Android Apps: ಈ 17 ಜನಪ್ರಿಯ ಅಪ್ಲಿಕೇಶನ್​ಗಳಲ್ಲಿದೆ ಮಾಲ್​ವೇರ್​​; ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ ಇದ್ದರೆ ತೆಗೆದು ಹಾಕಿ

ಈಗ ಮತ್ತೆ ಆರು ಆ್ಯಪ್ ಗಳನ್ನು ಪ್ಲೇಸ್ಟೋರ್ ತೆಗೆದು ಹಾಕಿದೆ. ಹೀಗಾಗಿ ಈ ಆ್ಯಪ್ ಗಳನ್ನು ಹೊಸದಾಗಿ ಡೌನ್ ಲೋಡ್ ಮಾಡಿಕೊಳ್ಳು ಸಾಧ್ಯವಿಲ್ಲ. ಆದರೆ, ಈಗಾಗಲೇ ಈ ಆ್ಯಪ್ ಗಳು ನಿಮ್ಮ ಮೊಬೈಲ್ ಸೇರಿದ್ದರೆ ಅವನ್ನು ಡಿಲೀಟ್ ಮಾಡಿ.

ಗೂಗಲ್​ ಪ್ಲೇ

ಗೂಗಲ್​ ಪ್ಲೇ

  • Share this:
    ಪ್ಲೇಸ್ಟೋರ್​ನಲ್ಲಿರುವ ಸಾಕಷ್ಟು ಆ್ಯಪ್​ಗಳು ವೈರಸ್ ಹೊಂದಿರುತ್ತವೆ. ಇದನ್ನು ಪತ್ತೆ ಹಚ್ಚಿ ಅದನ್ನು ತೆಗೆದು ಹಾಕುವ ಕೆಲಸವನ್ನು ಪ್ಲೇ ಸ್ಟೋರ್ ನಿರಂತರವಾಗಿ ಮಾಡುತ್ತಲೇ ಬಂದಿದೆ. ಮಾಲ್ವೇರ್ ಇರುವ ಆ್ಯಪ್​ಗಳನ್ನು ಡೌನ್ಲೋಡ್ ಮಾಡಿಕೊಂಡ ನಂತರ ಅದು ನಿಮ್ಮ ಮೊಬೈಲ್ಗೆ ಕುತ್ತು ತರಬಹುದು. ನಿಮ್ಮ ಮಾಹಿತಿಯನ್ನು ಬೇರೆಡೆ ವರ್ಗಾವಣೆ ಮಾಡಬಹುದು. ಈಂಥ ಜುಲೈ ತಿಂಗಳ ಅವಧಿಯಲ್ಲಿ ಪ್ಲೇಸ್ಟೋರ್ ಒಟ್ಟು 11 ಆ್ಯಪ್ ಗಳನ್ನು ತೆಗೆದು ಹಾಕಿತ್ತು. ಇದಕ್ಕೆ ಕಾರಣ ಈ ಆ್ಯಪ್ ಗಳಲ್ಲಿ ಜೋಕರ್ ಹೆಸರಿ ಮಾಲ್​​ವೇರ್ ಇತ್ತು. ಈಗ ಮತ್ತೆ ಆರು ಆ್ಯಪ್ ಗಳನ್ನು ಪ್ಲೇಸ್ಟೋರ್ ತೆಗೆದು ಹಾಕಿದೆ. ಹೀಗಾಗಿ ಈ ಆ್ಯಪ್ ಗಳನ್ನು ಹೊಸದಾಗಿ ಡೌನ್ ಲೋಡ್ ಮಾಡಿಕೊಳ್ಳು ಸಾಧ್ಯವಿಲ್ಲ. ಆದರೆ, ಈಗಾಗಲೇ ಈ ಆ್ಯಪ್ ಗಳು ನಿಮ್ಮ ಮೊಬೈಲ್ ಸೇರಿದ್ದರೆ ಅವನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಮೊಬೈಲ್ಗೆ ಅಪಾಯ ಗ್ಯಾರಂಟಿ.

    ಹೀಗಾಗಿ ಈ 17 ಆ್ಯಪ್ ಗಳು ನಿಮ್ಮ ಮೊಬೈಲ್ನಲ್ಲಿದ್ದರೆ ಇಂದೇ ತೆಗೆದು ಹಾಕಿ ಬಿಡಿ. ಆ ಆ್ಯಪ್ ಗಳು ಯಾವವು ಎಂಬುದಕ್ಕೆ ಇಲ್ಲಿದೆ ಮಾಹಿತಿ.

    • com.imagecompress.android

    • com.relax.relaxation.androidsms

    • com.file.recovefiles

    • com.training.memorygame

    • Push Message- Texting & SMS

    • Fingertip GameBox

    • com.contact.withme.texts

    • com.cheery.message.sendsms (two different instances)

    • com.LPlocker.lockapps

    • Safety AppLock

    • Emoji Wallpaper

    • com.hmvoice.friendsms

    • com.peason.lovinglovemessage

    • com.remindme.alram

    • Convenient Scanner 2

    • Separate Doc Scanner

    Published by:Rajesh Duggumane
    First published: