮಾಡಲಾಗಿದ್ದ ಹೋಮ್ಪಾಡ್ 1 ನೇ ಜೆನ್ ನ ಬೆಲೆ 19,900 ರೂಪಾಯಿ ಗಳಾಗಿತ್ತು ಎಂಬುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ