ಫೇಸ್​ಬುಕ್​, ವಾಟ್ಸ್​ಆ್ಯಪ್​ ಬಳಕೆದಾರರ ಗಮನಕ್ಕೆ: ಈ ಆ್ಯಪ್​ಗಳನ್ನು ಬಳಸಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಕದಿಯಲಾಗುತ್ತಿದೆ..!

ಸಂಶೋಧಕರ ಪ್ರಕಾರ, ಈ ಸ್ಪೈವೇರ​ ಆ್ಯಪ್​ಗಳ ಮೂಲಕ ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಗಳನ್ನು ಕಲೆಹಾಕಬಹುದು.

zahir | news18
Updated:January 9, 2019, 4:13 PM IST
ಫೇಸ್​ಬುಕ್​, ವಾಟ್ಸ್​ಆ್ಯಪ್​ ಬಳಕೆದಾರರ ಗಮನಕ್ಕೆ: ಈ ಆ್ಯಪ್​ಗಳನ್ನು ಬಳಸಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಕದಿಯಲಾಗುತ್ತಿದೆ..!
ಸಾಂದರ್ಭಿಕ ಚಿತ್ರ
zahir | news18
Updated: January 9, 2019, 4:13 PM IST
ಸಾಮಾಜಿಕ ಜಾಲತಾಣದ ಮೂಲಕ ಹ್ಯಾಕರುಗಳು ಬಳಕೆದಾರರ ಮಾಹಿತಿಗಳನ್ನು ಕದಿಯುತ್ತಿದ್ದಾರೆಂಬ ಸುದ್ದಿಗಳು ಕಳೆದು ಐದಾರು ತಿಂಗಳುಗಳಿಂದ ಆಗಾಗ್ಗೆ ಕೇಳಿ ಬರುತ್ತಿದೆ. ಇಂತಹ ಸೈಬರ್ ದಾಳಿಗೆ ಸೋಷಿಯಲ್ ಮೀಡಿಯಾದ ದೈತ್ಯ ಕಂಪೆನಿ ಫೇಸ್​ಬುಕ್​ ಒಳಗಾದಾಗ ಭಾರೀ ಸುದ್ದಿಯಾಗಿತ್ತು. ಇಲ್ಲಿ ಫೇಸ್​ಬುಕ್​ನ 5 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿ ತನ್ನಲ್ಲಿರುವುದಾಗಿ ಡಾರ್ಕ್​ ವೆಬ್​ವೊಂದು ಹೇಳಿಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ಅನೇಕ ಕಂಪೆನಿಗಳು ಹ್ಯಾಕಿಂಗ್​ ಅನ್ನು ತಡೆಗಟ್ಟುವಲ್ಲಿ ಗಮನಹರಿಸಿದೆ.

ಆದರೆ ಭಾರತ ಸೇರಿದಂತೆ 200 ಕ್ಕೂ ಹೆಚ್ಚು ದೇಶಗಳ ವಾಟ್ಸ್​ಆ್ಯಪ್​, ಫೇಸ್​ಬುಕ್​ ಮತ್ತು ಸ್ನಾಪ್​ಚಾಟ್​ ಬಳಕೆದಾರರ ಮಾಹಿತಿಗಳು ಸೋರಿಕೆಯಾಗುತ್ತಿದೆ ಎಂಬ ಅಚ್ಚರಿಯ ಮಾಹಿತಿಯೊಂದು ಇದೀಗ ಹೊರ ಬಿದ್ದಿದೆ. ಇದಕ್ಕಾಗಿ ಹ್ಯಾಕರುಗಳು ಗೂಗಲ್ ಪ್ಲೇಸ್ಟೋರ್​​ನಲ್ಲಿ 6 ಆ್ಯಪ್​ಗಳನ್ನು ನೀಡಿದ್ದು, ಈ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡಿಕೊಂಡಿರುವ ಬಳಕೆದಾರರ ಡೇಟಾಗಳು ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎಲ್ಲಕ್ಕಿಂತ ಅಚ್ಚರಿ ಎಂದರೆ ಈ ಆ್ಯಪ್​ಗಳನ್ನು 1 ಲಕ್ಷಕ್ಕೂ ಅಧಿಕ ಮಂದಿ ಈಗಾಗಲೇ ಡೌನ್​ಲೋಡ್​ ಮಾಡಿಕೊಂಡಿದ್ದಾರೆ.

ಟ್ರೆಂಡ್​ ಮೈಕ್ರೋ ಸೆಕ್ಯುರಿಟಿ ರಿಸರ್ಚ್​ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಇಂತಹ 6 ಸ್ಪೈವೇರ್​ಗಳನ್ನು ಪತ್ತೆ ಹಚ್ಚಲಾಗಿದೆ. 'ANDROIDS_MOBSTSPY'ಎಂದು ಹೇಳಲಾಗಿರುವ ಈ ಆ್ಯಪ್​ಗಳನ್ನು ಪ್ಲೇಸ್ಟೋರ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಗೇಮ್​ ಆ್ಯಪ್, ಇತರೆ ಆ್ಯಪ್​ಗಳಂತೆ ಕಾರ್ಯ ನಿರ್ವಹಿಸುವ ಈ ಅಪ್ಲಿಕೇಶನ್​ ಬಳಸಿ ಬಳಕೆದಾರರ ಡೇಟಾ ಹ್ಯಾಕಿಂಗ್​ ಮಾಡಲಾಗುತ್ತಿದೆ.

ಟ್ರೆಂಡ್​ ಮೈಕ್ರೋ ಸೆಕ್ಯುರಿಟಿ ರಿಸರ್ಚ್​ ತಿಳಿಸಿರುವ ಸ್ಪೈವೇರ್​ ಆ್ಯಪ್​ಗಳು:

Flappy
Birr
Flappy Birr Dog
Loading...

Flashlight
HZPermis Pro Arabe
Win7Simulator
WinLauncher

ಡೇಟಾ ಟ್ರಾಕ್ ಹೇಗೆ ?
ಬಳಕೆದಾರರು ​ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿ ಇನ್​ಸ್ಟಾಲ್​ ಮಾಡಿಕೊಂಡರೆ, ಸ್ಪೈವೇರ್​​ ಇಂಟರ್ನೆಟ್​ ಕನೆಕ್ಷನ್​ನ್ನು ಹ್ಯಾಕ್ ಮಾಡಿ ನಿಮ್ಮ ಕಾಮಂಡ್ ಮತ್ತು ಕಂಟ್ರೋಲ್ ಸರ್ವರ್​ನ್ನು ಸಂಪರ್ಕಿಸುತ್ತದೆ. ಇದರ ನಂತರ ನಿಮ್ಮ ಡಿವೈಸ್​ನ ಸಮಾನ್ಯ ಮಾಹಿತಿಗಳನ್ನು ಸುಲಭವಾಗಿ ಹ್ಯಾಕ್​ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ನಿಮ್ಮ ಮತ್ತಷ್ಟು ಮಾಹಿತಿಗಳನ್ನು ತಿಳಿಯಲು ಭಾಷೆ, ದೇಶ ಸೇರಿದಂತೆ ಹಲವು ವಿವರಗಳ ಸುಳ್ಳು ನೋಟಿಫಿಕೇಶನ್​ಗಳನ್ನು ಕಳುಹಿಸಲಾಗುತ್ತದೆ.

ಎಲ್ಲಾ ಮಾಹಿತಿಗಳು ಸೋರಿಕೆ!
ಸಂಶೋಧಕರ ಪ್ರಕಾರ, ಈ ಸ್ಪೈವೇರ​ ಆ್ಯಪ್​ಗಳ ಮೂಲಕ ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಗಳನ್ನು ಕಲೆಹಾಕಬಹುದಂತೆ. ಹ್ಯಾಕರುಗಳು ನಿಮ್ಮ ಕರೆಯ ದಾಖಲೆ, ಸಂಪರ್ಕ, ವೈಯುಕ್ತಿಕ ಸಂದೇಶ, ಆಡಿಯೋ, ವೀಡಿಯೊ ಫೈಲ್​ಗಳನ್ನು ಮತ್ತು ಫೋಟೋಗಳನ್ನು ಹ್ಯಾಕ್​ ಮಾಡುತ್ತಾರೆ. ಹಾಗೆಯೇ ನಿಮ್ಮ ಮೊಬೈಲ್​ನಲ್ಲಿರುವ ಆ್ಯಪ್​ಗಳನ್ನು ಹ್ಯಾಕ್ ಮಾಡಿ ಡೇಟಾಗಳನ್ನು ಸಂಗ್ರಹಿಸುತ್ತಾರೆ. ಈ ಸಂಶೋಧನೆಯಿಂದ ವಾಟ್ಸ್​ಆ್ಯಪ್​, ಫೇಸ್​ಬುಕ್​ ಮತ್ತು ಸ್ನಾಪ್​ಚಾಟ್​ ಆ್ಯಪ್​ಗಳ ಡೇಟಾಗಳು ಸೋರಿಕೆಯಾಗಿರುವುದು ಪತ್ತೆಯಾಗಿದೆ.

ಗೂಗಲ್​ ಬ್ಲಾಕ್
ಗೂಗಲ್​ ಪ್ಲೇಸ್ಟೋರ್​ನಲ್ಲಿ ಈ ಸ್ಪೈವೇರ್​ ಆ್ಯಪ್​ಗಳಿವೆ ಎಂಬ ಮಾಹಿತಿಗಳು ಹೊರ ಬಿದ್ದ ಬೆನ್ನಲ್ಲೇ ಗೂಗಲ್ ಸಂಸ್ಥೆ ಈ ಆರು ಆ್ಯಪ್​ಗಳನ್ನು ತೆಗೆದುಹಾಕಿದೆ. ಅಲ್ಲದೆ ಈ ಮೂಲಕ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂಬುದರ ಬಗ್ಗೆ ಗೂಗಲ್ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ