ಇನ್ನೇನು ಕೆಲವೇ ದಿನಗಳಲ್ಲಿ ಹೊಸವರ್ಷಕ್ಕೆ (New Year) ನಾವೆಲ್ಲರೂ ಕಾಲಿಡಲಿದ್ದೇವೆ. ಆದರೆ ಈ ಹೊಸವರ್ಷದಲ್ಲಿ ಏನೆಲ್ಲಾ ಉತ್ಪನ್ನಗಳು ಬಿಡುಗಡೆಯಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಅದೇ ರೀತಿ 2022 ರನ್ನು ಸ್ವಲ್ಪ ಮೆಲುಕು ಹಾಕುವುದಾದರೆ ಈ ವರ್ಷದಲ್ಲಿ ಹಲವಾರು ಸ್ಮಾರ್ಟ್ಫೋನ್ (Smartphone) ಗಳು ಬಿಡುಗಡೆಯಾಗಿದೆ. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹಲವಾರು ಮೊಬೈಲ್ಗಳು ಬಿಡುಗಡೆಯಾಗಿದ್ದು ಒಂದಕ್ಕೊಂದು ಶಕ್ತಿಯುತವಾದ ಸ್ಮಾರ್ಟ್ಫೋನ್ಗಳನ್ನು ಕಂಪನಿಗಳು ಬಿಡುಗಡೆ ಮಾಡಿದೆ. ಈ ಮೊಬೈಲ್ ಕಂಪನಿಗಳಲ್ಲಿ ರೆಡ್ಮಿ ಕಂಪನಿಯೂ (Redmi Company) ಒಂದಾಗಿದೆ. ರೆಡ್ಮಿ ನೋಟ್ ಸೀರಿಸ್ನಲ್ಲಿ (Redmi Note Series) ಹಲವಾರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿದೆ. ಇದೀಗ ರೆಡ್ಮಿ ನೋಟ್ ಸೀರಿಸ್ನಲ್ಲಿ ಹೊಸವರ್ಷಕ್ಕೆ ಮತ್ತೊಂದು ಸ್ಮಾರ್ಟ್ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಹೌದು, ರೆಡ್ಮಿ ನೋಟ್ ಸೀರಿಸ್ನಲ್ಲಿ ರೆಡ್ಮಿ ನೋಟ್ 12 5ಜಿ ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು 2023 ಜನವರಿ 5 ರಂದು ಮಾರುಕಟ್ಟೆಗೆ ಕಾಲಿಡಲಿದೆ ಎಂದು ಕಂಪನಿ ಹೇಳಿದೆ. ಇನ್ನು ಬಿಡುಡಗೆಗೆ ಮೊದಲೇ ಇದರ ಫೀಚರ್ಸ್, ಬೆಲೆ ಮಾಹಿತಿ ಸೋರಿಕೆಯಾಗಿದ್ದು ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ರೆಡ್ಮಿ ನೋಟ್ ಸೀರಿಸ್ನ ಸಾಧನೆ
ರೆಡ್ಮಿ ನೋಟ್ ಸೀರಿಸ್ ಜಾಗತಿಕವಾಗಿ 300 ಮಿಲಿಯನ್ ಗಡಿಯನ್ನು ದಾಟಿದೆ ಎಂದು ಶಿಯೋಮಿ ಇಂಡಿಯಾ ಇತ್ತೀಚೆಗೆ ತನ್ನ ವರದಿಯಲ್ಲಿ ಘೋಷಿಸಿತು. ರೆಡ್ಮಿ ಕಂಪನಿಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಅದ್ರಲ್ಲೂ ರೆಡ್ಮಿ ಯ ನೋಟ್ ಸೀರಿಸ್ನ ಸ್ಮಾರ್ಟ್ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿದೆ. ಈ ಸಂಖ್ಯೆಯಲ್ಲಿ 72 ಮಿಲಿಯನ್ ಭಾರತದಲ್ಲಿಯೇ ಮಾರಾಟವಾಗಿದೆ.
ಇದನ್ನೂ ಓದಿ: ಭಾರತಕ್ಕೆ ಲಗ್ಗೆಯಿಟ್ಟಿದೆ ನಾಯ್ಸ್ನ ಹೊಸ ಸ್ಮಾರ್ಟ್ವಾಚ್! ಫೀಚರ್ಸ್, ಬೆಲೆ ಮಾಹಿತಿ ಇಲ್ಲಿದೆ
ಭಾರತದಲ್ಲಿ ಹೆಚ್ಚು ಮೆಚ್ಚುಗೆ ಪಡೆದ ಮತ್ತು ಅತ್ಯಂತ ಜನಪ್ರಿಯವಾದ ನೋಟ್ ಸೀರಿಸ್ನ ಪರಂಪರೆಯನ್ನು ಮುಂದುವರೆಸುತ್ತಾ, ಶಿಯೋಮಿ ತನ್ನ ಇತ್ತೀಚಿನ ರೆಡ್ಮಿ ನೋಟ್ 12 ಸೀರಿಸ್ ಜನವರಿ 5, 2023 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. 'ಸೂಪರ್ನೋಟ್' ಸರಣಿಯು ವೈಶಿಷ್ಟ್ಯಗೊಳಿಸಲಿದೆ ಎಂದು ಬ್ರ್ಯಾಂಡ್ ಅಧಿಕೃತವಾಗಿ ಘೋಷಿಸಿದೆ. ಭಾರತದಲ್ಲಿ ರೆಡ್ಮಿ ನೋಟ್ 12 5ಜಿ, ರೆಡ್ಮಿ ನೋಟ್ 12 ಪ್ರೋ 5ಜಿ ಮತ್ತು ರೆಡ್ಮಿ ನೋಟ್ 12 ಪ್ರೋ+ 5ಜಿ ಮಾದರಿಗಳಲ್ಲಿ ಲಗ್ಗೆ ಇಡಲಿದೆ.
ರೆಡ್ಮಿ ನೋಟ್ 12 5ಜಿ
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ 6.67 ಇಂಚಿನ ಅಮೋಲ್ಡ್ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಲಾಪಿಂಗ್ ರೇಟ್ ಅನ್ನು ಹೊಂದಿದೆ. ಡ್ಯುಯಲ್ 5ಜಿ ಬ್ಯಾಂಡ್ ಬೆಂಬಲದೊಂದಿಗೆ ಉತ್ತಮ ಕಾರ್ಯನಿರ್ವಹಣೆಗಾಗಿ ರೆಡ್ಮಿ ನೋಟ್ 12 ಅನ್ನು ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 4 ಜೆನ್ 1 ನಿಂದ ನಡೆಸಲಾಗುತ್ತಿದೆ. ಇನ್ನು ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿ ಮತ್ತು 33W ಇನ್ ಬಾಕ್ಸ್ ಫಾಸ್ಟ್ ಚಾರ್ಜರ್ ಸಾಮರ್ಥ್ಯವನ್ನು ಹೊಂದಿರಲಿದೆ.
ಇನ್ನು ಇದರ ಕ್ಯಾಮೆರಾ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ, ಇದು ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ 48ಎಂಪಿ ಪ್ರಾಥಮಿಕ ಸೆನ್ಸಾರ್ ಅನ್ನು, 8ಎಂಪಿ ಅಲ್ಟ್ರಾವೈಡ್ ಮತ್ತು 2ಎಂಪಿ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 13 ಎಂಪಿ ಸೆನ್ಸಾರ್ನಷ್ಟು ಮುಂಭಾಗದ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ರೆಡ್ಮಿ ನೋಟ್ 12 ಪ್ರೋ 5ಜಿ ಸ್ಮಾರ್ಟ್ಫೋನ್
ರೆಡ್ಮಿ ನೋಟ್ 12 ಪ್ರೋ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಮತ್ತು 67W ಫಾಸ್ಟ್ ಚಾರ್ಜರ್ ಜೊತೆಗೆ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಇನ್ನು ಇದು ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದೆ. ಇದು 50ಎಂಪಿ ಸೋನಿ IMX766 ಪ್ರಾಥಮಿಕ ಕ್ಯಾಮೆರಾ, 8ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2ಎಂಪಿ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ, ರೆಡ್ಮಿ ನೋಟ್ 12 ಪ್ರೊ 5G ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವಿಡಿಯೋ ಕಾಲ್ಗಾಗಿ ಮುಂಭಾಗದಲ್ಲಿ 16ಎಂಪಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ರೆಡ್ಮಿ ನೋಟ್ 12 ಪ್ರೋ+ 5ಜಿ ಸ್ಮಾರ್ಟ್ಫೋನ್
ರೆಡ್ಮಿ ನೋಟ್ 12 ಪ್ರೋ+ ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ ದೊಡ್ಡ 6.67 ಇಂಚಿನ 10 ಬಿಟ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್ ಮತ್ತು HDR10+ ಗೆ ಬೆಂಬಲವನ್ನು ಹೊಂದಿದೆ. ಓಐಎಸ್ನೊಂದಿಗೆ 200 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ HPX ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಭಾರತದ ಮೊದಲ ಸ್ಮಾರ್ಟ್ಫೋನ್ ಇದಾಗಿದೆ.
ರೆಡ್ಮಿ ನೋಟ್ 12 ಪ್ರೋ+ 5ಜಿ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಅನ್ನು ಸಹ ಹೊಂದಿದೆ. ಹಾಗೆಯೇ ಬಾಕ್ಸ್ನಲ್ಲಿ 120W ಹೈಪರ್ಚಾರ್ಜ್ನೊಂದಿಗೆ ಬೃಹತ್ 4980mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಫುಲ್ ಚಾರ್ಜ್ ಮಾಡಬೇಕಾದರೆ ಕೇವಲ 19 ನಿಮಿಷಗಳು ಸಾಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ