Apple festive offer: ಐಫೋನ್​ 12 ಖರೀದಿಸಿದರೆ ಏರ್​ಪಾಡ್​ ಉಚಿತ! ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಿರುವ ಆ್ಯಪಲ್​​

Apple Iphone: ಒಂದು ವಾರಗಳ ಕಾಲ ಸೇಲ್​ ನಡೆಯಲಿದ್ದು, ಅಕ್ಟೋಬರ್ 7 ರಿಂದ ಆ್ಯಪಲ್​ ಫೆಸ್ಟಿವಲ್(Apple Festive Offer)  ಆಫರ್​ ಆರಂಭವಾಗಲಿದೆ. ಗ್ರಾಹಕರಿಗಾಗಿ ಆಕರ್ಷಕ ಕೊಡುಗೆ ನೀಡಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಮ್ಮ ವಾರ್ಷಿಕ ಹಬ್ಬದ ಆ್ಯಪಲ್​ ಐಫೋನ್​ಗಳ​ ಮೇಲಿನ ದರ ಕಡಿತ ಮಾರಾಟ ಮಾಡಿ ಮಾರಲಿದೆ.

iPhone 12- AirPods

iPhone 12- AirPods

  • Share this:
    ದಸರಾ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಹಲವು ಸ್ಮಾರ್ಟ್​ಫೋನ್​ ಕಂಪನಿಗಳು ಮತ್ತು ಆನ್ಲೈನ್​ ಇ-ಕಾಮರ್ಸ್​ ಮಳಿಗೆಗಳು ಗ್ರಾಹಕರಿಗಾಗಿ ಆಫರ್‌ಗಳನ್ನು ಮತ್ತು ರಿಯಾಯಿತಿಗಳನ್ನು ಪರಿಚಯಿಸಿದೆ. ಅದರಂತೆ ಐಫೋನ್ ಖರೀದಿದಾರರಿಗೆ ಆ್ಯಪಲ್​ ಕಂಪನಿ ಕೂಡ ಹಬ್ಬದ ಕೊಡುಗೆಯನ್ನು ಘೋಷಿಸಿದೆ. ಆ್ಯಪಲ್ ಸ್ಟೋರ್ ನಿಂದ IPhone  12 ಅಥವಾ Iphone 12 mini ಖರೀದಿಸಿದರೆ, ಉಚಿತವಾಗಿ ಏರ್‌ಪಾಡ್‌ಗಳನ್ನು (Airpod) ಖರೀದಿಸುವ ಅವಕಾಶ ನೀಡಲಿದೆ.

    ಒಂದು ವಾರಗಳ ಕಾಲ ಸೇಲ್​ ನಡೆಯಲಿದ್ದು, ಅಕ್ಟೋಬರ್ 7 ರಿಂದ ಆ್ಯಪಲ್​ ಫೆಸ್ಟಿವಲ್(Apple Festive Offer)  ಆಫರ್​ ಆರಂಭವಾಗಲಿದೆ. ಗ್ರಾಹಕರಿಗಾಗಿ ಆಕರ್ಷಕ ಕೊಡುಗೆ ನೀಡಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಮ್ಮ ವಾರ್ಷಿಕ ಹಬ್ಬದ ಆ್ಯಪಲ್​ ಐಫೋನ್​ಗಳ​ ಮೇಲಿನ ದರ ಕಡಿತ ಮಾರಾಟ ಮಾಡಿ ಮಾರಲಿದೆ.

    ಆ್ಯಪಲ್ ತನ್ನ ಆನ್‌ಲೈನ್ ಸ್ಟೋರ್‌ನಲ್ಲಿ ಆಫರ್ ಕುರಿತಾಗಿ ಪಟ್ಟಿ ತಯಾರಿಸಿದೆ. ಆದರೆ ಸೇಲ್​ ಅಕ್ಟೋಬರ್ 7 ಆಗಿರುವುದರಿಂದ, ಉತ್ಪನ್ನಗಳನ್ನು ಇಂದೇ ಖರೀದಿಸಲು ಸಾಧ್ಯವಿಲ್ಲ. ಆ್ಯಪಲ್​ ಫೆಸ್ಟಿವಲ್​ ಸೇಲ್​ನಲ್ಲಿ ಐಫೋನ್ 12 ಅಥವಾ ಐಫೋನ್ 12 ಮಿನಿ ತಮ್ಮ ಎಮ್‌ಆರ್‌ಪಿಗಳಲ್ಲಿ ಲಭ್ಯವಿರುತ್ತದೆ,

    ಐಫೋನ್ 12 ಮೂಲ ಬೆಲೆ 65,900 ರೂ ಇರಲಿದ್ದು, ಗ್ರಾಹಕರಿಗಗಿ ಐಫೋನ್​ 12 ಮಿನಿ 59,900 ರೂಗಳಲ್ಲಿ ಸಿಗಲಿದೆ, ಇದರ ಖರೀದಿ ಮೇಲೆ  ಉಚಿತ ಏರ್‌ಪಾಡ್‌ಗಳನ್ನು ನೀಡುತ್ತಿದೆ. ವೈರ್‌ಲೆಸ್ ಚಾರ್ಜಿಂಗ್ ಕೇಸ್ ಇಲ್ಲದ ಏರ್‌ಪಾಡ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಏರ್‌ಪಾಡ್‌ಗಳು ಮತ್ತು ಏರ್‌ಪಾಡ್ಸ್ ಪ್ರೊ ಸೇರಿದಂತೆ ಯಾವುದೇ ಏರ್‌ಪಾಡ್ಸ್ ಮಾದರಿಗಳನ್ನು ನೀವು ಆಯ್ಕೆ ಮಾಡಬಹುದು ಎಂದು ಆ್ಯಪಲ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

    ಕಂಪನಿಯ ವೆಬ್‌ಸೈಟ್‌ನ ಪ್ರಕಾರ, ವೈರ್‌ಲೆಸ್ ಚಾರ್ಜಿಂಗ್ ಕೇಸ್ ಇಲ್ಲದ ಏರ್‌ಪಾಡ್‌ಗಳ ಬೆಲೆ ರೂ 14,900, ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಏರ್‌ಪಾಡ್‌ಗಳ ಬೆಲೆ ರೂ 18,900, ಮತ್ತು ಏರ್‌ಪಾಡ್ಸ್ ಪ್ರೊ 24,900 ರೂ.ಗೆ ಸಿಗಲಿದೆ.

    ವೈರ್‌ಲೆಸ್ ಚಾರ್ಜಿಂಗ್ ಇಲ್ಲದೆ ಬರುವ ಮೊದಲ ತಲೆಮಾರಿನ ಏರ್‌ಪಾಡ್‌ಗಳನ್ನು ರಿಯಾಯಿತಿ ಧರದಲ್ಲಿ ಖರೀದಿಸುವ ಅವಕಾಶವನ್ನು ಆ್ಯಪಲ್ ಒದಗಿಸುತ್ತಿದೆ. ಮಾತ್ರವಲ್ಲದೆ ಕನಿಷ್ಟ 14,900 ರೂಪಾಯಿಗಳಿಗೆ ಸಿಗಲಿದೆ.

    ಇನ್ನು ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲೂ ಕಡಿಮೆ ಬೆಲೆಗೆ ಆ್ಯಪಲ್​ ಐಫೋನ್​ಗಳು ಸಿಗಲಿದೆ. ಜೊತೆಗೆ ಉತ್ತಮವಾದ ಕೊಡುಗೆಯನ್ನು ನೀಡುತ್ತಿದೆ.

    ಐಫೋನ್ 12, ಐಫೋನ್ 12 ಮಿನಿ, ಮತ್ತು ಯಾವುದೇ ಏರ್‌ಪಾಡ್ಸ್ ಮಾದರಿ ಸೇರಿದಂತೆ ಯಾವುದೇ ವಸ್ತುಗಳ ಸ್ಟಾಕ್ ಪೂರೈಕೆಯ ಕೊರತೆಯ ಸಮಯದಲ್ಲಿ, ಸಾಗಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಆಪಲ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

    Read Also: Elon Musk: ವಾರ ಪೂರ್ತಿ ಕೆಲಸ, ಮನೆ ಖರೀದಿಸಲಾಗದೆ ಆಫೀಸಿನಲ್ಲೇ ವಾಸ… ಟೆಸ್ಲಾ ಸಿಇಒ ಎಲಾನ್​ ಮಸ್ಕ್​ನ ಕಥೆಯಿದು!

    ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್​ ಡೇಸ್​:

    Flipkart Big Billion Days ಸೇಲ್ ದಿನಾಂಕವನ್ನ ಬದಲಾಯಿಸಿಕೊಂಡಿದೆ. ಆ  ಮೂಲಕ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ಗೆ ಪೈಪೋಟಿ ನೀಡಲು ಮುಂದಾಗಿದೆ. ಗ್ರಾಹಕರು ಎದುರು ನೋಡುತ್ತಿದ್ದ ಫ್ಲಿಪ್​ಕಾರ್ಟ್​ ಇ -ಕಾಮರ್ಸ್​ ಮಳಿಗೆಯ ಆಕರ್ಷಕ ಸೇಲ್​ ಅಕ್ಟೋಬರ್​ 7 ರಿಂದ 12ರವರೆಗೆ ನಡೆಸುವ ಪ್ಲಾನ್​ ಹಾಕಿಕೊಂಡಿತ್ತು . 6 ದಿನಗಳ ಕಾಲ ಈ ಸೇಲ್​ ನಡೆಸುವ ಯೋಜನೆಯಿತ್ತು. ಆದರೆ ಅಮೆಜಾನ್​ ತನ್ನ ಗ್ರೇಟ್ ಇಂಡಿಯನ್​ ಫೆಸ್ಟಿವಲ್​ ಸೇಲ್​ ದಿನಾಂಕವನ್ನ ಅಕ್ಟೋಬರ್​  4ರ ಬದಲು 3ರಂದು ನಡೆಸಲು ಮುಂದಾಗಿದೆ. ಇದನ್ನು ಗಮನಿಸಿದ ಪ್ಲಿಪ್​ಕಾರ್ಟ್​ ಕೂಡ ಸೇಲ್​ ದಿನಾಂಕ ಬದಲಾಯಿಸಿಕೊಂಡಿದ್ದು, ಅಕ್ಟೋಬರ್​ 3 ರಿಂದ ಪ್ರಾರಂಭವಾಗಿ 10ರವರೆಗೆ ನಡೆಸಲಿದೆ.

    ಫ್ಲಿಪ್​ಕಾರ್ಟ್​ ತನ್ನ  ವಾರ್ಷಿಕ ಕಾರ್ಯಕ್ರಮವನ್ನು ಹೈಪ್ ಮಾಡುತ್ತಿದೆ. ‌ ಬಿಗ್​ ಬಿಲಿಯನ್​​ ಡೇಸ್​ ಸೇಲ್​ನಲ್ಲಿ ಕೆಲವು ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೆ ಮತ್ತು ಆಕರ್ಷಕ ರಿಯಾಯಿತಿಗೆ ಮಾರಾಟ ಮಾಡಲು ಮುಂದಾಗಿದೆ.  ವಾರ್ಷಿಕ ಮಾರಾಟದಲ್ಲಿ ಫ್ಲಿಪ್‌ಕಾರ್ಟ್ Pixel 4a, Poco X3 Pro, Apple Iphone, Moto Edge 20 Fusion, Asus ROG Phone 3 ಮತ್ತು Infinix Hot 10s ಮೇಲೆ ಆಫರ್‌ಗಳನ್ನು ಬಹಿರಂಗಪಡಿಸಿದೆ.
    Published by:Harshith AS
    First published: