ಧ್ವನಿ ಸಂದೇಶ ಕಳುಹಿಸುವ ಆ್ಯಪ್ಗಳ ಪಟ್ಟಿಯಲ್ಲಿ ಕ್ಲಬ್ಹೌಸ್ ಕೂಡ ಒಂದು. ಅನೇಕ ಬಳಕೆದಾರರನ್ನು ಈ ಆ್ಯಪ್ ಹೊಂದಿದೆ. ಈಗಾಗಲೇ ಸುಮಾರು 8.1 ಮಿಲಿಯನ್ ಜನರು ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ವೇಳೆಗೆ ಈ ಆ್ಯಪ್ ಬಿಡುಗಡೆಗೊಂಡು ಕೆಲವೇ ತಿಂಗಳಲ್ಲಿ ಅಧಿಕ ಬಳಕೆದಾರರನ್ನು ಕ್ಲಬ್ಹೌಸ್ ಸ್ಟೋರ್ ಒಳಗೊಂಡಿದೆ.
ಕ್ಲಬ್ಹೌಸ್ ಆ್ಯಪ್ ಆ್ಯಂಡ್ರಾಯ್ಡ್ ಆವೃತ್ತಿಯಲ್ಲಿ ಇನ್ನು ಲಭ್ಯವಾಗಿಲ್ಲ. ಆದರೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕ್ಲಬ್ಹೌಸ್ ಹೆಸರಿನ ಸಾಕಷ್ಟು ಆ್ಯಪ್ಗಳು ಕಾಣಿಸಿಕೊಂಡಿದೆ. ಈ ಎಲ್ಲಾ ಅಪ್ಲಿಕೇಶನ್ ಅನ್ನು ಬೇರೆ ಬೇರೆ ಡೆವಲಪರ್ ಸಿದ್ಧಪಡಿಸಿದ್ದಾರೆ. ಮಾತ್ರವಲ್ಲದೆ, ನಕಲಿ ಲೊಗೊ ಬಳಸಿ ಸಿದ್ಧಪಡಿಸಿದ್ದಾರೆ. ನಕಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕಾಣಿಸಿರುವ ಕ್ಲಬ್ಹೌಸ್ ಆ್ಯಪ್ಗಳಲ್ಲಿ ಒಂದು ಆ್ಯಪ್ ಕಪ್ಪು ಮತ್ತು ಬಿಳಿ ಬಣ್ಣದಲ್ಲಿರುವ ಟೋಪಿ ಹಾಕಿರುವ ಮನುಷ್ಯನ ಭಾವಚಿತ್ರವನ್ನು ಹೊಂದಿದೆ.
ಮತ್ತೊಂದು ಕ್ಲಬ್ಹೌಸ್ ಅಪ್ಲಿಕೇಶನ್ ಸಾಫ್ಟ್ವೇರ್ ತಂಡಗಳಿಗೆ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಟೂಲ್ಗಳನ್ನು ನೀಡುತ್ತಿದೆ. ಹಲವಾರು ಆ್ಯಂಡ್ರಾಯ್ಡ್ ಬಳಕೆದಾರರು ಈ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿದ್ದಾರೆ. ಮಾತ್ರವಲ್ಲದೆ, ಧ್ವನಿ ಆಧಾರಿತ ಪ್ಲಾಟ್ಫಾರ್ಮ್ ಎಂದು ನಂಬಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ