ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಫೋನಿನಲ್ಲಿ ಒಂದಷ್ಟು ಕಾಂಟೆಕ್ಟ್ಗಳನ್ನ ಸೇವ್ ಮಾಡಿಟ್ಟುಕೊಂಡಿರುತ್ತಾರೆ. ಸ್ನೇಹಿತರು, ಪರಿಚಯಸ್ತರ ಹೆಸರುಗಳು ಸ್ಮಾರ್ಟ್ಫೋನ್ ಕಾಂಟೆಕ್ಟ್ ಲೀಸ್ಟ್ನಲ್ಲಿ ಸೇವ್ ಆಗಿರುತ್ತದೆ. ಆದರೆ ಕೆಲವೊಮ್ಮೆ ನಕಲಿ ಕಾಂಟೆಕ್ಟ್ಗಳು ಸ್ಮಾರ್ಟ್ಫೋನ್ನಲ್ಲಿ ಸೇವ್ ಆಗಿರುವುದು ತಿಳಿದೇ ಇರುವುದಿಲ್ಲ. ಸದ್ಯ ಇದೊಂದು ತಲೆನೋವಿನ ಕೆಲಸ. ಯಾವುದು ಡುಪ್ಲಿಕೇಟ್ ಕಾಂಟೆಕ್ಟ್? ಎಂದು ಕಂಡು ಹಿಡಿಯುವಷ್ಟರಲ್ಲಿ ಸುಸ್ತಾಗಿರುತ್ತೇವೆ. ಆದರೀಗ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹದಾಗಿದೆ. ಅದಕ್ಕೊಂದು ಸರಳ ಉಪಾಯ ಇಲ್ಲಿದೆ.
ಹೆಚ್ಚಿನ ಜನರ ಬಳಿ ಸ್ಮಾರ್ಟ್ಫೋನ್ಗಳಿವೆ. ಹಾಗಾಗಿ ಬಳಕೆ ಹೆಚ್ಚಾದಂತೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಂತೆ ಸ್ಮಾರ್ಟ್ಫೋನ್ ಮೂಲೆಯಲ್ಲಿ ಅಡಗಿರುವ ನಕಲಿ ಕಾಂಟೆಕ್ಟ್ಗಳನ್ನ ನಿಮಿಷಾರ್ಧದಲ್ಲಿ ಡಿಲೀಟ್ ಮಾಡಬಹುದಾಗಿದೆ. ಸದ್ಯ ಅದಕ್ಕಾಗಿ ನಾನಾ ಥರ್ಡ್ ಪಾರ್ಟಿ ಆ್ಯಪ್ಗಳು ಪ್ಲೇ ಸ್ಟೋರ್(Play store)ನಲ್ಲಿವೆ. ಹಾಗಾಗಿ ಅದನ್ನು ಬಳಸಿ ಸರಿಯಾದ ಕ್ವಾಂಟ್ಯಾಕ್ಟ್ (Contact) ಯಾವುದು? ಡುಪ್ಲಿಕೇಟ್ ಕ್ವಾಂಟ್ಯಾಕ್ಟ್ ಯಾವುದು ಎಂದು ತಿಳಿಯುವ ಮೂಲಕ ಬೇಡವಾದ ನಂಬರ್ ಅನ್ನು ಡಿಲೀಟ್ ಮಾಡಬಹುದು.
Adventure Bikes: ಲಾಂಗ್ ರೈಡ್ಗೆ ಸೂಕ್ತವಾದ ಬೆಸ್ಟ್ ಅಡ್ವೆಂಚರ್ ಬೈಕ್ಗಳಿವು
ಸಿಂಪಲ್ ಮರ್ಜ್ ಡುಪ್ಲಿಕೇಟ್ಸ್(Simple Merge Duplicates) ಎಂಬ ಆ್ಯಪ್ವೊಂದಿದೆ. ಅದನ್ನ ಡೌನ್ಲೋಡ್ ಮಾಡುವ ಮೂಲಕ ಸ್ಮಾರ್ಟ್ಫೋನ್ನಲ್ಲಿ ಇನ್ಸ್ಟಾಲ್ ಮಾಡಿ. ಇಷ್ಟಾದ ಬಳಿಕ ಈ ಆ್ಯಪ್ ಸ್ಮಾರ್ಟ್ಫೋನಲ್ಲಿರುವ ಕಾಂಟೆಕ್ಟ್ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ.
JioPhone Next: ಕಡಿಮೆ ಬೆಲೆಗೆ ಗ್ರಾಹಕರ ಸೇರಲಿದೆ ಜಿಯೋ ನೆಕ್ಸ್ಟ್; ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ
ಸ್ಕ್ಯಾನ್ ಆದ ಬಳಿಕ ಸ್ಮಾರ್ಟ್ಫೋನ್ನಲ್ಲಿ ಸೇವ್ ಆಗಿರುವ ಡುಪ್ಲಿಕೇಟ್ ಕಾಂಟೆಕ್ಟ್ಗಳು, ಒಂದೇ ಮಾದರಿಯ ನಂಬರ್ಗಳನ್ನು ತೋರಿಸುತ್ತದೆ. ಬಳಿಕ ಒಂದೇ ಮಾದರಿಯ ಕಾಂಟೆಕ್ಟ್ ಅನ್ನು ಮರ್ಜ್ ಮಾಡುತ್ತದೆ. ಅಲ್ಲದೆ ಒಂದು ಕಾಂಟೆಕ್ಟ್ ಉಳಿಸಿಕೊಂಡು ಉಳಿದವುಗಳನ್ನು ಡಿಲೀಟ್ ಮಾಡುತ್ತದೆ.
ಒಂದೇ ಬಾರಿಗೆ ಸ್ಮಾರ್ಟ್ಫೋನ್ನಲ್ಲಿ ಅಡಗಿರುವ ಮತ್ತು ನಿಮ್ಮ ಗೋಚರಕ್ಕೆ ಬಾರದಿರುವ ಡುಪ್ಲಿಕೇಟ್ ಕಾಂಟೆಕ್ಟ್ ಗಳನ್ನು ನಿಮಿಷಾರ್ಧದಲ್ಲಿ ಡಿಲೀಟ್ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ