Solar Storm: ಭೂಮಿಗೆ ಅಪ್ಪಳಿಸಲಿದೆ ಇನ್ನೊಂದು ಸೌರ ಬಿರುಗಾಳಿ! ನಾಸಾ ಈ ಬಗ್ಗೆ ನೀಡಿರುವ ಮಾಹಿತಿ ಏನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಕೆಲ ದಿನಗಳ ಹಿಂದೆ ಆಶ್ರಯ ತಾಣವಾದ ಭೂಮಿಗೆ ಸೌರ ಬಿರುಗಾಳಿ ಅಪ್ಪಳಿಸಿತ್ತು. ಆದರೆ ಇದೀಗ ಮತ್ತೊಂದು ಸೌರ ಬಿರುಗಾಳಿ ಭೂಮಿಗೆ ಅಪ್ಪಳಿಸಲಿದೆ ಎಂದು ನಾಸಾ ಮುನ್ಸೂಚನೆ ನೀಡಿದೆ.

  • Share this:

ಈಗಷ್ಟೇ ನಾವು ಜೀವಿಸುತ್ತಿರುವ ಅಥವಾ ಸಕಲ ಜೀವಿಗಳ ಏಕೈಕ ಆಶ್ರಯ ತಾಣವಾದ ಭೂಮಿಗೆ (Earth) ಸೌರ ಬಿರುಗಾಳಿ (Solar Storm) ಅಪ್ಪಳಿಸಿದೆ. ಈಗಾಗಲೇ ಇದರ ಪ್ರಕೋಪದಿಂದ ಹಲವೆಡೆ ತೀವ್ರ ಶಾಖದ ಪರಿಣಾಮಗಳನ್ನು ಎದುರಿಸಿ ಜನರು ಬಸವಳಿದು ಹೋಗಿದ್ದಾರೆ. ಇನ್ನೇನು ಸೌರ ಜ್ವಾಲೆಯ (Solar Flare) ಆಕ್ರಮಣ ಆಗಿ ಹೋಯಿತು ಎಂಬ ನಿಟ್ಟುಸಿರು ಬಿಡುತ್ತಿರುವಂತೆಯೇ ಮತ್ತೊಂದು ಇದೇ ರೀತಿಯ ಸಂಕಷ್ಟ ಇದೀಗ ಭೂಮಿಗೆ ಎದುರಾಗಿದೆ. ಹೌದು, ಸದ್ಯದ ವಿದ್ಯಾಮಾನದ ಪ್ರಕಾರ, ಕೊರೋನಲ್ ಮಾಸ್ ಇಜೆಕ್ಷನ್ ಪ್ರಕ್ರಿಯೆಯ ಅನ್ವಯ ಮತ್ತೊಂದು ಸೌರ ಮೋಡವು ಭೂಮಿಗೆ ಅಪ್ಪಳಿಸಲಿದ್ದು, ಇದು ಭೂಮಿಯಲ್ಲಿ ಭಾರೀ ಸಮಸ್ಯೆಯನ್ನುಂಟು ಮಾಡಲಿದೆ.


ಇದು ಸಹ ಒಂದು ಪ್ರಖರ ಸೌರ ಮಾರುತವಾಗಿದ್ದು ಭೂಮಿಯ ಮೇಲೆ ಸಾಕಷ್ಟು ಅಡೆ-ತಡೆ ಉಂಟು ಮಾಡಲಿದೆ. ಇದರ ಪರಿಣಾಮದಿಂದಾಗಿ ರೇಡಿಯೊ ಬ್ಲ್ಯಾಕೌಟ್, ಜಿಪಿಎಸ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವಿಕೆ ಇತ್ಯಾದಿ ಸಂಭವಿಸಲಿವೆ ಎನ್ನಲಾಗಿದೆ.


ಈಗಾಗಲೇ ವಿಜ್ಞಾನಿಗಳು ಈ ಹಿಂದೆ ಭೂಮಿಗೆ ಅಪ್ಪಳಿಸಿದ್ದ ಜಿ-4 ಶ್ರೇಣಿಯ ಭೂಕಾಂತೀಯ ಅಪ್ಪಳಿಕೆಯ ಪರಿಣಾಮಗಳನ್ನು ಇನ್ನು ಅಧ್ಯಯನ ಮಾಡುತ್ತಿರುವಾಗಲೇ ಈಗ ಇದೇ ರೀತಿಯ ಮತ್ತೊಂದು ಸೌರ ಬಿರುಗಾಳಿಯ ಅಪ್ಪಳಿಸುವಿಕೆ ವಿಜ್ಞಾನಿಗಳು ವಿಚಲಿತರಾಗುವಂತೆ ಮಾಡಿದೆ.


ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗಾಗಿ ಜಿಯೋದಿಂದ ಹೊಸ ರೀಚಾರ್ಜ್ ಪ್ಲ್ಯಾನ್​ ಬಿಡುಗಡೆ


SpaceWeather.com ಎಂಬ ಜಾಗತಿಕ ಹವಾಮಾನ ಸಂಬಂಧಿತ ತಾಣವೊಂದು ಈ ಬಗ್ಗೆ ವರದಿ ಮಾಡಿದೆ. ತನ್ನ ವರದಿಯಲ್ಲಿ ಅದು, ಈ ಹಿಂದೆ ಬಂದಿದ್ದಂತಹ ಸೌರಜ್ವಾಲೆಯಂತೆ ಮತ್ತೊಂದು ಸೌರ ಮಾರುತವು ಭೂಮಿಗೆ ಅಪ್ಪಳಿಸುತ್ತಿದೆ. ಆದರೆ ಇದರ ಪರಿಣಾಮ ಹಿಂದಿನ ಸೌರ ಬಿರುಗಾಳಿಯಂತೆ ಪ್ರಖರವಾಗಿರುವುದಿಲ್ಲ.


ಏಪ್ರಿಲ್ 24 ರಂದು ಸೂರ್ಯನ ದಕ್ಷಿಣಾರ್ಧ ಭಾಗದಿಂದ ಹೊರಹೊಮ್ಮಿದ ಸೌರಜ್ವಾಲೆಯಿಂದ ಹೊರಬಂದಿರುವ ಈ ಭಾಗವು ಭೂಮಿಯ ದಕ್ಷಿಣ ಭಾಗಕ್ಕೆ ಸಾಗಲಿದೆ ಎಂದು ಬರೆದುಕೊಂಡಿದೆ. ಇದು ಸ್ವಲ್ಪ ನಿರಾಳತೆಯ ಭಾವ ಮೂಡಿಸಿದ್ದರೂ ವರದಿಯಲ್ಲಿ ಇನ್ನೂ ಭವಿಷ್ಯದಲ್ಲಿ ಜಿ-1 ಹಾಗೂ ಜಿ-2 ಶ್ರೇಣಿಗಳ ಸೌರ ಬಿರುಗಾಳಿಗಳು ಭೂಮಿಗೆ ಅಪ್ಪಳಿಸಲಿವೆ ಎಂದು ಉಲ್ಲೇಖಿಸಿದ್ದು ಅದು ಸಾಕಷ್ಟು ಕಳವಳಕಾರಿಯಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.


ಭೂಮಿಗೆ ಇನ್ನೊಂದು ಸೌರಮಾರುತ ಅಪ್ಪಳಿಸಲಿದೆ!


ಈಗಾಗಲೇ ಕಡಿಮೆ ತೀವ್ರತೆಯ ಸೌರಮಾರುತವು ಭವಿಷ್ಯದಲ್ಲಿ ಭೂಮಿಗೆ ಅಪ್ಪಳಿಸಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ. ಇದು ಕಡಿಮೆ ತೀವ್ರತೆ ಹೊಂದಿದೆ ಎಂಬ ಸಮಾಧಾನವಿದ್ದರೂ ಇದು ಭೂಮಿಗೆ ಅಪ್ಪಳಿಸುವ ಸಂದರ್ಭದಲ್ಲಿ ಬೇರೆ ಯಾವುದಾದರೂ ವಿದ್ಯಮಾನಗಳುಂಟಾಗಿ ಅದರಿಂದ ಇದರ ತೀವ್ರ ಪರಿಣಾಮ ಎದುರಿಸಬೇಕಾದ ಸಂದರ್ಭ ಬರಬಹುದು. ಉದಾಹರಣೆಗೆ ಈ ಮಾರುತಕ್ಕೆ ಸೌರಗಾಳಿಯು ಸಹಯೋಗ ನೀಡಿದರೆ ಅಥವಾ ಭೂಮಿಯ ಮೇಲಿರುವ ಕಾಂತೀಯ ಕ್ಷೇತ್ರಗಳಲ್ಲಿನ ಬಿರುಕುಗಳು ಇದಕ್ಕೆ ಕಂಡುಬಂದರೆ ಪರಿಣಾಮ ಬೇರೆಯದ್ದೇ ಆಗಬಹುದು.


ಸಾಂಕೇತಿಕ ಚಿತ್ರ


ಇದ್ಯಾವುದೇ ಆಗದಿದ್ದರೂ ಸಹ ಈ ಸೌರಮಾರುತ ಏನೂ ಹಾನಿ ಮಾಡುವುದಿಲ್ಲ ಎನ್ನಲಾಗದು. ಇದು ಶಾರ್ಟ್ ವೇವ್ ತರಂಗಾಂತರಗಳಿಗೆ ಅಡಚಣೆ ಪಡಿಸಿ ರೇಡಿಯೋ ಕಂಟ್ರೋಲರ್ ಗಳು ಬ್ಲ್ಯಾಕ್ ಔಟ್ ಆಗುವಂತೆ ಮಾಡಬಹುದು.


ಜಿಪಿಎಸ್ ವ್ಯವಸ್ಥೆಗಳಿಗೆ ಅಡಚಣೆ, ಮೋಬೈಲ್ ಸ್ಥಾವರಗಳಿಗೆ ಅಡಚಣೆ, ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್ಲಿಂಕ್ ಗಳಂತಹ ಸಣ್ಣ ಉಪಗ್ರಹಗಳಿಗೆ ಅಡಚಣೆ ಉಂಟು ಮಾಡಬಹುದು. ಒಟ್ಟಿನಲ್ಲಿ ಇದು ಭೂಮಿಗೆ ಹತ್ತಿರ ಹತ್ತಿರ ಬಂದಷ್ಟು ಇದರ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಕಲೆ ಹಾಕಬಹುದೆನ್ನಲಾಗಿದೆ.


ಏಪ್ರಿಲ್ ತಿಂಗಳು ಬಹುಶಃ ಉಪದ್ರವಕಾರಕವಾಗಿದ್ದು ಮತ್ತೊಂದು ಸೌರಗಾಳಿಗೆ ಸಾಕ್ಷಿಯಾಗಲಿದೆ. ಅಷ್ಟಕ್ಕೂ ಈ ಬಾರಿ ಜನವರಿ ಹಾಗೂ ಫೆಬ್ರವರಿ ಮಾಸಗಳು ಸಹ ಅತಿಯಾದ ಶಾಖ ದಾಖಲಿಸಿದ್ದನ್ನು ಗಮನಿಸಬಹುದು.


ಸೂರ್ಯನನ್ನು ಮಾನಿಟರ್ ಮಾಡುತ್ತಿರುವ ನಾಸಾ


ನಾಸಾದ ಸೊಹೊ (ಸೋಲಾರ್ ಆಂಡ್ ಹೆಲಿಯೋಸ್ಫೆರಿಕ್ ಆಬ್ಸರ್ವೇಟರಿ) ಒಂದು ಉಪಗ್ರಹವಾಗಿದ್ದು ಇದು ನಿರಂತರವಾಗಿ ಸೂರ್ಯನ ಗತಿ ವಿಧಿಗಳ ಮೇಲೆ ನಿಗಾ ಇರಿಸಿರುತ್ತದೆ. ಇದನ್ನು ಡಿಸೆಂಬರ್ 2, 1995 ರಂದು ಉಡಾವಣೆ ಮಾಡಲಾಗಿತ್ತು. ಸೂರ್ಯನ ಅಧ್ಯಯನಕ್ಕೆ ಸಂಬಂಧಿಸಿದಂತೆ ಉಡಾವಣೆ ಮಾಡಲಾದ ಯೋಜನೆ ಇದಾಗಿದ್ದು ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜನ್ಸಿ ಇವೆರಡರ ಜಂಟಿ ಕಾರ್ಯಾಚರಣೆಯಾಗಿದೆ.
ಈ ಉಪಗ್ರಹವು ಹನ್ನೆರಡು ಸುಧಾರಿತ ಉಪಕರಣಗಳಾದ ಎಕ್ಸ್ ಟ್ರೀಮ್ ಅಲ್ಟ್ರಾ ವಾಯ್ಲೆಟ್ ಇಮೇಜಿಂಗ್ ಟಲಿಸ್ಕೋಪ್, ಮಿಶೆಲ್ಸನ್ ಡಪ್ಲರ್ ಇಮೇಜರ್, ಲಾಸ್ಕೊ (ಲಾರ್ಜ್ ಆಂಗಲ್ ಆಂಡ್ ಸ್ಪೆಕ್ಟ್ರೋಮೆಟ್ರಿಕ್ ಕೊರೋನಾಗ್ರಾಫ್) ಇತ್ಯಾದಿಗಳನ್ನು ಹೊಂದಿದ್ದು ಸೂರ್ಯನ ಮೇಲ್ಮೈ ಗತಿವಿಧಿ, ಚಟುವಟಿಕೆ ಅವುಗಳಿಂದ ಸೌರ ಮಂಡಲದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ನೆರವು ನೀಡುತ್ತಿವೆ.

top videos
    First published: