ವಾಟ್ಸಾಪ್ (WhasApp) ಎಂಬುದು ಒಂದು ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿದೆ. ಇದು ಪ್ರಪಂಚದಾದ್ಯಂತ ಹಲವಾರು ಬಳಕೆದಾರರನ್ನು ಹೊಂದಿದ್ದು, ಭಾರತದಲ್ಲೇ 500 ಮಿಲಿಯನ್ಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನಗ ಆಗಿರುವಂತಹ ವಾಟ್ಸಾಪ್ ಈ ವರ್ಷ ಬಹಳಷ್ಟು ಫೀಚರ್ಸ್ (Features) ಅನ್ನು ತನ್ನ ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಈ ಫೀಚರ್ಸ್ಗಳೆಲ್ಲವೂ ವಾಟ್ಸಾಪ್ ಬಳಕೆದಾರರಿಗೆ ಬಹಳಷ್ಟು ಉಪಯುಕ್ತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬಂದಾಗುತ್ತೆ. 2023ರಲ್ಲಿ ವಾಟ್ಸಾಪ್ ಇನ್ನೂ ಹಲವಾರು ಅಪ್ಡೇಟ್ಸ್ (Updates)ಗಳನ್ನು ಮಾಡಲಿದೆ ಎಂದು ಹೇಳಿದೆ. ಈ ಮಧ್ಯೆ ಇದೀಗ ವಾಟ್ಸಾಪ್ನಲ್ಲಿ ಮತ್ತೊಂದು ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ.
ವಾಟ್ಸಾಪ್ ಈ ಬಾರಿ ಬಿಡುಗಡೆ ಮಾಡಿರುವಂತಹ ಫೀಚರ್ ಬಹಳಷ್ಟು ಉಪಯುಕ್ತವಾಗಿದೆ. ಏಕೆಂದರೆ ಇದುವರೆಗೆ ಏನಾದರು ಅಗತ್ಯ ಮೆಸೇಜ್ಗಳನ್ನು ಶೇರ್ ಮಾಡುವ ಉದ್ದೇಶದಿಂದ 3 ಮಂದಿಯನ್ನು ಪಿನ್ ಮಾಡಿ ಇಡಲಾಗುತ್ತಿತ್ತು. ಆದರೆ ಈ ಸಂಖ್ಯೆ ಇನ್ಮುಂದೆ 5ಕ್ಕೆ ಏರಿಕೆಯಾಗಿದೆ.
ಪಿನ್ ಚಾಟ್ನಲ್ಲಿ 3 ರಿಂದ 5ಕ್ಕೆ ಏರಿಕೆ
ಇದುವರೆಗೆ ವಾಟ್ಸಾಪ್ನಲ್ಲಿ ಯಾವುದಾದರೂ ಮುಖ್ಯ ಮೆಸೇಜ್ಗಳನ್ನು ಶೇರ್ ಮಾಡಬೇಕಾದರೆ ಅಂತಹ ಚಾಟ್ಗಳನ್ನು ಪಿನ್ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಈ ಪಿನ್ ಮಾಡಲು ಸೀಮಿತ ಸಂಖ್ಯೆಯಿತ್ತು. ಅಂದರೆ ಕೇವಲ 3 ಜನರನ್ನು ಮಾತ್ರ ಪಿನ್ ಮಾಡಿಟ್ಟುಕೊಳ್ಳಬಹುದು. ಆದರೆ ಇದೀಗ ವಾಟ್ಸಾಪ್ ಈ ಸಂಖ್ಯೆಯನ್ನು 5 ಜನರiಗಿೆ ಏರಿಸಿದೆ. ಈ ಮೂಲಕ ವಾಟ್ಸಾಪ್ ಚಾಟ್ನಲ್ಲಿ 5 ಮಂದಿಯನ್ನು ಪಿನ್ ಮಾಡಿಟ್ಟುಕೊಳ್ಳಬಹುದಾಗಿದೆ. ಇದು ಈ ಬಾರಿ ವಾಟ್ಸಾಪ್ ಬಿಡುಗಡೆ ಮಾಡಿದ ಹೊಸ ಫೀಚರ್ಸ್ ಆಗಿದೆ.
ಇದನ್ನೂ ಓದಿ: ಇನ್ಮುಂದೆ ವಾಟ್ಸಪ್ ಸ್ಟೇಟಸ್ ಹಾಕ್ಲಿಕ್ಕೂ ನೋಡುಗರ ಒಪ್ಪಿಗೆ ಬೇಕು! ಸಿಕ್ಕ ಸಿಕ್ಕ ಫೋಟೋ, ವಿಡಿಯೋ ಹಾಕೋ ಆಗಿಲ್ಲ
ಪಿನ್ ಚಾಟ್ನಿಂದ ಏನು ಲಾಭ?
ವಾಟ್ಸಾಪ್ನಲ್ಲಿ ಚಾಟ್ಗಳನ್ನು ಪಿನ್ ಮಾಡುವುದರಿಂದ ನಿಮಗೆ ಅತಿ ಅವಶ್ಯಕ ಎನಿಸುವ ಚಾಟ್ಗಳನ್ನು ಮೇಲ್ಭಾಗದಲ್ಲಿ ಕಾಣುವುದಕ್ಕೆ ಸಾದ್ಯವಾಗಲಿದೆ. ಇದರಿಂದ ನೀವು ಪ್ರಮುಖ ಎನ್ನುವ ಚಾಟ್ಗಳಿಗೆ ಮಸೇಜ್ ಮಾಡುವುದು ಇನ್ನಷ್ಟು ಸುಲಭವಾಗಿದೆ. ಸದ್ಯ ಈ ಹೊಸ ಫೀಚರ್ಸ್ ಬಗ್ಗೆ ವಾಬೇಟಾಇನ್ಫೋ ವೆಬ್ಸೈಟ್ ವರದಿ ಮಾಡಿದೆ. ಈ ಪ್ರಕಾರ ಪ್ರಸ್ತುತ, ವಾಟ್ಸಾಪ್ ಬಳಕೆದಾರರು ತಮ್ಮ ಚಾಟ್ ವಿಂಡೋದ ಮೇಲೆ ಕೇವಲ ಮೂರು ಚಾಟ್ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಹೊಸ ಫೀಚರ್ ಮೂಲಕ ನೀವು ಐದು ಚಾಟ್ಗಳನ್ನು ಪಿನ್ ಮಾಡುವುದಕ್ಕೆ ಅವಕಾಶ ಸಿಗಲಿದೆ.
ವಾಟ್ಸಾಪ್ ಸ್ಠೇಟಸ್ ಅನ್ನು ರಿಪೋರ್ಟ್ ಮಾಡಬಹುದು
ಇದುವರೆಗೆ ಬಳಕೆದಾರರು ತಮಗೆ ಬೇಕಾದ ವಿಡಿಯೋ, ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಮೂಲಕ ಹಂಚಿಕೊಳ್ಳಬಹುದಿತ್ತು. ಆದರೆ ಇನ್ಮುಂದೆ ಸ್ಟೇಟಸ್ ಹಾಕುವಾಗ ಎಚ್ಚರವಹಿಸುವಂತೆ ವಾಟ್ಸಾಪ್ ಫೀಚರ್ಸ್ ಬಿಡುಗಡೆ ಮಾಡಿದೆ.
ಒಂದು ವೇಳೆ ಬಳಕೆದಾರರು ವಾಟ್ಸಾಪ್ನಲ್ಲಿ ಜನರಿಗೆ ವೀಕ್ಷಿಸಲಾಗದ, ಅಶ್ಲೀಲ ವಿಡಿಯೋ, ಫೋಟೋಗಳನ್ನು ಹಾಕಿದ್ರೆ ಆ ಸ್ಟೇಟಸ್ ಅನ್ನು ರಿಪೋರ್ಟ್ ಮಾಡುವ ಅವಕಾಶ ನೋಡುಗರಿಗೆ ದೊರೆಯಲಿದೆ. ಇದು ವಾಟ್ಸಪ್ ಈ ಬಾರಿ ತಂದ ಹೊಸ ಅಪ್ಡೇಟ್ಸ್ ಆಗಿದೆ.
ವಾಟ್ಸಾಪ್ನಲ್ಲಿ ಅಂಡೂ (UNDO) ಫೀಚರ್ಸ್
ವಾಟ್ಸಪ್ ಕೆಲದಿನಗಳ ಹಿಂದೆ ತನ್ನ ಅಪ್ಲಿಕೇಶನ್ನಲ್ಲಿ ಮೆಸೇಜ್ ಅನ್ನು ಅಂಡೂ ಮಾಡುವ ಫೀಚರ್ಸ್ ಅನ್ನು ಬಿಡುಗಡೆ ಮಾಡಿತ್ತು. ಈ ಮೂಲಕ ಬಳಕೆದಾರರು ಯಾರಿಗಾದರೂ ತಪ್ಪಿ ಮೆಸೇಜ್ ಕಳುಹಿಸಿದ್ದರೆ ಅದನ್ನು ರೀ ಎಡಿಟ್ ಮಾಡಿ ಮತ್ತೆ ಸೆಂಡ್ ಮಾಡುವ ಅವಕಾಶವಿದೆ. ಇದನ್ನು ಬಳಕೆದಾರರು ಡಿಲೀಟ್ ಫಾರ್ ಮಿ ಎಂದು ಕೊಟ್ಟಾಗ ಅದರಲ್ಲಿ ಅಂಡೂ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಸೆಲೆಕ್ಟ್ ಮಾಡುವ ಮೂಲಕ ಆ್ಯಕ್ಸಿಡೆಂಟಲ್ ಫೀಚರ್ ಅನ್ನು ಬಳಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ