Android 10: ಸಿಹಿ ತಿಂಡಿಗಳ ಹೆಸರಿನಿಂದ ದೂರ ಸರಿದ ಆಂಡ್ರಾಯ್ಡ್​​! ​

ಇಲ್ಲಿಯವರೆಗೆ ಆ್ಯಂಡ್ರಾಯ್ಡ್​ ಆವೃತ್ತಿಯ ಹೆಸರುಗಳು ಸಿಹಿ ತಿನಿಸುಗಳ ಹೆಸರುಗಳಿದ್ದು, ಮುಂದಿನ ಆವೃತ್ತಿಯಲ್ಲಿ ಸಂಖ್ಯೆಯಲ್ಲಿ ಇರಲಿದೆ.

news18
Updated:August 24, 2019, 2:46 PM IST
Android 10: ಸಿಹಿ ತಿಂಡಿಗಳ ಹೆಸರಿನಿಂದ ದೂರ ಸರಿದ ಆಂಡ್ರಾಯ್ಡ್​​! ​
ಆ್ಯಂಡ್ರಾಯ್ಡ್​ ಲೋಗೊ
  • News18
  • Last Updated: August 24, 2019, 2:46 PM IST
  • Share this:
ಗೂಗಲ್​ ಸಿದ್ಧಪಡಿಸುತ್ತಿದ್ದ ಆಂಡ್ರಾಯ್ಡ್​​ ಆಪರೇಟಿಂಗ್​ ವ್ಯವಸ್ಥೆಗೆ ಒಂದೊದು ವಿಶೇಷ ಸಿಹಿ ತಿಂಡಿಗಳ ಹೆಸರನ್ನು ಇಡುತ್ತಾ ಬಂದಿದೆ. ಆದರೆ ಈ ಬಾರಿ ಮಾತ್ರ ಗೂಗಲ್​ ಆಂಡ್ರಾಯ್ಡ್​ ಓಎಸ್​ಕ್ಯೂ ಆವೃತ್ತಿಯಲ್ಲಿ ಸಿಹಿತಿನಿಸುಗಳ ಹೆಸರನ್ನು ಇರಿಸುವ ಬದಲಾಗಿ ಆಂಡ್ರಾಯ್ಡ್​ 10 ಎಂದು ಅಧಿಕೃತವಾದ ಹೆಸರನ್ನಿಡಲು ಮುಂದಾಗಿದೆ.

ಗೂಗಲ್​ ಆಂಡ್ರಾಯ್ಡ್​​ ಲೋಗೊದಲ್ಲೂ ಬದಲಾವಣೆಯನ್ನು ಮಾಡಿದೆ. ಪ್ರತಿ ಬಾರಿ ಹೊಸದಾದ ಆಂಡ್ರಾಯ್ಡ್​​ ಆವೃತ್ತಿಯನ್ನು ಹೊರತರುವಾಗ ಬಳಕೆದಾರರಿಂದ ಹೊಸ ಹೆಸರನ್ನು ಅಪೇಕ್ಷಿಸುತ್ತಿತ್ತು. ಜನರು ಸಿಹಿ ತಿಣಿಸುಗಳ ಹೆಸರನ್ನು ಸೂಚಿಸುತ್ತಿದ್ದರು.

ಭಾರತದಿಂದ ಗೂಗಲ್​ಗೆ ಸಾವಿರಾರು ಸಿಹಿ ತಿನಿಸುಗಳ ಹೆಸರುಗಳನ್ನು ಶಿಫಾರಸು ಹೋಗುತ್ತಿದ್ದು, ಇದರ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ನಡೆದಿತ್ತು.

ಇದನ್ನೂ ಓದಿ: Arun Jaitley: ಬಿಜೆಪಿ ಟ್ರಬಲ್​ ಶೂಟರ್​​ ಅರುಣ್​ ಜೇಟ್ಲಿಯವರ ಅಪರೂಪದ ಫೋಟೋಗಳು

ಇಲ್ಲಿಯವರೆಗೆ ಆಂಡ್ರಾಯ್ಡ್​​ ಆವೃತ್ತಿಯ ಹೆಸರುಗಳು ಸಿಹಿ ತಿನಿಸುಗಳ ಹೆಸರುಗಳಿದ್ದು, ಮುಂದಿನ ಆವೃತ್ತಿಯಲ್ಲಿ ಸಂಖ್ಯೆಯಲ್ಲಿ ಇರಲಿದೆ.

ಇನ್ನು ಗೂಗಲ್​ ಬಿಡುಗಡೆ ಮಾಡಿದ ಹೊಸ ಆವೃತ್ತಿ ಆಂಡ್ರಾಯ್ಡ್​​ ಕ್ಯೂ ಎಂದು ಕರೆಯಲಾಗಿತ್ತಾದರೂ. ಅಧಿಕೃತವಾಗಿ ಅದು ಆಂಡ್ರಾಯ್ಡ್​​ 10 ಎಂದು ಕರೆಸಿಕೊಳ್ಳಲಿದೆ. ಇದರಿಂದ ಜಾಗತಿಕವಾಗಿ ಹಾಗೂ ಜನರು ಓಎಸ್​ ಹೆಸರನ್ನು ಸುಲಭದಲ್ಲಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗೂಗಲ್​ ಅಭಿಪ್ರಾಯ ತಿಳಿಸಿದೆ.

ಗೂಗಲ್ ಆಂಡ್ರಾಯ್ಡ್​ ಆವೃತ್ತಿಗೆಈವರೆಗೆ ಇಡಲಾದ ಹೆಸರುಗಳು ಇಂತಿವೆಆಂಡ್ರಾಯ್ಡ್​ ಫ್ರೊಯೊ, ಜಿಂಜರ್‌ಬ್ರೆಡ್, ಐಸ್‌ ಕ್ರೀಂ ಸ್ಯಾಂಡ್‌ವಿಚ್, ಮಾರ್ಶ್‌ಮೆಲ್ಲೊ, ಹನಿಕೂಂಬ್, ಓರಿಯೊ, ಪೈ, ಕಪ್‌ಕೇಕ್, ಜೆಲ್ಲಿ ಬೀನ್, ನೋಗಟ್, ಕಿಟ್‌ಕ್ಯಾಟ್, ಲಾಲಿಪಾಪ್

First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ