Android security: ಎಚ್ಚರ..! ಈ ಆ್ಯಪ್​ಗಳಿಂದ ತೊಂದರೆಗೆ ಸಿಲುಕಬೇಡಿ

ಕಂಪ್ಯೂಟರ್​ ಮತ್ತು ಸ್ಮಾರ್ಟ್​ಫೋನ್​ಗಳ ಭದ್ರತೆ ಹಾಗೂ ಸುರಕ್ಷತೆಯನ್ನು ಒದಗಿಸುವ ಸೈಮಂಟಿಕ್​ ಕಂಪೆನಿ ಪ್ಲೇ ಸ್ಟೋರ್​ನಲ್ಲಿರುವ ನಕಲಿ ಆ್ಯಪ್​ಗಳನ್ನು ಗುರುತಿಸಿದೆ. ಗೂಗಲ್​ಗೆ ತಿಳಿಯದೆ ಕೆಲ ಆ್ಯಪ್​ಗಳು ಪಾಪ್​ ಅಪ್​ ಜಾಹೀರಾತಿನ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ.

news18
Updated:August 30, 2019, 2:57 PM IST
Android security: ಎಚ್ಚರ..! ಈ ಆ್ಯಪ್​ಗಳಿಂದ ತೊಂದರೆಗೆ ಸಿಲುಕಬೇಡಿ
ಗೂಗಲ್​ ಪ್ಲೆಸ್ಟೋರ್​
news18
Updated: August 30, 2019, 2:57 PM IST
ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಅಡಗಿರುವ ನಕಲಿ ಆ್ಯಪ್​ಗಳಿಂದ ಆ್ಯಂಡ್ರಾಯ್ಡ್​ ಬಳಕೆದಾರರು ಮತ್ತೊಮ್ಮೆ ಫಜೀತಿಗೆ ಸಿಲುಕಿಕೊಂಡಿದ್ದಾರೆ. ನಕಲಿ ಆ್ಯಪ್​ಗಳಿಂದಾಗಿ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗುತ್ತಿದ್ದು, ಈ ಕುರಿತಂತೆ ಸೈಮಂಟಿಕ್​ ಸಂಸ್ಥೆ ಎಚ್ಚರಿಕೆ ಮಾಹಿತಿಯನ್ನು ಹೊರಡಿಸಿದೆ.

ಕಂಪ್ಯೂಟರ್​ ಮತ್ತು ಸ್ಮಾರ್ಟ್​ಫೋನ್​ಗಳ ಭದ್ರತೆ ಹಾಗೂ ಸುರಕ್ಷತೆಯನ್ನು ಒದಗಿಸುವ ಸೈಮಂಟಿಕ್​ ಕಂಪೆನಿ ಪ್ಲೇ ಸ್ಟೋರ್​ನಲ್ಲಿರುವ ನಕಲಿ ಆ್ಯಪ್​ಗಳನ್ನು ಗುರುತಿಸಿದೆ. ಗೂಗಲ್​ಗೆ ತಿಳಿಯದೆ ಕೆಲ ಆ್ಯಪ್​ಗಳು ಪಾಪ್​ ಅಪ್​ ಜಾಹೀರಾತಿನ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ. ಆ್ಯಪ್​ ಬಳಕೆದಾರರು ಜಾಹೀರಾತಿನ ಮೇಲೆ ಕ್ಲಿಕ್​ ಮಾಡುವ ಮೂಲಕ ಮಾಹಿತಿಯನ್ನು ಸುಲಭವಾಗಿ ದೋಚುತ್ತಿದೆ ಎಂದು ತಿಳಿಸಿದೆ.

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಈ ಆ್ಯಪ್​ಗಳನ್ನು ಕೂಡಲೇ ಡಿಲೀಟ್​ ಮಾಡಿ

ಐಡಿಯಾ ನೋಟ್​ ಅಭಿವೃದ್ಧಿ ಪಡಿಸಿದ ಒಸಿಆರ್​ ಟೆಕ್ಸ್ಟ್​​ ಸ್ಕ್ಯಾನರ್​, GTD, ಕಲರ್​ ನೋಟ್​ ಆ್ಯಪ್​ಗಳು ಬಳಕೆದಾರರಿಗೆ ಪಾಪ್​ ಅಪ್​ ಜಾಹೀರಾತುಗಳನ್ನು ನೀಡುವ ಮೂಲಕ ಮಾಹಿತಿಯನ್ನು ಕದಿಯುತ್ತಿದೆ. ಬ್ಯೂಟಿ ಫಿಟ್ನೆಸ್​: ಡೈಲಿ ವರ್ಕೌಟ್​​ ಬೆಸ್ಟ್​ HIIT ಆ್ಯಪ್​ ಕೂಡ ಬಳಕೆದಾರರಿಗೆ ಜಾಹೀರಾತುಗಳನ್ನು ನೀಡುತ್ತಿದೆ.

ಇನ್ನು ಡಿಸ್​ಪ್ಲೇ ಮೇಲೆ ಮೂಡುವ ಹಿಡನ್​ ವ್ಯೂ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ. ಬಳಕೆದಾರರು ಪ್ಲೇ ಸ್ಟೋರ್​ ಫ್ರೀ ಆ್ಯಪ್​ಗಳಿಂದ ಜಾಗೃತರಾಗುವುದು ಒಳಿತು ಎಂದು ಹೇಳಿದೆ.

First published:August 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...