ಜಿಮ್ಪೆರಿಯಂ ಝೆಡ್ಲ್ಯಾಬ್ (Zimperium zLabs) ಸಂಶೋಧಕರು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಕಾಣಿಸಿಕೊಂಡ ಮಾಸ್ಕ್ವೆರೇಡಿಂಗ್ (masquerading) ಎಂಬ ಹೊಸ ಮಾಲ್ವೇರ್ ಅನ್ನು ಸಂಶೋಧನೆ ಮೂಲಕ ಪತ್ತೆಹಚ್ಚಿದ್ದಾರೆ. ಇದು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಉಳ್ಳವರಿಗೆ ಅಪ್ಡೇಟ್ ಮಾಡುವಂತೆ ಸೂಚನೆ ನೀಡುತ್ತದೆ. ಅದರ ಮೂಲಕ ಮಾಲ್ವೇರ್ ಸ್ಮಾರ್ಟ್ಫೋನ್ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.
ಸಂಶೋಧಕರು ತಿಳಿಸಿದಂತೆ ಮಾಸ್ಕ್ವೆರೇಡಿಂಗ್ ಮಾಲ್ವೇರ್ ಆ್ಯಂಡ್ರಾಯ್ಡ್ ಬಳಕೆದಾರರ ಮೆಸೇಜ್, ಫೋಟೋ, ಸಂಪರ್ಕ ಕದಿಯುತ್ತದೆ. ಜೊತೆಗೆ ಸ್ಮಾರ್ಟ್ಫೋನನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಒಂದು ಬಾರಿ ಮಾಲ್ವೇರ್ ದಾಳಿ ನಡೆಸಿದ ನಂತರ ಹ್ಯಾಕರ್ಗಳು ದೂರದಿಂದಲೇ ಹಿಡಿತ ಸಾಧಿಸುತ್ತಾರೆ ಎಂದು ತಿಳಿಸಿದ್ದಾರೆ.
ಜಿಮ್ಪೆಪೀರಿಯಂ ಸಿಇಒ ಶ್ರೀಧರ್ ಮಿತ್ತಲ್ ಮಾತನಾಡಿ, ‘ಮಾಸ್ಕ್ವೆರೇಡಿಂಗ್ ಮಾಲ್ವೇರ್ ಉದ್ದೇಶಿತವಾಗಿ ದಾಳಿ ಮಾಡುತ್ತದೆ. ಇದು ನಾವು ನೋಡಿದ ಅತ್ಯಂತ ಅತ್ಯಾಧುನಿಕ ಮಾಲ್ವೇರ್ ಆಗಿ ಕಂಡಿದೆ. ಈ ಅಪ್ಲಿಕೇಶನ್ ಸಿದ್ಧಪಡಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ ಎಂದು ಕಾಣುತ್ತದೆ. ಸಾಧ್ಯವಾದಷ್ಟು ಬೇಗ ಈ ಮಾಲ್ವೇರ್ ಅನ್ನು ಹುಡುಕಲು ನಾನು ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.
ಮಾಸ್ಕ್ವೆರೇಡಿಂಗ್ ಮಾಲ್ವೇರ್ ಥರ್ಟ್ ಪಾರ್ಟಿ ಸ್ಟೋರ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ನಂತರ ಪೈರ್ಬ್ರೌಸರ್ ಸರ್ವೇರ್ನೋಮಂಗೆ ಸಂವಹನ ನಡೆಸುತ್ತಾ ದೂರದಿಂದಲೇ ನಿಯಂತ್ರಿಸಲು ಮುಂದಾಗುತ್ತದೆ ಎಂದು ಸಂಶೋಧನೆ ಮೂಲಕ ಪತ್ತೆಹಚ್ಚಿದ್ದಾರೆ.
ಮಾಲ್ವೇರ್ ಪಡೆದ ಡೇಟಾವನ್ನು ನಂತರ ಹಲವಾರು ಫೋಲ್ಡರ್ಗಳನ್ನಾಗಿ ಮಾಡಿ ಸ್ಟೋರ್ ಮಾಡುತ್ತಾರೆ. ಅಷ್ಟು ಮಾತ್ರವಲ್ಲದೆ, ಗೂಗಲ್ ಕ್ರೋಮ್, ಮೊಜಿಲ್ಲ ಫೈರ್ಫಾಕ್ಸ್ ಸ್ಯಾಮ್ಸಂಗ್ ಇಂಟರ್ನೆಟ್ ಬ್ರೌಸರ್ನ ಬುಕ್ಮಾರ್ಕ್ನಲ್ಲಿದ್ದ ಮತ್ತು ಹಿಸ್ಟರಿಯಲ್ಲಿದ್ದ ಖಾಸಗಿ ಡೇಟಾವನ್ನು ಬಯಸುತ್ತದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ