• Home
  • »
  • News
  • »
  • tech
  • »
  • Twitter Updates: ಟ್ವಿಟರ್​ನಲ್ಲಿ ಮತ್ತೊಂದು ಸ್ಪೆಷಲ್ ಫೀಚರ್​ ಬಿಡುಗಡೆ! ಏನದು ಎಲಾನ್ ಮಸ್ಕ್ ನಿರ್ಧಾರ?

Twitter Updates: ಟ್ವಿಟರ್​ನಲ್ಲಿ ಮತ್ತೊಂದು ಸ್ಪೆಷಲ್ ಫೀಚರ್​ ಬಿಡುಗಡೆ! ಏನದು ಎಲಾನ್ ಮಸ್ಕ್ ನಿರ್ಧಾರ?

ಟ್ವಿಟರ್ ಎಲಾನ್​ ಮಸ್ಕ್​

ಟ್ವಿಟರ್ ಎಲಾನ್​ ಮಸ್ಕ್​

ಇದೀಗ ಟ್ವಿಟರ್ ಸಾಕಷ್ಟು ಬದಲಾವಣೆ ಮಾಡುತ್ತಾ ಇದೀಗ ಮತ್ತೊಂದು ಫೀಚರ್​ ಅನ್ನು ಬಿಡುಗಡೆ ಮಾಡಿದೆ. ಟ್ವಿಟರ್ ಎಂಬುದು ಒಂದು ಮೈಕ್ರೋ ಬ್ಲಾಗಿಂಗ್​ ಅಪ್ಲಿಕೇಶನ್ ಆಗಿದ್ದು ಇದರಲ್ಲಿ ಇದುವರೆಗೆ ಅಕ್ಷರದ ಮಿತಿ 280 ಇತ್ತು. ಆದರೆ 4 ಸಾವಿರದವರೆಗೆ ಇದನ್ನು ಈಗ ಹೆಚ್ಚಳ ಮಾಡಿದ್ದಾರೆ.

  • Share this:

    ವಿಶ್ವದ ಬಿಲಿಯನೇರ್​ಗಳಲ್ಲಿ ಒಬ್ಬರಾದ ಎಲಾನ್​ ಮಸ್ಕ್ (Elon Musk) ಅವರ ಯಾವಾಗ ಟ್ವಿಟರ್ (Twitter) ಅನ್ನು ಖರೀದಿ ಮಾಡಿದ್ದಾರೋ ಅವತ್ತಿಂದ ಟ್ವಿಟರ್​ ಅಪ್ಲಿಕೇಶನ್​ನಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಲೇ ಇದೆ. ಇದಕ್ಕೆ ಕೆಲವೊಂದಿಷ್ಟು ಕಾರಣಗಳೂ ಇದ್ದುಅದಕ್ಕಾಗಿಯೇ ಎಲಾನ್ ಮಸ್ಕ್ ಅವರು ಈ ಟ್ವಿಟರ್​ ಅನ್ನು ಬದಲಾವಣೆ ಮಾಡುವ ಹಂತದಲ್ಲಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಟ್ವಿಟರ್ ಅಪ್ಲಿಕೇಶನ್ ಬಹಳಷ್ಟು ಚರ್ಚೆಯಲ್ಲಿತ್ತು. ಏಕೆಂದರೆ ಟ್ವಿಟರ್​ನ ಬ್ಲೂಟಿಕ್ (twitter Bluetick)​ ಫೀಚರ್ ಆಗಿರಬಹುದು, ಟ್ವಿಟರ್​ನ ಉದ್ಯೋಗಿಗಳ ಲೇ ಆಫ್​ ಮಾಡುವುದಾಗಿರಬಹುದು ಈ ಎಲ್ಲಾ ಕಾರಣಗಳಿಂದ ಕೆಲವೊಮ್ಮೆ ಟ್ವಿಟರ್ ಅನ್ನು ಟೀಕೆ ಮಾಡಲು ಆರಂಭಿಸಿದರು. ಇದೀಗ ಟ್ವಿಟರ್​ನಲ್ಲಿ ಮತ್ತೊಂದು ಅಪ್ಡೇಟ್ಸ್ ಬರ್ತಿದೆ.


    ಇದೀಗ ಟ್ವಿಟರ್ ಸಾಕಷ್ಟು ಬದಲಾವಣೆ ಮಾಡುತ್ತಾ ಇದೀಗ ಮತ್ತೊಂದು ಫೀಚರ್​ ಅನ್ನು ಬಿಡುಗಡೆ ಮಾಡಿದೆ. ಟ್ವಿಟರ್ ಎಂಬುದು ಒಂದು ಮೈಕ್ರೋ ಬ್ಲಾಗಿಂಗ್​ ಅಪ್ಲಿಕೇಶನ್ ಆಗಿದ್ದು ಇದರಲ್ಲಿ ಇದುವರೆಗೆ ಅಕ್ಷರದ ಮಿತಿ 280 ಇತ್ತು. ಆದರೆ 4 ಸಾವಿರದವರೆಗೆ ಇದನ್ನು ಈಗ ಹೆಚ್ಚಳ ಮಾಡಿದ್ದಾರೆ.


    ಆರಂಭದಲ್ಲಿ ಅಕ್ಷರದ ಮಿತಿ ಕೇವಲ 140


    ಟ್ವಿಟರ್ ಅನ್ನು ಮೊದಲಬಾರಿ ಪರಿಚಯ ಮಾಡುವಾಗ 140 ಅಕ್ಷರಗಳ ಮಿತಿಯೊಂದಿಗೆ ಪ್ರಾರಂಭಿಸಲಾಯಿತು. ಕೆಲವು ವರ್ಷಗಳ ಹಿಂದೆ, ಈ ಮಿತಿಯನ್ನು 280 ಅಕ್ಷರಗಳಿಗೆ ಹೆಚ್ಚಿಸಲಾಯಿತು. ಇತ್ತೀಚೆಗೆ, ಈ ಮಿತಿಯನ್ನು 4000 ಅಕ್ಷರಗಳಿಗೆ ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬ ವರದಿಯಾಗಿತ್ತು. ಒಂದು ವೇಳೆ ಈ ಬದಲಾವಣೆಗಳು ಜಾರಿಗೆ ಬಂದರೆ, ದೊಡ್ಡಮಟ್ಟದಲ್ಲಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಲು ಸಹ ಸಾಧ್ಯವಾಗುತ್ತದೆ.


    ಇದನ್ನೂ ಓದಿ: ಈ ಸಿಮ್​ಗೆ ರೀಚಾರ್ಜ್ ಮಾಡಿದ್ರೆ​ ನಿಮಗೆ 50ಜಿಬಿ ಡೇಟಾ ಫ್ರೀ ಸಿಗುತ್ತೆ! ಏನಿದು ಹೊಸ ಆಫರ್​​?


    ಈ ಬಗ್ಗೆ ಎಲಾನ್​ ಮಸ್ಕ್​ ಅವರಿಗೆ ಟ್ವೀಟ್​


    ಟ್ವಿಟರ್​ನಲ್ಲಿ 280 ಅಕ್ಷರದ ಮಿತಿಯಿಂದ 4 ಸಾವಿರದ ಅಕ್ಷರದ ಮಿತಿಯವರೆಗೆ ಹೆಚ್ಚಿಸಲಾಗುತ್ತದೆ ಎಂದು ಎಲಾನ್ ಮಸ್ಕ್ ಅವರು ದೃಢಪಡಿಸಿದ್ದರು. ಇದಾದ ಬಳಿಕ ಬಳಕೆದಾರರು ಇದನ್ನು ಗಮನಿಸಿ ಇದರ ಬಗ್ಗೆ ಎಲಾನ್ ಮಸ್ಕ್​ ಅವರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದರು ಅದಕ್ಕೆಲ್ಲಾ ಎಲಾನ್ ಮಸ್ಕ್ ಅವರು ಹೌದು ಎಂಬ ಉತ್ತರವನ್ನೂ ನೀಡಿದ್ದಾರೆ.


    ಎಲಾನ್​ ಮಸ್ಕ್​​ ಟ್ವಿಟರ್


    ಬಳಕೆದಾರರ ಪ್ರತಿಕ್ರಿಯೆ


    ಹಲವಾರು ಟ್ವಿಟ್ಟರ್ ಬಳಕೆದಾರರು ಎಲಾನ್​ ಮಸ್ಕ್ ಅವರ ಈ ಟ್ವೀಟ್​ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ. ಟ್ವಿಟರ್​ನ ಈ ನಿರ್ಧಾರ ದೊಡ್ಡ ತಪ್ಪು. ಟ್ವಿಟರ್‌ನ ಮುಖ್ಯ ಉದ್ದೇಶವೆಂದರೆ ವೇಗವಾಗಿ ಜನರಿಗೆ ಸುದ್ದಿ ನೀಡುವುದು ಮತ್ತು ಟ್ವಿಟರ್ ಅಕ್ಷರ ಮಿತಿಯನ್ನು ಹೆಚ್ಚಿಸಿದರೆ ಟ್ವಿಟರ್​ನ ನಿಜವಾದ ಉದ್ದೇಶವನ್ನು ಕಳೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಮತ್ತೊಬ್ಬರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದು ಏನೆಂದರೆ 4000 ಅಕ್ಷರಗಳಲ್ಲಿ ಬರೆದರೆ ಅದು ಟ್ವೀಟ್ ಆಗುವುದಿಲ್ಲ ಬದಲಿಗೆ ಲೇಖನವಾಗಿರುತ್ತದೆ ಎಂದು ಹೇಳಿದರು.


    Twitter ನಲ್ಲಿ ದೊಡ್ಡ ಬದಲಾವಣೆಗಳು


    ಅಕ್ಷರ ಮಿತಿ ಹೆಚ್ಚಳದಿಂದಾಗಿ ಟ್ವಿಟರ್ ಅನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಂದು ಪರಿಗಣಿಸಬಹುದೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. 4000 ಅಕ್ಷರಗಳ ಮಿತಿಯು ಬಳಕೆದಾರರಿಗೆ ಪೋಸ್ಟ್‌ಗಳನ್ನು ಟ್ವೀಟ್ ಮಾಡಲು ತುಂಬಾ ಉದ್ದವಾಗಿರುತ್ತದೆ ಎಂದು ಹಲವಾರು ಭಾವಿಸುತ್ತಾರೆ, ಇದು ಲಿಂಕ್ಡ್‌ಇನ್‌ನಂತೆ ಕಾಣುತ್ತದೆ. ಟ್ವಿಟರ್ ಪ್ಲಾಟ್‌ಫಾರ್ಮ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಬೇಕು ಎಂದು ಎಲಾನ್ ಮಸ್ಕ್ ಏಕೆ ಯೋಚಿಸುತ್ತಾರೆ? ಅನೇಕ ಬಳಕೆದಾರರು ಅರ್ಥವಾಗುತ್ತಿಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.


    ಬ್ಲೂ ಟಿಕ್​ ಚಂದಾದಾರಿಕೆ ಕೂಡ ಈಗ ಲಭ್ಯವಿದೆ


    ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಕಳೆದ ಸೋಮವಾರದಿಂದ ಪ್ರಾರಂಭವಾಗಿದೆ ಆ್ಯಪಲ್​ ಕಂಪನಿಯ ಬಳಕೆದಾರರು ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆಗಾಗಿ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಅವರ ಪ್ರೊಫೈಲ್‌ನಲ್ಲಿ ಬ್ಲೂ ಟಿಕ್ ಕಾಣಿಸುತ್ತದೆ. ಜೊತೆಗೆ 1080p ರೆಸಲ್ಯೂಶನ್‌ನೊಂದಿಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ವೆಬ್ ವರ್ಷನ್​ನ ಬೆಲೆ $8 ಆಗಿದ್ದರೆ ಭಾರತದಲ್ಲಿ ಅಂದಾಜು ರೂ. 640 ಆಗಿದೆ, ಐಫೋನ್ ಬಳಕೆದಾರರು $11 ಭಾರತದಲ್ಲಿ ಸುಮಾರು ರೂ. 880 ಪಾವತಿಸಬೇಕಾಗುತ್ತದೆ ಎಂದು ಟ್ವಿಟರ್ ಹೇಳಿದೆ.

    Published by:Prajwal B
    First published: