ಹಳೆ ಮಾದರಿಯ ಐಫೋನ್ ಸರಬರಾಜು ವಿಳಂಬ, ಕಳಪೆ ಬ್ಯಾಟರಿ ಪೂರೈಕೆ ಕುರಿತಂತೆ ಕ್ಷಮೆಯಾಚಿಸಿದ ಐಫೋನ್ ಸಂಸ್ಥೆ


Updated:December 29, 2017, 10:34 PM IST
ಹಳೆ ಮಾದರಿಯ ಐಫೋನ್ ಸರಬರಾಜು ವಿಳಂಬ, ಕಳಪೆ ಬ್ಯಾಟರಿ ಪೂರೈಕೆ ಕುರಿತಂತೆ ಕ್ಷಮೆಯಾಚಿಸಿದ ಐಫೋನ್ ಸಂಸ್ಥೆ

Updated: December 29, 2017, 10:34 PM IST
ಹಳೆ ಮಾದರಿಯ ಐಫೋನ್ ಸರಬರಾಜು ವಿಳಂಬ ಮತ್ತು ಕಳಪೆ ಬ್ಯಾಟರಿ ಪೂರೈಕೆಯ ಕುರಿತಂತೆ ಕೇಸ್`ಗಳು ದಾಖಲಾಗಿ ಗ್ರಾಹಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ಧಂತೆ ಐಫೋನ್ ಸಂಸ್ಥೆ ಕ್ಷಮೆಯಾಚಿಸಿದೆ.

ಅಷ್ಟೇ ಅಲ್ಲ, ಬ್ಯಾಟರಿ ಬದಲಾವಣೆಗೆ ಬೆಲೆ ಕಡಿತಗೊಳಿಸಿರುವ ಐಫೋನ್ ಸಂಸ್ಥೆ, ಬಳಕೆದಾರರೇ ತಾವು ಬಳಸುತ್ತಿರುವ ಐಪೋನ್ ಬ್ಯಾಟರಿ ಉತ್ತಮ ಗುಣಮಟ್ಟದ್ದೇ ಎಂದು ಪರೀಕ್ಷಿಸಲು ಸಾಫ್ಟ್`ವೇರ್ ಬದಲಾವಣೆಗೂ ಮುಂದಾಗಿದ್ದು, ವೆಬ್`ಸೈಟ್`ನಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದೆ.

ಸದ್ಯ, ಐಫೋನ್ ಬ್ಯಾಟರಿ ಬದಲಾವಣೆಗೆ 79 ಡಾಲರ್ ಚಾರ್ಜ್ ಮಾಡಲಾಗುತ್ತಿದ್ದು, ಮುಂದಿನ ತಿಂಗಳಿಂದ ಬೆಲೆಯನ್ನ 29 ಡಾಲರ್`ಗೆ ಇಳಿಸುವ ಜೊತೆಗೆ ಗ್ರಾಹಕರು ಬ್ಯಾಟರಿಯ ಗುಣಮಟ್ಟ ಪರೀಕ್ಷಿಸಿಕೊಳ್ಳಲು ಐಓಎಸ್ ಆಪರೇಟಿಂಗ್ ಸಿಸ್ಟಂ ಅಪ್ಡೇಟ್ ಮಾಡಲು ಮುಂದಾಗಿದೆ.
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ