HOME » NEWS » Tech » APPLE ANNOUNCES FREE REPAIR PROGRAM FOR IPHONE 11 USERS HAVING TOUCHSCREEN ISSUES HG

ಐಫೋನ್ 11 ಬಳಕೆದಾರರಿಗೆ ಆಫರ್ ನೀಡಿದ ಆ್ಯಪಲ್ ಸಂಸ್ಥೆ; ಏನದು?

2019ನೇ ನವೆಂಬರ್ ತಿಂಗಳಿಂದ ಮೇ 2020ರ ಅವಧಿಯಲ್ಲಿ ತಯಾರಿಸಲಾದ ಐಫೋನ್ 11 ಆವೃತ್ತಿಯಲ್ಲಿ ಡಿಸ್ ಪ್ಲೇಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.

news18-kannada
Updated:December 7, 2020, 10:04 PM IST
ಐಫೋನ್ 11 ಬಳಕೆದಾರರಿಗೆ ಆಫರ್ ನೀಡಿದ ಆ್ಯಪಲ್ ಸಂಸ್ಥೆ; ಏನದು?
iphone 11
  • Share this:
ಜನಪ್ರಿಯ ಆ್ಯಪಲ್ ಸಂಸ್ಥೆ ಐಫೋನ್ 11 ಬಳಕೆದಾರರಿಗೆ ಆಫರ್ ಒಂದನ್ನು ನೀಡಿದೆ. ಐಫೋನ್ 11ನಲ್ಲಿ ಡಿಸ್​ಪ್ಲೇ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ಉಚಿತವಾಗಿ ಸರಿಪಡಿಸಿಕೊಡುವುದಾಗಿ ತಿಳಿಸಿದೆ.

2019ನೇ ನವೆಂಬರ್ ತಿಂಗಳಿಂದ ಮೇ 2020ರ ಅವಧಿಯಲ್ಲಿ ತಯಾರಿಸಲಾದ ಐಫೋನ್ 11 ಆವೃತ್ತಿಯಲ್ಲಿ ಡಿಸ್ ಪ್ಲೇಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆಯಿಂದಾಗಿ ಅನೇಕರು ತೊಂದರೆಗೀಡಾಗಿದ್ದರು. ಇದೀಗ ಅವರ ಸಮಸ್ಯೆಯನ್ನು ಬಗೆಹರಿಸಲು ಆ್ಯಪಲ್ ಉಚಿತವಾಗಿ ರಿಪೆರಿ ಮಾಡಿಕೊಡುವುದಾಗಿ ಹೇಳಿದೆ.


ಐಫೊನ್ 11 ಬಳಕೆದಾರರು ಆಫರ್ ಪರಿಶೀಲಿಸುವುದು ಹೇಗೆ?

ಆ್ಯಪಲ್ ಸಂಸ್ಥೆ ಐಫೋನ್ 11ನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಪರಿಶೀಲಿಸುವುದಕ್ಕಾಗಿ ಪತ್ಯೇಕ ಪೇಜ್ ತೆರೆಯಲಿದೆ. ಬಳಕೆದಾರರು ತಮ್ಮ ಐಫೋನ್ 11 ಸಮಸ್ಯೆಯನ್ನು ಇಲ್ಲಿ ಬರೆಯಬಹುದಾಗಿದೆ. ನಂತರ ಆ್ಯಪಲ್ ಸಂಸ್ಥೆ ಪರಿಶೀಲಿಸಿ ಐಫೋನ್ 11 ಡಿಸ್​ಪ್ಲೇ ಸರಿಪಡಿಸಿ ಕೊಡಲಿದೆ.
Published by: Harshith AS
First published: December 7, 2020, 10:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories