ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಲ್ಲಿ (Mobile Application) ವಾಟ್ಸಾಪ್ ಕೂಡ ಒಂದು. ಈ ಅಪ್ಲಿಕೇಶನ್ ಇತ್ತೀಚೆಗೆ ತನ್ನ ಬಳಕೆದಾರರಿಗಾಗಿ ಸಾಕಷ್ಟು ಅಪ್ಡೇಟ್ಗಳನ್ನು ನೀಡುತ್ತಲೇ ಬರುತ್ತಿದೆ. 2020 ರ ವರ್ಷವನ್ನು ಒಮ್ಮೆ ಮೆಲುಕು ಹಾಕುವುದಾದರೆ, ಆ ವರ್ಷದಲ್ಲಿ ವಾಟ್ಸಾಪ್ (WhatsApp) ತನ್ನ ಬಳಕೆದಾರರರ ಅನುಭವವನ್ನು ಹೆಚ್ಚಿಸುವ ಕಾರಣಕ್ಕಾಗಿ ಹೊಸ ಹೊಸ ಫೀಚರ್ಸ್ಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿ 2023 ರಲ್ಲಿ ಸಾಕಷ್ಟು ಫೀಚರ್ಸ್ಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆಯನ್ನೂ ನೀಡಿತ್ತು. ಸ್ವಲ್ಪ ದಿನಗಳ ಹಿಂದೆ ಮೆಸೇಜ್ ಎಡಿಟ್ ಮಾಡುವ ಫೀಚರ್ ಅನ್ನು, ವಿಡಿಯೋ ಕಾಲ್ ಫೀಚರ್ಸ್ (Video Call Features) ಅನ್ನು ಬಿಡುಗಡೆ ಮಾಡಿತ್ತು. ಈ ಮಧ್ಯೆ ವಾಟ್ಸಾಪ್ ಸದ್ಯ ಸ್ಟೇಟಸ್ ವಿಭಾಗದಲ್ಲಿ ಮಹತ್ತರವಾದ ಫೀಚರ್ ಒಂದನ್ನು ಪರಿಚಯಿಸಿದೆ.
ವಾಟ್ಸಾಪ್ ಬಿಡುಗಡೆ ಮಾಡಿರುವ ಸ್ಟೇಟಸ್ ಅಪ್ಡೇಟ್ ಪ್ರಕಾರ, ಇನ್ಮುಂದೆ ವಾಟ್ಸಾಪ್ನಲ್ಲಿ ವಾಯ್ಸ್ ಮೆಸೇಜ್ ಅನ್ನು ಸಹ ಶೇರ್ ಮಾಡಬಹುದು ಎಂದು ತಿಳಿಸಿದೆ. ಇನ್ನು ವಾಟ್ಸಾಪ್ನ ಈ ಹೊಸ ಫೀಚರ್ ಯಾರಿಗೆಲ್ಲಾ ಲಭ್ಯವಾಗಲಿವೆ ಎಂಬುದನ್ನು ತಿಳಿಬೇಕಾದರೆ ಈ ಲೇಖನವನ್ನು ಓದಿ.
ಏನಿದು ಹೊಸ ಫೀಚರ್?
ಮೆಟಾ ಮಾಲೀಕತ್ವದ ಜನಪ್ರಿ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ಹೊಸ ಅಪ್ಡೇಟ್ಸ್ ಅನ್ನುಘೋಷಿಸಿದೆ. ಈ ಅಪ್ಡೇಟ್ ವಾಯ್ಸ್ ನೋಟ್ ಫೀಚರ್ ಆಗಿದ್ದು. ಇನ್ಮುಂದೆ ವಾಟ್ಸಾಪ್ನಲ್ಲಿ ಫೋಟೋ, ವಿಡಿಯೋ ಜೊತೆಗೆ ವಾಯ್ಸ್ ನೋಟ್ ಅನ್ನು ಸಹ ಶೇರ್ ಮಾಡಿಕೊಳ್ಳಬಹುದಾಗಿದೆ. ಇನ್ನು ಶೇರ್ ಮಾಡುವಂತಹ ರೀತಿ ಈ ಹಿಂದೆ ಮಾಡುತ್ತಿದ್ದಂತಹ ರೀತಿಯಲ್ಲೇ ಇರಲಿದ್ದು ಈ ಫೀಚರ್ ಮಾತ್ರ ವಿಭಿನ್ನ ಅನುಭವವನ್ನು ನೀಡಲಿದೆ.
ಯಾವ ರೀತಿ ಕಾರ್ಯನಿರ್ವಹಿಸುತ್ತದೆ?
ಇನ್ನು ಈ ವಾಯ್ಸ್ ನೋಟ್ ಫೀಚರ್ ಅನ್ನು ಸ್ಟೇಟನ್ನಲ್ಲಿ ಒಂದು ಬಾರಿಯಲ್ಲಿ 30 ಸೆಕೆಂಡುಗಳವರೆಗೆ ರೆಕಾರ್ಡ್ ಮಾಡಿ ಶೇರ್ ಮಾಡಬಹುದಾಗಿದೆ. ಜೊತೆಗೆ ಯಾವುದೇ ವಾಯ್ಸ್ ಮೆಸೇಜ್ ಅನ್ನು ಸಹ ಎನ್ಕ್ರಿಪ್ಟ್ ಮಾಡಲಾಗುತ್ತದೆ.
ಹಾಗೆಯೇ ಈಗಾಗಲೇ ವಾಟ್ಸಾಪ್ ಸ್ಟೇಟಸ್ ನಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿರುವ ಫೋಟೋ ಹಾಗೂ ವಿಡಿಯೋದಂತೆಯೇ 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ಇದಿಷ್ಟೇ ಅಲ್ಲದೆ, ಸ್ಟೇಟಸ್ ಅಪ್ಡೇಟ್ ನಲ್ಲಿ ಪೋಸ್ಟ್ ಮಾಡಿದ ನಂತರ ಬಳಕೆದಾರರು ಅದನ್ನು ಡಿಲೀಟ್ ಮಾಡುವ ಆಯ್ಕೆಯನ್ನೂ ಸಹ ಹೊಂದಿರುತ್ತಾರೆ.
ಯಾರಿಗೆಲ್ಲಾ ಲಭ್ಯವಿದೆ?
ಈ ಫೀಚರ್ಸ್ ಬಗ್ಗೆ ವಾಬೀಟಾಇನ್ಫೋ ಮಾಹಿತಿ ನೀಡಿದ್ದು, ಹೊಸ ಫೀಚರ್ಸ್ ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.23.2.8 ನವೀಕರಣದಲ್ಲಿ ಇತ್ತೀಚಿನ ವಾಟ್ಸಾಪ್ ಬೀಟಾದೊಂದಿಗೆ ಲಭ್ಯವಿರಲಿದೆ ಎಂದು ಉಲ್ಲೇಖಿಸಿದೆ.
ಅದರಂತೆ ಆಂಡ್ರಾಯ್ಡ್ ಬೀಟಾ ಪರೀಕ್ಷಕರು ವಾಯ್ಸ್ ನೋಟ್ ಅನ್ನು ಸ್ಟೇಟಸ್ನಲ್ಲಿ ಶೇರ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈ ಫೀಚರ್ಸ್ ಟೆಕ್ಸ್ಟ್ ಸ್ಟೇಟಸ್ ವಿಭಾಗದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇನ್ನು ಈ ವಾಯ್ಸ್ ಮೆಸೇಜ್ ಅನ್ನು ಶೇರ್ ಮಾಡುವ ಮೊದಲು ಡಿಲೀಟ್ ಮಾಡುವ ಅವಕಾಶ ಸಹ ಲಭ್ಯವಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಬಂಪರ್ ಆಫರ್! ಫೀಚರ್ಸ್ ಹೇಗಿದೆ ಗೊತ್ತಾ?
ಶೇರ್ ಮಾಡುವಾಗ ಟೈಟಲ್ ಹಾಕ್ಬಹುದು
ಹೌದು, ಈ ಹಿಂದೆ ವಾಟ್ಸಾಪ್ನಲ್ಲಿ ಶೇರ್ ಮಾಡುವಾಗ ಯಾವುದೇ ಫೈಲ್ಗಳನ್ನು ಶೇರ್ ಮಾಡಬೇಕಾದರೆ ಅದಕ್ಕೆ ಟೈಟಲ್ ಹಾಕುವಂತಹ ಅವಕಾಶವಿರಲಿಲ್ಲ. ಆದರೆ ಇನ್ಮುಂದೆ ಶೇರ್ ಮಾಡುವ ಮೀಡಿಯಾ ಫೈಲ್ ಜೊತೆಗೆ ಟೈಟಲ್ ಹಾಕಿ ಶೇರ್ ಮಾಡಬಹುದಾಗಿದೆ. ಈ ಮೂಲಕ ಬಳಕೆದಾರರು ಯಾವುದೇ ಫೈಲ್ಗಳನ್ನು ವಾಟ್ಸಾಪ್ನಲ್ಲಿ ಹುಡುಕಲು ಸಹಾಯವಾಗುತ್ತದೆ. ಟೈಟಲ್ ಸೇರಿಸಿದಾಗ ಅದು ಸ್ಕ್ರೀನ್ನ ಕೆಳಭಾಗದಲ್ಲಿ ಕಾಣಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ