ಗೂಗಲ್​ 'ಆ್ಯಂಡ್ರಾಯ್ಡ್​​ 9 ಪೈ' ಕುರಿತು ನಿಮಗೆಷ್ಟು ಗೊತ್ತು?


Updated:August 7, 2018, 5:46 PM IST
ಗೂಗಲ್​ 'ಆ್ಯಂಡ್ರಾಯ್ಡ್​​ 9 ಪೈ' ಕುರಿತು ನಿಮಗೆಷ್ಟು ಗೊತ್ತು?

Updated: August 7, 2018, 5:46 PM IST
ಗೂಗಲ್​ ತನ್ನ ನೂನತ ಆಪರೇಟಿಂಗ್​ ಸಿಸ್ಟಂನ್ನು ಮಾರುಕಟ್ಟೆಗೆ ಬಿಡಲು ತುದಿಗಾಲಲ್ಲಿ ನಿಂತಿದ್ದು, ಇದರ ಮೊದಲ ಅಪ್​ಡೇಟ್​ ಗೂಗಲ್​ ಪಿಕ್ಸೆಲ್​ ಮೊಬೈಲ್​ಗಳಿಗೆ ದೊರಕಲಿದೆ.

ಆ್ಯಂಡ್ರಾಯ್ಡ್​ 8.0 ಓರಿಯೋ ಆಪರೇಟಿಂಗ್​ ಸಿಸ್ಟಂಗ್​ ಬಳಿಕ ನೂತನವಾಗಿ ಅಪ್​ಡೇಟ್​ ಮಾಡಿರುವ ಆ್ಯಂಡ್ರಾಯ್ಡ್​​ 9 ಪೈ, ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಹೊಂದಿದೆ. ಕೇವಲ ಎಐ ತಂತ್ರಜ್ಞಾನ ಮಾತ್ರವಲ್ಲದೇ ಲುಕ್​ನಲ್ಲೂ ಗೂಗಲ್​ ಮಾರ್ಪಾಡು ಮಾಡಿದೆ. ಸ್ಮಾರ್ಟ್​ಫೋನ್​ ಇತಿಹಾಸದಲ್ಲೇ ಬಲಿಷ್ಠ ಹಾಗೂ ಅತ್ಯಂತ ಹೆಚ್ಚು ಭದ್ರತೆಯನ್ನು ಒಳಗೊಂಡಿರುವ ಒಎಸ್​ ಇದಾಗಿದೆ.

ಈಗಾಗಲೇ ಮೊಟ್ಟ ಮೊದಲನೇಯದಾಗಿ ಗೂಗಲ್​ ಪಿಕ್ಸಲ್​ ಶ್ರೇಣಿಯ ಎಲ್ಲಾ ಮೊಬೈಲ್​ಗಳಿಗೂ ಈ ಅಪ್​ಡೇಟ್​ ಲಭಿಸಿದೆ. ಪಿಕ್ಸೆಲ್, ಪಿಕ್ಸೆಲ್ ಎಕ್ಸ್ಎಲ್, ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಮೊಬೈಲ್​ಗಳಿಗೂ ಈ ಅಪ್​ಡೇಟ್​ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಸೋನಿ ಮೊಬೈಲ್, ಶಿಯೋಮಿ, ಹೆಚ್​ಎಂಡಿ ಗ್ಲೋಬಲ್, ಒಪ್ಪೋ, ವಿವೊ, ಒನ್​ಪ್ಲಸ್​, ಮತ್ತು ಎಲ್ಲಾ ಆ್ಯಂಡ್ರಾಯ್ಡ್​​ ಒನ್​ ಒಎಸ್​ನ ಮೊಬೈಲ್​ಗಳಿಗೆ ಈ ಅಪ್​ಡೇಟ್​ ಲಭ್ಯವಿರಲಿದೆ.

ಬ್ಯಾಟರಿ ಕುರಿತು ಹೆಚ್ಚು ನಿಗಾ ಇಟ್ಟಿರುವ ಗೂಗಲ್​, ಈ ಅಪ್​ಡೇಟ್​ನಲ್ಲಿ ಪಾರಂಪರಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಮೂರು ಗೆರೆ​ಗಳನ್ನು ಹೊಂದಿರುವ ಬ್ಯಾಟರಿ ಸಂಕೇತವನ್ನು ತೆಗೆದು ಹಾಕಲಾಗಿದ್ದು, ಆ್ಯಪಲ್​ ಐಫೋನ್​ ಎಕ್ಸ್​ನಲ್ಲಿ ಕಾಣಿಸಿಕೊಳ್ಳುವ ಮಾದರಿಯನ್ನೇ ಇಲ್ಲಿ ಬಳಕೆ ಮಾಡಲಾಗಿದೆ. 9 ಪೈ ನಿಮ್ಮ ಆ್ಯಪ್​ಗಳನ್ನು ಎಷ್ಟು ಗಂಟೆಗಳ ಕಾಲ ಬಳಕೆ ಮಾಡಿದ್ದೀರಿ ಎಂಬ ಅಪ್​ಡೇಟ್​ನ್ನು ಕೂಡಾ ನೀಡುತ್ತದೆ.

ನಾವು ಬಳಕೆ ಮಾಡುವ ಆ್ಯಪ್​ನ ಸಮಯವನ್ನು ತಿಳಿಯುವುದರಿಂದ ನಮ್ಮನ್ನು ನಾವೇ ನಿಯಂತ್ತಿಸಿಕೊಳ್ಳಬಹುದು. ಯಾವ ಪ್ರಮಾಣದಲ್ಲಿ ಆ್ಯಪ್​ ಬಳಕೆಯಾಗುತ್ತದೆ, ಎಷ್ಟು ಸಮಯ ನಾವು ವ್ಯಯಿಸಿದ್ದೇವೆ ಎಂಬುದರ ಸಂಪೂರ್ಣ ಮಾಹಿತಿಯಿಂದ ಬ್ಯಾಟರಿ ವ್ಯಯ ವಾಗುವುದನ್ನೂ ತಡೆಯಬಹುದು ಎಂದು ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ಸಮೀರ್​ ಸಮತ್​ ಹೇಳಿದ್ದಾರೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...