• Home
  • »
  • News
  • »
  • tech
  • »
  • Twitter: ಎಲಾನ್ ಮಸ್ಕ್​ ಮತ್ತೊಂದು ನಿರ್ಧಾರ! ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್

Twitter: ಎಲಾನ್ ಮಸ್ಕ್​ ಮತ್ತೊಂದು ನಿರ್ಧಾರ! ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್

ಟ್ವಿಟರ್ ಖಾತೆ ಬ್ಯಾನ್

ಟ್ವಿಟರ್ ಖಾತೆ ಬ್ಯಾನ್

ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವೆ ಭಾರತದಲ್ಲಿ ಒಟ್ಟು 54 ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಿದೆ. ಈ ಖಾತೆಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದೆ ನಗ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿತ್ತು ಎಂಬ ಕಾರಣವನ್ನು ಟ್ವಿಟರ್ ಸಂಸ್ಥೆ ಬ್ಯಾನ್ ಮಾಡುವ ನಿರ್ಧಾರ ಮಾಡಿದೆ.

ಮುಂದೆ ಓದಿ ...
  • Share this:

    ಆಗಸ್ಟ್ (August) 26 ಮತ್ತು ಸೆಪ್ಟೆಂಬರ್ (September) 25 ರ ನಡುವೆ ಭಾರತದಲ್ಲಿ (India) ಒಟ್ಟು 54 ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ಬ್ಯಾನ್ (Twitter Account Ban) ಮಾಡಲಾಗಿದೆ ಎಂದು ಹೇಳಿದೆ. ಈ ಖಾತೆಗಳು ಮಕ್ಕಳ ಲೈಂಗಿಕ ಶೋಷಣೆ (Sexual exploitation) ಮತ್ತು ಒಪ್ಪಿಗೆಯಿಲ್ಲದೆ ನಗ್ನ ಫೋಟೋಗಳನ್ನು (Naked Photos) ಹಂಚಿಕೊಳ್ಳುತ್ತಿತ್ತು ಎಂಬ ಕಾರಣವನ್ನು ಟ್ವಿಟರ್ ಸಂಸ್ಥೆ ನೀಡಿದೆ. ಹದಿಹರೆಯದ ಮಕ್ಕಳ ನಗ್ನ ಚಿತ್ರಗಳನ್ನು ಹಂಚುತ್ತಿರುವುದು ಕಂಡುಬಂದಿದೆ. ಮತ್ತು ಕಮೆಂಟ್ (Comment) ಮಾಡುವ ಅಸಭ್ಯ ವರ್ತನೆಯನ್ನು ಕಂಡಿಸುವ ಸಲುವಾಗಿ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಲು ಸಂಸ್ಥೆ ಯೋಚಿಸಿದೆ. ಇದುವರೆಗೆ 54,000 ಸಾವಿರ ಖಾತೆಗಳನ್ನು ಬ್ಯಾನ್ ಮಾಡುವಲ್ಲಿ ಯಶಸ್ವಿಹೊಂದಿದೆ. ಹಾಗೂ ಇನ್ನಷ್ಟೂ ಖಾತೆಗಳ ಮೇಲೆ ಟ್ವಿಟರ್ ಹದ್ದಿನ ಕಣ್ಣು ಇರಿಸಿದೆ ಎನ್ನಲಾಗಿದೆ.


    ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತಾನು ತೆಗೆದುಕೊಂಡ ಬಳಿಕ ಇದರಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಕೆಲವೊಂದು ಹೊಸ ಆಯ್ಕೆ, ಹೊಸ ಫೀಚರ್ ಗಳನ್ನು ಪರಿಚಯಿಸುವ ಕೆಲಸಗಳು ನಡೆಯುತ್ತಿದ್ದರೆ, ಇದರ ಜೊತೆಗೆ ಕಠಿಣ ನಿಯಮ ತರುವ ಬಗ್ಗೆ ಕೂಡ ಮಾತುಕತೆ ಶುರುವಾಗಿದೆ. ಎರಡು ದಿನಗಳ ಹಿಂದೆಯಷ್ಟೆ  ಟ್ವಿಟರ್ ನಲ್ಲಿ ಇನ್ನುಮುಂದೆ ಬ್ಲೂ ಸಬ್​ಸ್ಕ್ರಿಪ್ಷನ್ Twitter Verification ಪಡೆಯಬೇಕಾದರೆ ಹಣ ಪಾವತಿಸಬೇಕಾಗುತ್ತದೆ ಎಂಬ ನಿಯಮವನ್ನು ಮಸ್ಕ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ನಿಷೇಧವಾಗಿದೆ.


    ಇದನ್ನೂ ಓದಿ: Winter Heater Jacket: ಈ ಜ್ಯಾಕೆಟ್‌ ಧರಿಸಿದರೆ ಚಳಿಯೇ ಆಗಲ್ವಂತೆ! ಫೀಚರ್ಸ್‌, ಬೆಲೆ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ


    ಐಟಿ ನಿಯಮಗಳ ಉಲ್ಲಂಘನೆ ಆಗ್ತಿದೆ


    ಈ ಬಗ್ಗೆ ಟ್ವಿಟರ್ ಕಂಪನಿ ಮಾಹಿತಿ ನೀಡಿದ್ದು, ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವೆ ಭಾರತದಲ್ಲಿ ಒಟ್ಟು 54 ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ಹೇಳಿದೆ. ಈ ಖಾತೆಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದೆ ನಗ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿತ್ತು ಎಂಬ ಕಾರಣ ನೀಡಿದೆ. ಐಟಿ ನಿಯಮ 2021ರ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.


    ಐಟಿ ನಿಯಮಗಳು 2021 ರ ನಿಯಮ ಉಲ್ಲಂಘನೆ ಬಗ್ಗೆ ಮಾಸಿಕ ವರದಿಯಲ್ಲಿ ಭಾರತದಲ್ಲಿನ ಬಳಕೆದಾರರಿಂದ 157 ದೂರುಗಳನ್ನು ಟ್ವಿಟರ್ ಸ್ವೀಕರಿಸಿದೆ. 129 URL ಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ”ನಾವು ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ 43 ಕುಂದುಕೊರತೆಗಳನ್ನು ಪ್ರಕ್ರಿಯೆಗೊಳಿಸಿದ್ದೇವೆ. ಇವೆಲ್ಲವನ್ನೂ ಪರಿಹರಿಸಲಾಗಿದೆ ಮತ್ತು ಸೂಕ್ತ ಕ್ರಮಗಳಲ್ಲಿ ಕೈಗೊಳ್ಳಲಾಗಿದೆ” ಎಂದು ಟ್ವಿಟ್ಟರ್  ಉಲ್ಲೇಖಿಸಿದೆ ಎಂದು  ಐಎಎನ್ಎಸ್ ವರದಿ ಹೇಳಿದೆ.


    ಇದನ್ನೂ ಓದಿ: Free Internet: ಫ್ರೀಯಾಗಿ ಇಂಟರ್ನೆಟ್‌ ಉಪಯೋಗಿಸುವುದು ಹೇಗೆ? ಈ ಟ್ರಿಕ್ಸ್‌ ಫಾಲೋ ಮಾಡಿ


    ಸ್ವಾತಿ ಮಲಿವಾಲ್ ಆಕ್ರೋಶ ವ್ಯಕ್ತಪಡಿಸಿದರು


    ಕಳೆದ ತಿಂಗಳು, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಮಕ್ಕಳ ಅಶ್ಲೀಲತೆಯ ದೂರುಗಳಲ್ಲಿ ಟ್ವಿಟರ್‌ನಿಂದ ಪಡೆದ ಉತ್ತರಗಳು ಅಪೂರ್ಣವಾಗಿವೆ ಮತ್ತು ಇದರಿಂದ ಆಯೋಗವು ತೃಪ್ತಿ ಹೊಂದಿಲ್ಲ ಎಂದು ಹೇಳಿದ್ದರು. ಟ್ವಿಟರ್​ನಲ್ಲಿ ಮಕ್ಕಳ ಅಶ್ಲೀಲತೆ ಮತ್ತು ಮಹಿಳೆಯರ, ಮಕ್ಕಳ ಅತ್ಯಾಚಾರದ ವಿಡಿಯೋಗಳನ್ನು ಚಿತ್ರಿಸುವ ಟ್ವೀಟ್‌ಗಳ ಕುರಿತು ಮಲಿವಾಲ್ ಸೆಪ್ಟೆಂಬರ್ 20 ರಂದು ಟ್ವಿಟರ್ ಇಂಡಿಯಾ ನೀತಿ ಮುಖ್ಯಸ್ಥ ಮತ್ತು ದೆಹಲಿ ಪೊಲೀಸರಿಗೆ ಸಮನ್ಸ್ ನೀಡಿದ್ದರು. ಟ್ವಿಟರ್‌ನಲ್ಲಿ ಮಕ್ಕಳ ಅಶ್ಲೀಲತೆಯನ್ನು ಬಿಂಬಿಸುವಂತಹ ಟ್ವೀಟ್‌ಗಳ ಹೆಚ್ಚಾಗುತ್ತಿದೆ. ಈ ಬಗ್ಗೆ ಎಲಾನ್ ಮಸ್ಕ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.


    ಟ್ವಿಟರ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ಟ್ವಿಟರ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ಟ್ವಿಟರ್ ನಿಮ್ಮ ಖಾತೆಯನ್ನು ಬ್ಯಾನ್ ಮಾಡುವುದು ಪಕ್ಕಾ ಅನ್ನೋದನ್ನ ಮರಿಬೇಡಿ.

    Published by:ವಾಸುದೇವ್ ಎಂ
    First published: