ಇದು ಟೆಕ್ನಾಲಜಿ ಯುಗ (Technology). ಇಲ್ಲಿ ಎಲ್ಲವೂ ಸಾಧ್ಯ. ಕ್ಷಣಮಾತ್ರದಲ್ಲಿ ಬೇಕಾದ ವಿಷಯಗಳನ್ನು ಸ್ಮಾರ್ಟ್ಫೋನ್ (Smartphone) ಮೂಲಕ ನೋಡಬಹುದು. ಅದ್ರಲ್ಲೂ ಧಾರ್ಮಿಕತೆ ಮತ್ತು ತಂತ್ರಜ್ಞಾನಕ್ಕೆ ಬಹಳಷ್ಟು ನಂಟಿದೆ. ಧಾರ್ಮಿಕತೆಯ ಬೆಳವಣಿಗೆಗಾಗಿ ತಂತ್ರಜ್ಞರು ಸಹ ಇತ್ತೀಚೆಗೆ ಹೊಸ ಹೊಸ ಟೆಕ್ನಾಲಜಿಯನ್ನು ತಯಾರಿಸುತ್ತಿರುತ್ತಾರೆ. ದೇಶದಲ್ಲಿ ಹಲವಾರು ದೇವಾಲಯ (Temples), ಪ್ರವಾಸಿ ತಾಣಗಳಿವೆ. ಇವೆಲ್ಲದರ ಬಗ್ಗೆ ಕೆಲವರಿಗೆ ಮಾಹಿತಿ ಇರುವುದಿಲ್ಲ. ಆದರೆ ಈಗ ಒಂದು ಸ್ಮಾರ್ಟ್ಫೋನ್ ಮೂಲಕ ಇವೆಲ್ಲದರ ಮಾಹಿತಿಯನ್ನು ತಿಳಿಯಬಹುದಾಗಿದೆ.ಇದಲ್ಲದೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು ಎಂದವರಿಗೂ ಇಂದು ತಂತ್ರಜ್ಞಾನ ತನ್ನದೇ ಆದ ರೀತಿಯಲ್ಲಿ ಸಹಾಯಕವಾಗಿದೆ.
ಈಗ ದೇಶದ ಯಾವುದೇ ಪ್ರಸಿದ್ಧ ದೇವಾಲಯಕ್ಕೆ ಹೋಗಬೇಕಾದರೆ ಅಲ್ಲಿಯೇ ಹೋಗಿ ದೇವರ ದರ್ಶನದ ರಶೀದಿ ಮಾಡಬೇಕಾಗಿಲ್ಲ. ಬದಲಿಗೆ ನಿಮ್ಮ ಸ್ಮಾರ್ಟ್ಫೋನ್ ಮೂಲಕವೇ ಆ್ಯಪ್ ಡೌನ್ಲೋಡ್ ಮಾಡಿಕೊಂಡು ದೇವರ ದರ್ಶನಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಹಾಗಿದ್ರೆ ದೇಶದ ಯಾವೆಲ್ಲಾ ದೇವಾಲಯಕ್ಕೆ ಆ್ಯಪ್ ಮೂಲಕ ನೋಂದಣಿ ಮಾಡ್ಬಹುದು ಎಂದು ಈ ಲೇಖನದಲ್ಲಿ ತಿಳಿಯಿರಿ.
ಶಿರಡಿ ಸಾಯಿಬಾಬಾ ದೇವಸ್ಥಾನ
ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಜಗತ್ತಿನ ಮೂಲೆ ಮೂಲೆಯಿಂದಲೂ ದೇವರ ದರ್ಶನಕ್ಕಾಗಿ ಜನರು ಬರ್ತಾರೆ. ಇದೇ ಕಾರಣಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಜನರಿಗೆ ಅನುಕೂಲವಾಗು ದೃಷ್ಟಿಯಿಂದ ಆ್ಯಪ್ ಒಂದನ್ನು ರಚಿಸಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ ಕೇವಲ 100 ರೂಪಾಯಿ ವೆಚ್ಚ! ವರ್ಷವಿಡೀ ಡೇಟಾ, ಅನ್ಲಿಮಿಟೆಡ್ ಕರೆ ಸೌಲಭ್ಯ
ಈ ಆ್ಯಪ್ ಬಳಸಿಕೊಂಡು ಭಕ್ತರು ಆರತಿಯ ದರ್ಶನಕ್ಕಾಗಿ ಹಾಗೂ ಅಲ್ಲಿ ವಸತಿಯನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ವಿಶೇಷವಾಗಿ ಆ ಆ್ಯಪ್ ಮೂಲಕ ಭಕ್ತರು ದೇಣಿಗೆಯನ್ನೂ ನೀಡಬಹುದು. ಇನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ Shri Saibaba Sansthan Shirdi ಎಂದು ಸರ್ಚ್ ಮಾಡಿದರೆ, ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ
ಇತ್ತೀಚಿನ ದಿನಗಳಲ್ಲಿ ಅಯ್ಯಪ್ಪ ದೇವರ ದರ್ಶನ ಮಾಡಬೇಕೆಂದರು ಭಕ್ತರು ಆ್ಯಪ್ ಮೂಲಕ ಅಥವಾ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಇನ್ನು ಈ ದೇವಸ್ಥಾನದ ವಿಶೇಷತೆಯೆಂದರೆ ಅತೀ ಹೆಚ್ಚು ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇವಸ್ಥಾನ ಇದೆಂದು ಗುರುತಿಸಿಕೊಂಡಿದೆ.
ದೇವಸ್ಥಾನದ ಈ ಅಪ್ಲಿಕೇಶನ್ ಮೂಲಕ ವಸತಿ ಸೌಲಭ್ಯವನ್ನು ಸಹ ಕಾಯ್ದಿರಿಸಿಟ್ಟುಕೊಳ್ಳಬಹುದು. ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ Sabarimala Sri Ayyappa Temple ಸರ್ಚ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆಯೇ ಮಲಯಾಳಂ, ಇಂಗ್ಲಿಷ್ ಮತ್ತು ತಮಿಳು ಭಾಷೆಗಳ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ.
ವಿಜಯವಾಡದ ಕನಕ ದುರ್ಗಾ ದೇವಸ್ಥಾನ
ದೇಶದ ಜನಪ್ರಿಯ ದೇವಸ್ಥಾನಗಳಲ್ಲಿ ವಿಜಯವಾಡದ ಕನಕ ದುರ್ಗಾ ದೇವಸ್ಥಾನ ಸಹ ಒಂದು.ಈ ದೇವಸ್ಥಾನಕ್ಕೆ ಭಕ್ತರು ಸುಲಭವಾಗಿ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು ದರ್ಶನ ಪಡೆಯಲು ಬರಬಹುದು. ವಿಜಯವಾಡದ ಕನಕ ದುರ್ಗಾ ದೇವಸ್ಥಾನ ರಚಿಸಿದ ಈ ಅಪ್ಲಿಕೇಶನ್ ಮೂಲಕ ಭಕ್ತರು ದರ್ಶನ , ಇನ್ನಿತರೆ ಸೇವೆಗಳು ಮತ್ತು ದೇಣಿಗೆಯನ್ನು ನೀಡಬಹುದು. ಜೊತೆಗೆ ಇದರಲ್ಲಿಯೇ ದೇವಾಲಯಕ್ಕೆ ಸಂಬಂಧಿಸಿದ ಪುಸ್ತಕಗಳು, ಆಧ್ಯಾತ್ಮಿಕ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಭಕ್ತರು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾದರೆ ಗೂಗಲ್ ಪ್ಲೇ ಸ್ಟೋರ್ನಲ್ಲಿ Kanaka Durga Temple Vijayawada ಎಂದು ಸರ್ಚ್ ಮಾಡಬೇಕು.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ
ಕಾಶಿ ವಿಶ್ವನಾಥನನ್ನು ನೋಡಲು ದೇಶದಲ್ಲಿ ಹಲವಾರು ನಗರಗಳಿಂದ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಕರ್ನಾಟಕದಿಂದಲೂ ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುವುದು ಸಾಮಾನ್ಯ ಸಂಗತಿ. ಇನ್ನು ಈ ವಿಶ್ವನಾಥನ ದರ್ಶನ ಮಾಡುವ ಮುನ್ನ ಕಾಶಿ ವಿಶ್ವನಾಥ ದೇವಸ್ಥಾನದ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದೆ. ಈ ಅಪ್ಲಿಕೇಶನ್ ಮೂಲಕ ಭಕ್ತರು ಆರತಿ, ರುದ್ರಾಭಿಷೇಕ, ದರ್ಶನ ಮತ್ತು ಮಹಾದೇವ ಪೂಜೆಯನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ. ವಿಶೇಷವಾಗಿ ದೇವರ ಪೂಜೆಯ ನೇರಪ್ರಸಾರವನ್ನು ಇದರಲ್ಲಿ ನೋಡಬಹುದು. ಇನ್ನು ಈ ದೇವಾಲಯದ ದರ್ಶನ ಪಡೆಯಲು Shri Kashi Vishwanath temple trust ಎಂದು ಸರ್ಚ್ ಮಾಡಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ