ರಿಲಯನ್ಸ್ ಜಿಯೋ (Reliance Jio) ತನ್ನ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸುವುದರೊಂದಿಗೆ ದೇಶದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ. ಇತ್ತೀಚೆಗೆ, ಆಂಧ್ರಪ್ರದೇಶದ (Andhra Pradesh) ಎಲೂರಿನಲ್ಲಿ ಶನಿವಾರ ಜಿಯೋ ತನ್ನ 5ಜಿ ಸೇವೆಗಳನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ರಿಲಯನ್ಸ್ ಜಿಯೋ ಈಗಾಗಲೇ ತನ್ನ ಟ್ರೂ 5ಜಿ ಸೇವೆಯನ್ನು ತಿರುಮಲ, ವಿಶಾಖಪಟ್ಟಣಂ, ವಿಜಯವಾಡ, ಗುಂಟೂರು, ತಿರುಪತಿ ಮತ್ತು ನೆಲ್ಲೂರಿನಲ್ಲಿ ಆರಂಭಿಸಿದೆ. ಜಿಯೋ ಈಗಾಗಲೇ ತನ್ನ ಈ ಸೇವೆಗಾಗಿ ರೂ. 26,000 ಕೋಟಿ ಹೂಡಿಕೆ ಮಾಡಲಾಗಿದೆ. ಇದೀಗ ಹೆಚ್ಚುವರಿಯಾಗಿ ಇನ್ನೂ ರೂ. 6,500 ಕೋಟಿ ಹೂಡಿಕೆ ಮಾಡಿದೆ. ಇದು ಆಂಧ್ರಪ್ರದೇಶ ರಾಜ್ಯದ ಅಭಿವೃದ್ಧಿಗೆ ಜಿಯೋ ನೀಡುತ್ತಿರುವ ಅಪಾರ ಕೊಡುಗೆ ಎಂದು ಎಂದು ಕಂಪನಿಯ ಮೂಲಗಳು ಬಹಿರಂಗಪಡಿಸಿವೆ. ಈ ವರ್ಷದ ಅಂತ್ಯದ ವೇಳೆಗೆ, ಆಂಧ್ರಪ್ರದೇಶದ ಪ್ರತಿ ಪಟ್ಟಣ, ತಾಲ್ಲೂಕು, ಮಂಡಲ ಮತ್ತು ಹಳ್ಳಿಗಳಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆಗಳು ಲಭ್ಯವಿರುತ್ತವೆ.
ರಿಲಯನ್ಸ್ ಜಿಯೋ ದೇಶದ ಮೂಲೆ ಮೂಲೆಗಳಲ್ಲಿ ಜಿಯೋ ಟ್ರೂ 5ಜಿ ಸೇವೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಇದೀಗ ಆಂಧ್ರ ಪ್ರದೇಶದ ಎಲೂರಿನಲ್ಲಿ ಶನಿವಾರ ಜಿಯೋ ತನ್ನ 5ಜಿ ಸೇವೆಗಳನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
ಏನೆಲ್ಲಾ ;ಲಭ್ಯವಾಗುತ್ತದೆ?
ಜಿಯೋ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಆಂಧ್ರಪ್ರದೇಶವು ಅತ್ಯುತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲದೆ ಇ-ಆಡಳಿತವನ್ನು ಸಹ ಪಡೆಯುತ್ತದೆ. ಜೊತೆಗೆ ಶಿಕ್ಷಣ, ಆರೋಗ್ಯ, ಐಟಿ ಮತ್ತು ಎಸ್ಎಂಇ ವ್ಯಾಪಾರ ಕ್ಷೇತ್ರಗಳ ಬೆಳವಣಿಗೆಯ ಅವಕಾಶಗಳಿಗೆ ಈ ಸೇವೆ ಬಹಳಷ್ಟು ಸಹಕಾರಿಯಾಗಲಿದೆ. ಇನ್ನು ಜಿಯೋ 5ಜಿ ನೆಟ್ವರ್ಕ್ ಅನ್ನು ಯಾವುದೇ ಸಂದರ್ಭದಲ್ಲಿ ಯಾರೂ ಕೂಡಾ ಬಳಕೆ ಮಾಡುವ ಅವಕಾಶವನ್ನು ಇದು ನೀಡಲಿದೆ.
ಇದನ್ನೂ ಓದಿ: ಇನ್ಫಿನಿಕ್ಸ್ ಹಾಟ್ 20 ಸ್ಮಾರ್ಟ್ಫೋನ್ನ ಫಸ್ಟ್ಸೇಲ್ ಆರಂಭ! ಫ್ಲಿಪ್ಕಾರ್ಟ್ನಲ್ಲಿ ಲಭ್ಯ
5ಜಿ ಕುರಿತು ಜಿಯೋ ಸಿಇಓ ಮಾತು
ಈ ಸಂದರ್ಭದಲ್ಲಿ ಜಿಯೋ ಆಂಧ್ರಪ್ರದೇಶd ಸಿಇಒ ಮಂದಪಲ್ಲಿ ಮಹೇಶ್ ಕುಮಾರ್ ಮಾತನಾಡಿ, “ಆಂಧ್ರಪ್ರದೇಶದಲ್ಲಿ ಜಿಯೋ ಟ್ರೂ 5ಜಿ ವಿಸ್ತರಿಸುವ ಆಲೋಚನೆ ನಮಗೆ ಸಂತೋಷವಾಗಿದೆ. ಜಿಯೋ ಟ್ರೂ 5ಜಿ ನೆಟ್ವರ್ಕ್ ಕೆಲವೇ ಸಮಯದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಿದೆ. ಪ್ರತಿಯೊಬ್ಬ ಭಾರತೀಯನಿಗೆ ಟ್ರೂ 5ಜಿ ಪ್ರಯೋಜನಗಳನ್ನು ಒದಗಿಸಲು ಜಿಯೋ ಎಂಜಿನಿಯರ್ಗಳು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಲೇ ಇದ್ದಾರೆ.
ಆದ್ದರಿಂದ, ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನು ಈ ಮಹತ್ವದ ಬದಲಾವಣೆಯ ಶಕ್ತಿಯನ್ನು ಮತ್ತು ಅದರ ಅಪಾರ ಪ್ರಯೋಜನಗಳನ್ನು ಅನುಭವಿಸಬಹುದು. ಆಂಧ್ರಪ್ರದೇಶವನ್ನು ಡಿಜಿಟಲೀಕರಣಗೊಳಿಸಲು ಸಹಾಯ ಮಾಡಿದ ರಾಜ್ಯ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದರು.
ದೇಶದ 7 ರಾಜ್ಯದ 15 ನಗರಗಳಲ್ಲಿ ಆರಂಭ
ರಿಲಯನ್ಸ್ ಜಿಯೋ ಇದೀಗ ಎಲೂರು ಹಾಗೂ ದೇಶದಾದ್ಯಂತ 7 ರಾಜ್ಯಗಳ 15 ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಿದೆ. ಛತ್ತೀಸ್ಗಢ (ರಾಯಪುರ, ದುರ್ಗ್, ಭಿಲಾಯಿ), ಬಿಹಾರ (ಪಾಟ್ನಾ, ಮುಜಾಫರ್ಪುರ), ಜಾರ್ಖಂಡ್ (ರಾಂಚಿ, ಜಮ್ಶೆಡ್ಪುರ), ಕರ್ನಾಟಕದ (ಬಿಜಾಪುರ, ಉಡುಪಿ, ಕಲಬುರಗಿ, ಬಳ್ಳಾರಿ), ಒಡಿಶಾ (ರೂರ್ಕೆಲಾ, ಬ್ರಹ್ಮಪುರ), ಕೇರಳದ (ಕೊಲ್ಲಮ್), ಮಹಾರಾಷ್ಟ್ರದ ಅಮರಾವತಿ ನಗರಗಳಲ್ಲಿ ಪ್ರಾರಂಭಿಸಿದೆ.
ದೇಶದ ಡಿಜಿಟಲೀಕರಣದತ್ತ ಜಿಯೋನ ಚಿತ್ತ
1.3 ಬಿಲಿಯನ್ (130 ಕೋಟಿ) ಭಾರತೀಯರಿಗೆ ಡಿಜಿಟಲ್ ಇಂಡಿಯಾದ ದೃಷ್ಟಿಯನ್ನು ಸಕ್ರಿಯಗೊಳಿಸಲು ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಜಾಗತಿಕ ನಾಯಕತ್ವದತ್ತ ಭಾರತವನ್ನು ಮುನ್ನಡೆಸಲು ಜಿಯೋ ಭಾರತೀಯ ಡಿಜಿಟಲ್ ಸೇವಾ ವಲಯದಲ್ಲಿ ಅಪಾರ ಬದಲಾವಣೆಗಳನ್ನು ಮಾಡುತ್ತಲೇ ಇದೆ. ಇದು ನೆಟ್ವರ್ಕ್, ಅಪ್ಲಿಕೇಶನ್ಗಳು, ಸೇವಾ ಅನುಭವ, ಎಲ್ಲರಿಗೂ ಜಿಯೋ ಡಿಜಿಟಲ್ ಜೀವನವನ್ನು ನಡೆಸಲು ಕೈಗೆಟುಕುವ ದರಗಳ ವ್ಯವಸ್ಥೆಯನ್ನು ರಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ